»   » ಸ್ಪರ್ಶದ ಬುಟ್ಟಿಗೆ ಒಟ್ಟು ಮೂರು ಪ್ರಶ ಸ್ತಿಗಳು

ಸ್ಪರ್ಶದ ಬುಟ್ಟಿಗೆ ಒಟ್ಟು ಮೂರು ಪ್ರಶ ಸ್ತಿಗಳು

Posted By: Staff
Subscribe to Filmibeat Kannada

ಮುಂಬಯಿ : ಯಜಮಾನ ಚಿತ್ರದಲ್ಲಿನ ಅಭಿನಯಕ್ಕಾಗಿ ವಿಷ್ಣುವರ್ಧನ್‌ಗೆ ಮತ್ತು ಸ್ಪರ್ಶ ಸಿನೇಮಾದಲ್ಲಿನ ಅಭಿನಯಕ್ಕಾಗಿ ಸುಧಾರಾಣಿಗೆ 48ನೇ ಫಿಲ್ಮ್‌ ಫೇರ್‌ ಪ್ರಶಸ್ತಿ ದೊರೆತಿದೆ.

ದಕ್ಷಿಣ ಭಾರತೀಯ ಚಿತ್ರ ತಾರೆಗಳಿಗೆ ನೀಡಲಾಗುವ ಫಿಲ್ಮ್‌ಫೇರ್‌ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಲಾಗಿದ್ದು, ಏಪ್ರಿಲ್‌ ಏಳರಂದು ಹೈದರಾಬಾದ್‌ನ ಲಲಿತ ಕಲಾ ತೋರಣಂನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ.

ಹೇ ರಾಮ್‌ನಲ್ಲಿನ ಮನಮುಟ್ಟುವ ಅಭಿನಯಕ್ಕಾಗಿ ಕಮಲಹಾಸನ್‌ ಉತ್ತಮ ನಟ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರೆ, ಮಲಯಾಳಂನ ಮಮ್ಮೂಟ್ಟಿ ಎರಡನೇ ಸ್ಥಾನ ಹಾಗೂ ವಿಷ್ಣುವರ್ಧನ್‌ಗೆ ಮೂರನೇ ಸ್ಥಾನ ದೊರಕಿದೆ. ಸ್ಪರ್ಶ ಚಿತ್ರ ಒಟ್ಟು ಮೂರು ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿಕೊಂಡಿದೆ. ಉತ್ತಮ ನಿರ್ದೇಶಕನಾಗಿ ಸುನೀಲ್‌ ಕುಮಾರ್‌ ದೇಸಾಯಿ, ಉತ್ತಮ ಸಂಗೀತ ನಿರ್ದೇಶಕನಾಗಿ ಹಂಸಲೇಖ ಹಾಗೂ ಅಭಿನಯಕ್ಕಾಗಿ ಸುಧಾರಾಣಿ ಅವರು ಬಹುಮಾನಗಳನ್ನು ಪಡೆದಿದ್ದಾರೆ.

ಅಲೈಪಾಯುದೇ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಎ.ಆರ್‌ ರೆಹಮಾನ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದು ಅವರು ಪಡೆಯುತ್ತಿರುವ ಹದಿಮೂರನೇ ಫಿಲ್ಮ್‌ ಫೇರ್‌ ಅವಾರ್ಡ್‌

English summary
Kannada film Sparsha gets three film fare awards

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada