twitter
    For Quick Alerts
    ALLOW NOTIFICATIONS  
    For Daily Alerts

    2017ರ ಅತ್ಯುತ್ತಮ ಹಾಸ್ಯ ನಟ ಧರ್ಮಣ್ಣ, ನಿರ್ದೇಶಕ ನರ್ತನ್

    By Bharath Kumar
    |

    2017ನೇ ಸಾಲಿನ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಾಸ್ಯ ನಟ ಸೇರಿದಂತೆ ಒಟ್ಟು ಹದಿನೈದು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' ಪೋಲ್ ಆಯೋಜಿಸಿತ್ತು.

    ಈಗ ಫಲಿತಾಂಶ ಹೊರಬಿದ್ದಿದ್ದು, ದರ್ಶನ್, ತಾರಕ್ ಸಿನಿಮಾ, ನಟಿ ಶಾನ್ವಿ ಶ್ರೀವಾಸ್ತವ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ ಹಲವರು ಜಯಶಾಲಿಗಳಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಪ್ರಕಟ ಮಾಡಲಾಗಿತ್ತು.

    ಇದೀಗ, ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ, ಅತ್ಯುತ್ತಮ ಚಿತ್ರ ಸಾಹಿತಿ, ಅತ್ಯುತ್ತಮ ಹಿನ್ನೆಲೆ ಗಾಯಕಿ, ಅತ್ಯುತ್ತಮ ಹಿನ್ನೆಲೆ ಗಾಯಕ, ಅತ್ಯುತ್ತಮ ಹಾಸ್ಯ ಹಾಗೂ ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ ಯಾರೆಂದು ಘೋಷಿಸಲಾಗಿದೆ. ಮುಂದೆ ಓದಿ....

    ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ

    ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ

    ರಾಜ್ ಬಿ ಶಟ್ಟಿ ನಿರ್ದೇಶನ ಹಾಗೂ ನಟನೆ ಮಾಡಿದ್ದ 'ಒಂದು ಮೊಟ್ಟೆಯ ಕಥೆ' ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಈ ಚಿತ್ರವೀಗ ಫಿಲ್ಮಿಬೀಟ್ ಕನ್ನಡ ಆಯೋಜನೆ ಮಾಡಿದ್ದ ಪೋಲ್ ನಲ್ಲಿ ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರವಾಗಿ ಹೊರಹೊಮ್ಮಿದೆ.

    ಓದುಗರ ಮಹಾತೀರ್ಪು: 2017ರ 'ಅತ್ಯುತ್ತಮ ನಟ' ದರ್ಶನ್ಓದುಗರ ಮಹಾತೀರ್ಪು: 2017ರ 'ಅತ್ಯುತ್ತಮ ನಟ' ದರ್ಶನ್

    ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ

    ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ

    ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ ವಿಭಾಗದಲ್ಲಿ ರೋಹಿತ್ ಪದಕಿ, ತರುಣ್ ಸುದೀರ್, ರಾಜ್ ಬಿ ಶೆಟ್ಟಿ, ನರ್ತನ್, ಚಿಂತನ್ ಸೇರಿದಂತೆ ಹಲವರು ನಾಮಿನೇಟ್ ಆಗಿದ್ದರು. ಇವರ ಪೈಕಿ 'ಮಫ್ತಿ' ನಿರ್ದೇಶಕ ನರ್ತನ್ ಅತ್ಯುತ್ತಮ ಉದಯೋನ್ಮುಖ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

    2017ರ ಅತ್ಯುತ್ತಮ ಕಮರ್ಷಿಯಲ್ ಸಿನಿಮಾ 'ತಾರಕ್'2017ರ ಅತ್ಯುತ್ತಮ ಕಮರ್ಷಿಯಲ್ ಸಿನಿಮಾ 'ತಾರಕ್'

    ಅತ್ಯುತ್ತಮ ಹಾಸ್ಯ ನಟ

    ಅತ್ಯುತ್ತಮ ಹಾಸ್ಯ ನಟ

    ಹಾಸ್ಯ ನಟ ವಿಭಾಗದಲ್ಲಿ ಚಿಕ್ಕಣ್ಣ, ಸಾಧುಕೋಕಿಲಾ, ರಂಗಾಯಣ ರಘು, ಕುರಿ ಪ್ರತಾಪ್, ತಬಲ ನಾಣಿ, ಧರ್ಮಣ ಸೇರಿದಂತೆ ಹಲವರು ನಾಮಿನೇಟ್ ಆಗಿದ್ದರು. ಇವರ ಪೈಕಿ 'ಮುಗುಳುನಗೆ' ಚಿತ್ರದ ಅಭಿನಯಕ್ಕಾಗಿ ಧರ್ಮಣ ಕಡೂರು ಅತ್ಯುತ್ತಮ ಹಾಸ್ಯ ನಟನಾಗಿ ಆಯ್ಕೆಯಾಗಿದ್ದಾರೆ.

