twitter
    For Quick Alerts
    ALLOW NOTIFICATIONS  
    For Daily Alerts

    2 ತಿಂಗಳ ಬಳಿಕ ಚಿತ್ರಮಂದಿರಗಳು ರಿ-ಓಪನ್: ಸುರಕ್ಷತೆ ಕ್ರಮ ಪಾಲನೆ ಕಡ್ಡಾಯ

    |

    ಕಿಲ್ಲರ್ ಕೊರೊನಾ ವೈರಸ್ ಹಾವಳಿಯಿಂದ ಇಡೀ ವಿಶ್ವವೆ ಸ್ತಬ್ಧವಾಗಿದೆ. ದಿನದಿಂದದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಅನೇಕ ದೇಶಗಳು ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮನರಂಜನ ಕ್ಷೇತ್ರಕ್ಕು ಕೊಂಚ ರಿಲೀಫ್ ಸಿಕ್ಕಿದ್ದು, ಚಿತ್ರಮಂದಿರಗಳು ಸಹ ರಿ ಓಪನ್ ಆಗುತ್ತಿವೆ.

    Recommended Video

    ಮೊದಲು ಕೊರೊನಾಗೆ ಹೆದರಿಸಿ ನಂತರ ತಾನೇ ಹೆದರಿದ ನಟ ನವೀನ್ ಕೃಷ್ಣ | Naveen Krishna | Stay Home stay safe

    ದುಬೈನಲ್ಲಿ ಚಿತ್ರಮಂದಿರಗಳನ್ನು ತೆರೆಯಲಾಗುತ್ತಿದೆ. ಸುರಕ್ಷತೆ ನಿಯಮದ ಮೇರೆಗೆ ಚಿತ್ರಮಂದಿರಗಳು ಓಪನ್ ಆಗುತ್ತಿವೆ. ತಿಂಗಳುಗಳಿಂದ ಮುಚ್ಚಿದ ಚಿತ್ರಮಂದಿರಗಳು ಈಗ ತೆರೆಯುತ್ತಿರುವುದರಿಂದ ಮನರಂಜನ ಕ್ಷೇತ್ರ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

    ಲಾಕ್ ಡೌನ್ ಮುಗಿದ ನಂತರ ಚಿತ್ರಮಂದಿರಗಳ ಪರಿಸ್ಥಿತಿ ಏನು? ಕೋಟಿ ನಷ್ಟದ ಬಗ್ಗೆ ಪ್ರದರ್ಶಕರು ಹೇಳುವುದೇನು?ಲಾಕ್ ಡೌನ್ ಮುಗಿದ ನಂತರ ಚಿತ್ರಮಂದಿರಗಳ ಪರಿಸ್ಥಿತಿ ಏನು? ಕೋಟಿ ನಷ್ಟದ ಬಗ್ಗೆ ಪ್ರದರ್ಶಕರು ಹೇಳುವುದೇನು?

    ಮೇ 27ರಿಂದ ದುಬೈನಲ್ಲಿ ವ್ಯಾಪಾರ ಚಟುವಟಿಕೆಗೆಳು ಪ್ರಾರಂಭವಾಗುತ್ತಿವೆ. ಇದರಲ್ಲಿ ಮನರಂಜನೆ ಕ್ಷೇತ್ರದ ಕೇಂದ್ರಬಿಂದುವಾಗಿರುವ ಚಿತ್ರಮಂದಿರಗಳು ಸಹ ಓಪನ್ ಆಗುತ್ತಿರುವುದು ವಿಶೇಷ. ಬೆಳಗ್ಗೆ 6ರಿಂದ ರಾತ್ರಿ 11 ರವರೆಗೆ ದುಬೈನಲ್ಲಿ ಯಾವುದೆ ನಿರ್ಬಂಧವಿರುವುದಿಲ್ಲ.

    Film Theaters Reopening In Dubai With Limited Capacity

    ಚಿತ್ರಮಂದಿರಗಳನ್ನು ತೆರೆಯಲು ಅನುಸರಿಸಬೇಕಾದ ಸುರಕ್ಷತೆ ಕ್ರಮಗಳು

    1. ಚಿತ್ರಮಂದಿರದ ಒಳಗೆ ಪ್ರವೇಶಿಸವ ಮೊದಲು ವೀಕ್ಷಕರ ಟೆಂಪ್ರೇಚರ್ ಪರೀಕ್ಷೆ

    2. ಮಾಸ್ಕ್ ಧರಿಸುವುದು ಖಡ್ಡಾಯ

    3. ಸ್ಯಾನಿಟೈಸರ್ ಬಳಕೆ ಖಡ್ಡಾಯ

    4.ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್

    5. ಸಾಮಾಜಿಕ ಅಂತಕ ಕಾಯ್ದುಕೊಳ್ಳುವುದು

    6. ಕುಟುಂಬದಲ್ಲಿ 4 ಜನರಿಗೆ ಒಟ್ಟಿಗೆ ಕುಳಿತುಕೊಳ್ಳಲು ಅನುಮತಿ

    7. ಕ್ಯೂನಲ್ಲಿ ಸಾಮಾಜಿಕ ಅಂತರ

    8. 12 ವರ್ಷದೊಳಗಿನ ಮಕ್ಕಳು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರವೇಶವಿಲ್ಲ.

    9. 30ರಷ್ಟು ಸೀಟ್ ಗಳಿಗೆ ಮಾತ್ರ ಅನುಮತಿ

    ಇನ್ನೂ ಸಾಕಷ್ಟು ಸುರಕ್ಷತ ಕ್ರಮಗಳೊಂದಿದೆ ಚಿತ್ರಮಂದಿರಗಳು ಮತ್ತೆ ತೆರೆಯುತ್ತಿವೆ. ವಿಶೇಷ ಅಂದರೆ ದುಬೈನಲ್ಲಿ ನಾಲ್ಕು ಸಿನಿಮಾಗಳು ಮೊದಲು ಪ್ರದರ್ಶನವಾಗುತ್ತಿವೆ. ಹಿಂದಿಯ ಆಂಗ್ರೇಜಿ ಮೀಡಿಯಂ, ಬ್ಯಾಡ್ ಬಾಯ್ಸ್ ಫಾರ್ ಲೈಫ್, ದಿ ಇನ್ ವಿಸಿಬಲ್ ಮ್ಯಾನ್, ಬ್ಲಡ್ ಶೂಟ್ ಸಿನಿಮಾಗಳು ರಿ ಓಪನ್ ದಿನ ಪ್ರದರ್ಶನಗೊಳ್ಳುತ್ತಿವೆ.

    English summary
    Film Theaters reopening in Dubai with limited capacity. Theatres will must be following safety regulations.
    Wednesday, May 27, 2020, 7:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X