twitter
    For Quick Alerts
    ALLOW NOTIFICATIONS  
    For Daily Alerts

    ಸೈಮಾ ನಂತರ ಇದೇ ತಿಂಗಳು ಮತ್ತೊಂದು ಮೆಗಾ ಅವಾರ್ಡ್ ಕಾರ್ಯಕ್ರಮ ಬೆಂಗಳೂರಿನಲ್ಲಿ; 58 ವರ್ಷದಲ್ಲಿ ಇದೇ ಮೊದಲು!

    |

    ಕರ್ನಾಟಕದಲ್ಲಿ ಮೆಗಾ ಅವಾರ್ಡ್ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂಬ ಮಾತಿತ್ತು. ಮಾತೇನು ಅದು ಸತ್ಯ ಕೂಡ ಆಗಿತ್ತು. ಆದರೆ ಇದಕ್ಕೆ ಇತ್ತೀಚೆಗಷ್ಟೆ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ಅಂತ್ಯ ಹಾಡಿತ್ತು. ಕಳೆದ ಶನಿವಾರ ಹಾಗೂ ಭಾನುವಾರ ಬೆಂಗಳೂರಿನ ಪ್ಯಾಲೆಸ್ ಮೈದಾನದಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ಮೊದಲ ಬಾರಿಗೆ ಸೈಮಾ ಅವಾರ್ಡ್ ಪಡೆಯಲು ತೆಲುಗು, ತಮಿಳು ಹಾಗೂ ಮಲಯಾಳಂನ ಕಲಾವಿದರು ಬೆಂಗಳೂರಿಗೆ ಬಂದಿಳಿದಿದ್ದರು.

    ಹೀಗೆ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಆಯೋಜನೆ ಆದದ್ದರ ಕುರಿತು ಸಾಕಷ್ಟು ಚರ್ಚೆಗಳು ಆರಂಭವಾದವು. ಇನ್ನು ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್ ಈ ಬಾರಿಯ ಸೈಮಾ ಅವಾರ್ಡ್ಸ್ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿಯೇ ಆಯೋಜಿಸಲು ಪ್ರಮುಖ ಕಾರಣ ನಟ ಪುನೀತ್ ರಾಜ್‌ಕುಮಾರ್ ಎಂದಿದ್ದರು. ಪುನೀತ್ ಅಗಲಿಕೆ ಅಪಾರ ನೋವು ತಂದಿದ್ದು, ಅವರ ನೆನಪಿನಲ್ಲಿ ಅವರ ಗೌರವ ಸಲ್ಲಿಸಲು ಈ ಬಾರಿಯ ಸೈಮಾವನ್ನು ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಿದ್ದೇವೆ ಎಂದಿದ್ದರು. ಹಾಗೂ ಇದಕ್ಕೆ ಎರಡನೇ ಕಾರಣವನ್ನೂ ನೀಡಿದ ಬೃಂದಾ ಪ್ರಸಾದ್ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಬೆಂಗಳೂರಿನಲ್ಲಿ ಸೈಮಾ ನಡೆಸಲು ಕಾರಣ ಎಂದರು.

    ಸಾಯಿ ಪಲ್ಲವಿಗೆ ಸಿಗಬೇಕಿದ್ದ ಸೈಮಾ ಅವಾರ್ಡ್ ಪೂಜಾಗೆ ಸಿಕ್ತಾ? ದುಡ್ಡು ಕೊಟ್ಟು ಅವಾರ್ಡ್ ತಗೊಂಡ್ರಾ ಕರಾವಳಿ ಚೆಲುವೆ?ಸಾಯಿ ಪಲ್ಲವಿಗೆ ಸಿಗಬೇಕಿದ್ದ ಸೈಮಾ ಅವಾರ್ಡ್ ಪೂಜಾಗೆ ಸಿಕ್ತಾ? ದುಡ್ಡು ಕೊಟ್ಟು ಅವಾರ್ಡ್ ತಗೊಂಡ್ರಾ ಕರಾವಳಿ ಚೆಲುವೆ?

    ಹೀಗೆ ಸೈಮಾ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ಬೆನ್ನಲ್ಲೇ ಮತ್ತೊಂದು ಕಾರ್ಯಕ್ರಮ ಬೆಂಗಳೂರಿನಲ್ಲೇ ಜರುಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೌದು, ಮತ್ತೊಂದು ಮೆಗಾ ಅವಾರ್ಡ್ ಕಾರ್ಯಕ್ರಮ ಬೆಂಗಳೂರಿನಲ್ಲೇ ನಡೆಯಲಿದೆ ಎನ್ನಲಾಗುತ್ತಿದ್ದು, ಇದು ಸೈಮಾಗಿಂತ ದೊಡ್ಡ ಇತಿಹಾಸ ಮತ್ತು ಗೌರವವನ್ನು ಹೊಂದಿರುವಂತ ಪ್ರಶಸ್ತಿಯಾಗಿದೆ.

    ಸೈಮಾ ನಂತರ ಬೆಂಗಳೂರಿಗೆ ಫಿಲ್ಮ್‌ಫೇರ್

    ಸೈಮಾ ನಂತರ ಬೆಂಗಳೂರಿಗೆ ಫಿಲ್ಮ್‌ಫೇರ್

    ಫಿಲ್ಮ್‌ಫೇರ್ ಪ್ರತಿಯೊಬ್ಬ ಸಿನಿ ಕಲಾವಿದ ಪಡೆಯಬೇಕೆಂದು ಬಯಸುವ ಪ್ರಶಸ್ತಿಯಾಗಿದೆ. ಬ್ಲಾಕ್ ಲೇಡಿಗೆ ಮುತ್ತಿಕ್ಕಿ ತನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂಬ ಖುಷಿ ಅನುಭವಿಸಲು ಇಚ್ಛಿಸುತ್ತಾರೆ ನಟ ನಟಿಯರು. ಇಂಥ ಬೃಹತ್ ಅವಾರ್ಡ್ ಕಾರ್ಯಕ್ರಮ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಇದೇ ತಿಂಗಳ 18ರಂದು ಫಿಲ್ಮ್‌ಫೇರ್ ಸೌತ್ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂಬ ಪೋಸ್ಟರ್ ಒಂದು ಬಿಡುಗಡೆಯಾಗಿದೆ.