    ಅತ್ಯುತ್ತಮ ಹಿನ್ನೆಲೆ ಗಾಯಕ

    ಅತ್ಯುತ್ತಮ ಹಿನ್ನೆಲೆ ಗಾಯಕ

    ಈ ವರ್ಷದ ಬೆಸ್ಟ್ ಸಿಂಗರ್ಸ್ ವಿಭಾಗದಲ್ಲಿ ವಿಜಯ ಪ್ರಕಾಶ್, ಅರ್ಮಾನ್ ಮಲ್ಲಿಕ್, ಸೋನು ನಿಗಮ್, ಸಂಚಿತ್ ಹೆಗ್ಡೆ, ಚರಣ್ ರಾಜ್, ಅನೂಪ್ ಸೀಳಿನ್ ಸೇರಿದಂತೆ ಹಲವರು ನಾಮಿನೇಟ್ ಆಗಿದ್ದರು. ಇವರ ಪೈಕಿ 'ಹುಲಿರಾಯ' ಚಿತ್ರದ 'ಹೇ ಹುಡುಗಿ' ಹಾಡು ಹಾಡಿರುವ ಗಣೇಶ್ ಕಾರಂತ್ ಅತ್ಯುತ್ತಮ ಹಿನ್ನೆಲೆ ಗಾಯಕರಾಗಿ ಆಯ್ಕೆಯಾಗಿದ್ದಾರೆ.

    ಓದುಗರ ಆಯ್ಕೆ: 2017ರ ಅತ್ಯುತ್ತಮ ನಿರ್ದೇಶಕ ಸಂತೋಷ್ ಆನಂದ್ ರಾಮ್ಓದುಗರ ಆಯ್ಕೆ: 2017ರ ಅತ್ಯುತ್ತಮ ನಿರ್ದೇಶಕ ಸಂತೋಷ್ ಆನಂದ್ ರಾಮ್

    ಅತ್ಯುತ್ತಮ ಹಿನ್ನೆಲೆ ಗಾಯಕಿ

    ಅತ್ಯುತ್ತಮ ಹಿನ್ನೆಲೆ ಗಾಯಕಿ

    ಶ್ರೇಯಾ ಘೋಷಲ್, ಅನುರಾಧ ಭಟ್, ಇಂದು ನಾಗರಾಜ್, ಸುಪ್ರಿಯಾ ಲೋಹಿತ್, ಈಶಾ ಸುಚಿ, ಸಿಂಚನ್ ದೀಕ್ಷಿತ್ ಸೇರಿದಂತೆ ಹಲವರು ಹಿನ್ನೆಲೆ ಗಾಯಕಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದರು. ಇವರ ಪೈಕಿ ಬ್ಯೂಟಿಫುಲ್ ಮನಸುಗಳು ಚಿತ್ರದ ಹಾಡಿಗಾಗಿ ಈಶಾ ಸುಚಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಅತ್ಯುತ್ತಮ ಚಿತ್ರ ಸಾಹಿತಿ

    ಅತ್ಯುತ್ತಮ ಚಿತ್ರ ಸಾಹಿತಿ

    ಅತ್ಯುತ್ತಮ ಚಿತ್ರ ಸಾಹಿತಿ ವಿಭಾಗದಲ್ಲಿ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್, ವಿ ನಾಗೇಂದ್ರ ಪ್ರಸಾದ್, ಕೆ ಕಲ್ಯಾಣ್, ಸಂತೋಷ್ ಆನಂದ್ ರಾಮ್, ನಂದಿನಿ ನಂಜಪ್ಪ ಸೇರಿದಂತೆ ಹಲವು ನಾಮಿನೇಟ್ ಆಗಿದ್ದರು. ಇವರ ಪೈಕಿ 'ಹುಲಿರಾಯ' ಚಿತ್ರದ 'ಹೇ ಹುಡುಗಿ' ಗೀತೆಗಾಗಿ ನಂದಿನಿ ನಂಜಪ್ಪ ಅತ್ಯುತ್ತಮ ಚಿತ್ರ ಸಾಹಿತಿ ಆಗಿ ಆಯ್ಕೆಯಾಗಿದ್ದಾರೆ.

    ಜನ ಮೆಚ್ಚಿದ ಅರ್ಜುನ ಜನ್ಯ 2017ರ ಅತ್ಯುತ್ತಮ ಸಂಗೀತ ನಿರ್ದೇಶಕಜನ ಮೆಚ್ಚಿದ ಅರ್ಜುನ ಜನ್ಯ 2017ರ ಅತ್ಯುತ್ತಮ ಸಂಗೀತ ನಿರ್ದೇಶಕ

    English summary
    'Best of Sandalwood-2017' Poll Results are out. Kannada director narthan best debutant director, ondu motteya kathe best debutant movie, Eesha suchi best playback female singer, ganesh karanth best playback male singer.
    Wednesday, February 21, 2018, 20:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X