»   » 'ಫಿಲ್ಮ್ ಫೇರ್' ಕನ್ನಡ ವಿಭಾಗದಲ್ಲಿ ಯಾರಿಗೆ, ಯಾವ ಚಿತ್ರಕ್ಕೆ ಪ್ರಶಸ್ತಿ!

'ಫಿಲ್ಮ್ ಫೇರ್' ಕನ್ನಡ ವಿಭಾಗದಲ್ಲಿ ಯಾರಿಗೆ, ಯಾವ ಚಿತ್ರಕ್ಕೆ ಪ್ರಶಸ್ತಿ!

Posted By:
Subscribe to Filmibeat Kannada

64ನೇ ಸಾಲಿನ ಫಿಲ್ಮ್ ಫೇರ್ ಪ್ರಶಸ್ತಿಗೆ ಕ್ಷಣಗಣನೆ ಶುರುವಾಗಿದ್ದು, ಪ್ರಶಸ್ತಿಗಾಗಿ ಹಲವು ಚಿತ್ರಗಳು, ನಟ-ನಟಿಯರು ರೇಸ್ ನಲ್ಲಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲು, ಅಂದ್ರೆ ತೆಲುಗು, ತಮಿಳು, ಮಲಯಾಳಂಗಳಲ್ಲಿ ಪ್ರಶಸ್ತಿಗಾಗಿ ಹಲವು ಚಿತ್ರಗಳು ಸ್ಪರ್ಧಿಸಿವೆ.

ತಮಿಳಿನಲ್ಲಿ 'ಥೇರಿ' ಚಿತ್ರಕ್ಕಾಗಿ ವಿಜಯ್ ಮತ್ತು 'ಕಬಾಲಿ' ಚಿತ್ರಕ್ಕಾಗಿ ರಜನಿಕಾಂತ್ ನಾಯಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ತೆಲುಗಿನಲ್ಲಿ 'ಸರೈನೋಡು' ಚಿತ್ರದ ಅಭಿನಯಕ್ಕಾಗಿ ಅಲ್ಲು ಅರ್ಜುನ್ ಮತ್ತು 'ಜೆಂಟಲ್ ಮ್ಯಾನ್' ಚಿತ್ರದ ಅಭಿನಯಕ್ಕಾಗಿ 'ನಾನಿ' ನಾಯಕರ ರೇಸ್ ನಲ್ಲಿ ಪೈಪೋಟಿ ನಡೆಸುತ್ತಿದ್ದಾರೆ.

ಹಾಗಾದ್ರೆ, ಕನ್ನಡದಲ್ಲಿ ಯಾವ ನಟರು ಮತ್ತು ಯಾವ ಚಿತ್ರಗಳು ನಾಮಿನೇಟ್ ಆಗಿವೆ ಎಂದು ತಿಳಿದುಕೊಳ್ಳಬೇಕಾ? 2017ನೇ ಸಾಲಿನ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿರುವ ಕನ್ನಡ ಚಿತ್ರಗಳ ಸಂಪೂರ್ಣ ಪಟ್ಟಿ ಮುಂದಿದೆ ನೋಡಿ.....

ಅತ್ಯುತ್ತಮ ಕನ್ನಡ ಚಿತ್ರ

ಗೋಧಿ ಬಣ್ಣ ಸಾಧಾರಣ ಮೈಕಟ್ಟು

ತಿಥಿ

ಲಾಸ್ಟ್ ಬಸ್‌

ರಾಮಾ ರಾಮಾ ರೇ

ಯು-ಟರ್ನ್‌

ಅತ್ಯುತ್ತಮ ಕನ್ನಡ ನಿರ್ದೇಶಕ

ಹೇಮಂತ್‌ ರಾವ್‌ (ಗೋಧಿ ಬಣ್ಣ ಸಾಧಾರಣ ಮೈಕಟ್ಟು ),

ನರೇಂದ್ರ ಬಾಬು (ಸಂತೆಯಲ್ಲಿ ನಿಂತ ಕಬೀರ್),

ಪವನ್‌ ಕುಮಾರ್ (ಯು-ಟರ್ನ್‌)

ರಿಷಬ್ ಶೆಟ್ಟಿ (ಕಿರಿಕ್‌ ಪಾರ್ಟಿ)

ಸುಮನ್‌ ಕಿತ್ತೂರ್ (ಕಿರಗೂರಿನ ಗೈಯಾಳಿಗಳು)

ಅತ್ಯುತ್ತಮ ಕನ್ನಡದ ನಟ

ಅನಂತನಾಗ್‌ (ಗೋಧಿ ಬಣ್ಣ ಸಾಧಾರಣ ಮೈಕಟ್ಟು )

ಪುನೀತ್‌ ರಾಜಕುಮಾರ್‌ (ದೊಡ್ಮನೆ ಹುಡುಗ)

ರಕ್ಷಿತ್ ಶೆಟ್ಟಿ (ಕಿರಿಕ್‌ ಪಾರ್ಟಿ)

ಶಿವರಾಜಕುಮಾರ್‌ (ಸಂತೆಯಲ್ಲಿ ನಿಂತ ಕಬೀರ್‌)

ಸುದೀಪ್‌ (ಕೋಟಿಗೊಬ್ಬ-2)