    58 ವರ್ಷಗಳಲ್ಲಿ ಕರ್ನಾಟಕಕ್ಕೆ ಇದೇ ಮೊದಲು

    58 ವರ್ಷಗಳಲ್ಲಿ ಕರ್ನಾಟಕಕ್ಕೆ ಇದೇ ಮೊದಲು

    ಈ ಫಿಲ್ಮ್‌ಫೇರ್ ಮೊದಲಿಗೆ 1954ರಲ್ಲಿ ಆರಂಭವಾಯಿತು ಹಾಗೂ 1964ರಿಂದ ಹಿಂದಿಗೆ ಬೇರೆ ಹಾಗೂ ದಕ್ಷಿಣ ಭಾರತದ ಚಿತ್ರಗಳಿಗೆ ಬೇರೆ ಅವಾರ್ಡ್ ವಿತರಣೆಯನ್ನು ಆರಂಭಿಸಲಾಯಿತು. ಹೀಗೆ 1964ರಿಂದ ನಡೆಯುತ್ತಿರುವ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ಇಲ್ಲಿಯವರೆಗೂ ಒಮ್ಮೆಯೂ ಕರ್ನಾಟಕದಲ್ಲಿ ಆಯೋಜನೆಗೊಂಡೇ ಇರಲಿಲ್ಲ. ಆದರೆ ಬರೋಬ್ಬರಿ 58 ವರ್ಷಗಳ ನಂತರ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿದೆ.

    ಕನ್ನಡ ಸೇರ್ಪಡೆಗೊಂಡದ್ದು 1970ರಲ್ಲಿ

    ಕನ್ನಡ ಸೇರ್ಪಡೆಗೊಂಡದ್ದು 1970ರಲ್ಲಿ

    ಇನ್ನು 1954ರಲ್ಲಿ ಆರಂಭಗೊಂಡಿದ್ದ ಫಿಲ್ಮ್‌ಫೇರ್ ಅವಾರ್ಡ್ಸ್‌ನ ಸೌತ್ ವಿಭಾಗವನ್ನು 1964ರಿಂದ ಆರಂಭಿಸಿ ಪ್ರತ್ಯೇಕವಾಗಿ ದಕ್ಷಿಣ ಭಾರತದ ಸಿನಿಮಾಗಳನ್ನು ಗುರುತಿಸಿ ಪ್ರಶಂಸಿಸಲು ಆರಂಭಿಸಲಾಯಿತು. ಹಾಗೂ 1964ರಲ್ಲಿ ಕೇವಲ ತಮಿಳು, ತೆಲುಗು ಹಾಗೂ ಬೆಂಗಾಳಿ ಚಿತ್ರಗಳನ್ನು ಮಾತ್ರ ಸೇರಿಸಿಕೊಳ್ಳಲಾಗಿತ್ತು. ನಂತರ 1967ರಲ್ಲಿ ಮಲಯಾಳಂ ಸಿನಿಮಾಗಳನ್ನು ಈ ಫಿಲ್ಮ್‌ಫೇರ್ ಅವಾರ್ಡ್ಸ್‌ಗೆ ಸೇರಿಸಲಾಯಿತು ಮತ್ತು ಕನ್ನಡ ಸಿನಿಮಾಗಳನ್ನು 1970ರಲ್ಲಿ ಸೇರಿಸಿಕೊಳ್ಳಲಾಯಿತು.

    ಈ ಅವಾರ್ಡ್ಸ್‌ನಲ್ಲೂ ಅಪ್ಪು ಅಬ್ಬರ

    ಈ ಅವಾರ್ಡ್ಸ್‌ನಲ್ಲೂ ಅಪ್ಪು ಅಬ್ಬರ

    ಇನ್ನು ಕನ್ನಡದ ಪರ ಅತಿಹೆಚ್ಚು ಬಾರಿ ಫಿಲ್ಮ್‌ಫೇರ್ ಬೆಸ್ಟ್ ನಟ ಪ್ರಶಸ್ತಿಯನ್ನು ರಾಜ್‌ಕುಮಾರ್ ಗೆದ್ದಿದ್ದಾರೆ. ಆದರೆ ಈಗಿನ ತಲೆಮಾರಿನ ನಟರನ್ನು ಗಣನೆಗೆ ತೆಗೆದುಕೊಂಡರೆ ಪುನೀತ್ ರಾಜ್‌ಕುಮಾರ್ ನಾಲ್ಕು ಬಾರಿ ತಮ್ಮ ಮನೋಜ್ಞ ಅಭಿನಯಕ್ಕೆ ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದುಕೊಂಡು ಅತಿಹೆಚ್ಚು ಬಾರಿ ಗೆದ್ದ ನಟ ಎನಿಸಿಕೊಂಡಿದ್ದಾರೆ. ಪುನೀತ್ ರೀತಿಯೇ ಶಿವ ರಾಜ್‌ಕುಮಾರ್ ಕೂಡ ನಾಲ್ಕು ಬಾರಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.

    English summary
    After SIIMA Filmfare Awards South 2022 ceremony will be held in Bangalore on 18th September 2022. Read on
    Tuesday, September 13, 2022, 11:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X