ಓದುಗರ ತೀರ್ಪು: 2018 ರ 'ಅತ್ಯುತ್ತಮ ನಾಯಕಿ' ಆಶಿಕಾ ರಂಗನಾಥ್.!

2018ನೇ ಸಾಲಿನ 'ಅತ್ಯುತ್ತಮ ನಟಿ' ಸೇರಿದಂತೆ ಒಟ್ಟು ಹನ್ನೊಂದು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.

ತಮ್ಮ ನೆಚ್ಚಿನ ನಟ-ನಟಿಯರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು.

ಸುಮಾರು ಒಂದುವರೆ ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರ ಹಾಕುವ ಸಮಯ ಬಂದಿದೆ. ಓದುಗ ಪ್ರಭುಗಳ ಇಚ್ಛೆ ಪ್ರಕಾರ, 2018ರ 'ಅತ್ಯುತ್ತಮ ನಟಿ' ಆಗಿ ಹೊರಹೊಮ್ಮಿರುವುದು ಮುದ್ದು ಮುಖದ ಬೆಡಗಿ ಆಶಿಕಾ ರಂಗನಾಥ್.

2018 ರ ಬೆಸ್ಟ್ ಆಕ್ಟ್ರೆಸ್ ಆಶಿಕಾ ರಂಗನಾಥ್

2018 ರ ಬೆಸ್ಟ್ ಆಕ್ಟ್ರೆಸ್ ಆಶಿಕಾ ರಂಗನಾಥ್

'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2018ರ ಅತ್ಯುತ್ತಮ ನಟಿ ಆಶಿಕಾ ರಂಗನಾಥ್. ನಾಮನಿರ್ದೇಶನಗೊಂಡಿದ್ದ 14 ನಟಿಯರ ಪೈಕಿ 'ರಾಂಬೋ-2' ಚಿತ್ರದ ಅಭಿನಯಕ್ಕಾಗಿ ಆಶಿಕಾ ರಂಗನಾಥ್ ಅವರು 28% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆಶಿಕಾ ರಂಗನಾಥ್ ಗೆ ಸಿಕ್ಕ ಮತಗಳು ಎಷ್ಟು.?

ಆಶಿಕಾ ರಂಗನಾಥ್ ಗೆ ಸಿಕ್ಕ ಮತಗಳು ಎಷ್ಟು.?

ಒಟ್ಟು 8097 ಜನರು ಆಶಿಕಾ ರಂಗನಾಥ್ ಪರವಾಗಿ ಮತ ಚಲಾಯಿಸಿದ್ದಾರೆ. ಅತಿ ಹೆಚ್ಚು ಮತ ಪಡೆದ ಆಶಿಕಾ ರಂಗನಾಥ್ ಓದುಗರ ಅಭಿಪ್ರಾಯದಂತೆ 'ಅತ್ಯುತ್ತಮ ನಾಯಕಿ'ಯಾಗಿದ್ದಾರೆ.

ನಂತರದ ಸ್ಥಾನದಲ್ಲಿ...

ನಂತರದ ಸ್ಥಾನದಲ್ಲಿ...

'ಫಸ್ಟ್ ಹಾಫ್' ಚಿತ್ರದ ನಟನೆಗಾಗಿ ಪ್ರಿಯಾಂಕಾ ಉಪೇಂದ್ರ (6342), 'ಕನಕ' ಮತ್ತು 'ಸಂಹಾರ' ಚಿತ್ರಗಳ ಅಭಿನಯಕ್ಕಾಗಿ ಹರಿಪ್ರಿಯಾ (4629) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

ಉಳಿದವರು...

ಉಳಿದವರು...

ನಾಲ್ಕನೇ ಸ್ಥಾನ - ಅನುಪಮಾ ಗೌಡ (4156)

ಐದನೇ ಸ್ಥಾನ - ರಚಿತಾ ರಾಮ್ (2082)

ಆರನೇ ಸ್ಥಾನ - ಮಾನ್ವಿತಾ ಹರೀಶ್ (1771)

ಏಳನೇ ಸ್ಥಾನ - ಸೋನು ಗೌಡ (489)

ಎಂಟನೇ ಸ್ಥಾನ - ತಾರಾ (425)

ಒಂಬತ್ತನೇ ಸ್ಥಾನ - ಮೇಘನಾ ರಾಜ್ (264)

ಹತ್ತನೇ ಸ್ಥಾನ - ಶೀತಲ್ ಶೆಟ್ಟಿ (183)

ಹನ್ನೊಂದನೇ ಸ್ಥಾನ - ಪೂಜಾ ಗಾಂಧಿ (124)

ಹನ್ನೆರಡನೇ ಸ್ಥಾನ - ರಾಗಿಣಿ ದ್ವಿವೇದಿ (113)

ಹನ್ನೆರಡನೇ ಸ್ಥಾನ - ರಾಧಿಕಾ ಚೇತನ್ (113)

ಹದಿಮೂರನೇ ಸ್ಥಾನ - ಸಿಂಧು ಲೋಕನಾಥ್ (83)

ಎಲ್ಲರಿಗೂ ಧನ್ಯವಾದಗಳು

ಎಲ್ಲರಿಗೂ ಧನ್ಯವಾದಗಳು

ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.

More from Filmibeat

English summary
Best of 2018 - Filmibeat Kannada Awards 2018 poll results are out. Kannada Actress Ashika Ranganath is selected as Best Actress-2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X