ಅತ್ಯುತ್ತಮ ಕನ್ನಡದ ನಟಿ

ಹರಿಪ್ರಿಯಾ (ನೀರ್ ದೋಸೆ)

ಶೃತಿ ಹರಿಹರನ್ (ಗೋಧಿ ಬಣ್ಣ ಸಾಧಾರಣ ಮೈಕಟ್ಟು)

ಪಾರೂಲ್ ಯಾದವ್‌ (ಕಿಲ್ಲಿಂಗ್ ವೀರಪ್ಪನ್)

ಶ್ರದ್ಧಾ ಶ್ರೀನಾಥ್‌ (ಯು-ಟರ್ನ್‌)

ಶ್ವೇತಾ ಶ್ರಿವಾಸ್ತವ (ಕಿರಗೂರಿನ ಗಯ್ಯಾಳಿಗಳು)

ಅತ್ಯುತ್ತಮ ಕನ್ನಡ ಸಂಗೀತ ನಿರ್ದೇಶಕ

ಅಜನೀಶ್ ಲೋಕನಾಥ್ (ಕಿರಿಕ್ ಪಾರ್ಟಿ)

ಅನೂಪ್ ಸೀಳಿನ್ (ನೀರ್ ದೋಸೆ)

ಅರ್ಜುನ್ ಜನ್ಯ (ಮುಂಗಾರು ಮಳೆ-2)

ಚರಣ್ ರಾಜ್ (ಗೋಧಿ ಬಣ್ಣ ಸಾಧಾರಣ ಮೈಕಟ್ಟು)

ವಿ.ಹರಿಕೃಷ್ಣ (ದೊಡ್ಮನೆ ಹುಡುಗ)

ಅತ್ಯುತ್ತಮ ಕನ್ನಡ ಪೋಷಕ ನಟ

ಅಚ್ಯುತ್ ಕುಮಾರ್ (ಕಿರಗೂರಿನ ಗಯ್ಯಾಳಿಗಳು)

ದತ್ತಣ್ಣ (ನೀರ್ ದೋಸೆ)

ರೋಜರ್ ನಾರಾಯಣ್ (ಯು-ಟರ್ನ್)

ಸಾಧುಕೋಕಿಲಾ (ಜೂಮ್)

ವಸಿಷ್ಠ ಸಿಂಹ (ಗೋಧಿ ಬಣ್ಣ ಸಾಧಾರಣ ಮೈಕಟ್ಟು)

ಅತ್ಯುತ್ತಮ ಕನ್ನಡ ಪೋಷಕ ನಟಿ

ಐಂದ್ರಿತಾ ರೇ (ನಿರುತ್ತರ)

ಮೇಘಶ್ರೀ ಭಾಗವತರ್ (ಲಾಸ್ಟ್ ಬಸ್)

ಸಂಯುಕ್ತ ಹೆಗಡೆ (ಕಿರಿಕ್ ಪಾರ್ಟಿ)

ಸೋನು ಗೌಡ (ಕಿರಗೂರಿನ ಗಯ್ಯಾಳಿಗಳು)

ಸುಮನ್ ರಂಗನಾಥ್ (ನೀರ್ ದೋಸೆ)

ಅತ್ಯುತ್ತಮ ಹಿನ್ನಲೆ ಗಾಯಕ

ಅನೂಪ್ ಸೀಳಿನ್ (ಅಲ್ಲಾ ಅಲ್ಲಾ-ನಟರಾಜ್ ಸರ್ವೀಸ್)

ಪುನೀತ್ ರಾಜ್ ಕುಮಾರ್ (ಜನಕ್ ಜನಕ್-ರನ್ ಆಂಟನಿ)

ಸಂತೋಷ್ ವೆಂಕಿ ( ಮಂದಾರ ಮಂದಾರ-ಜೈ ಮಾರುತಿ 800)

ಶಂಕರ್ ಮಹದೇವನ್ (ಮುಕುಂದಾ ಮುರಾರಿ-ಮುಕುಂದಾ ಮುರಾರಿ)

ವಿಜಯ ಪ್ರಕಾಶ್ (ಬೆಳಗೆದ್ದು ಯಾರ ಮುಖವ-ಕಿರಿಕ್ ಪಾರ್ಟಿ)

ಅತ್ಯುತ್ತಮ ಹಿನ್ನಲೆ ಗಾಯಕಿ

ಅನನ್ಯ ಭಟ್ (ನಮ್ಮ ಕಾಯೋ ದೇವರೇ-ರಾಮಾ ರಾಮಾ ರೇ)

ಅನುರಾಧ ಭಟ್ (ಯಾವೂರ ಗೆಳಯ-ರಿಕ್ಕಿ)

ಇಂದು ನಾಗರಾಜ್ (ಥ್ರಾಸ್ ಆಗ್ತೈತಿ-ದೊಡ್ಮನೆ ಹುಡ್ಗ)

ಶ್ರೇಯಾ ಘೋಷಲ್ (ನೀನಿರೆ ಸನಿಹ-ಕಿರಿಕ್ ಪಾರ್ಟಿ)

ವಾಣಿ ಹರಿಕೃಷ್ಣ (ನೀನಗಾಗಿ ಹೇಳಲಿಲ್ಲ)

English summary
Filmfare Awards South 2017, the annual award show that honours South Indian movies in Kannada, Tamil, Telugu and Malayalam languages, has announced the list of contenders battling it out for the top prize.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada