ಓದುಗರ ಆಯ್ಕೆ: 2018 ರ 'ಅತ್ಯುತ್ತಮ ಹಾಸ್ಯ ನಟ' ನಾಗಭೂಷಣ್

2018ನೇ ಸಾಲಿನ 'ಅತ್ಯುತ್ತಮ ಹಾಸ್ಯ ನಟ' ಸೇರಿದಂತೆ ಒಟ್ಟು ಹನ್ನೊಂದು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ, ತಂತ್ರಜ್ಞರಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.

ತಮ್ಮ ನೆಚ್ಚಿನ ನಟ-ನಟಿಯರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು.

ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018 ಫಲಿತಾಂಶ ಇಲ್ಲಿದೆ ನೋಡಿ

ಸುಮಾರು ಒಂದುವರೆ ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರ ಬಂದಿದೆ. ಓದುಗ ಪ್ರಭುಗಳ ಇಚ್ಛೆ ಪ್ರಕಾರ, 2018ರ 'ಅತ್ಯುತ್ತಮ ಹಾಸ್ಯ ನಟ'ರಾಗಿ ಹೊರಹೊಮ್ಮಿರುವುದು ನಾಗಭೂಷಣ್. ಮುಂದೆ ಓದಿರಿ...

2018 ರ ಬೆಸ್ಟ್ ಕಾಮಿಡಿಯನ್ ನಾಗಭೂಷಣ್

2018 ರ ಬೆಸ್ಟ್ ಕಾಮಿಡಿಯನ್ ನಾಗಭೂಷಣ್

'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2018ರ ಅತ್ಯುತ್ತಮ ಹಾಸ್ಯ ನಟ ನಾಗಭೂಷಣ್. ನಾಮನಿರ್ದೇಶನಗೊಂಡಿದ್ದ 9 ಹಾಸ್ಯ ನಟರ ಪೈಕಿ 'ಒಂದಲ್ಲಾ ಎರಡಲ್ಲಾ' ಚಿತ್ರದಲ್ಲಿನ ಅಭಿನಯಕ್ಕಾಗಿ ನಾಗಭೂಷಣ್ ಅವರು 30% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಾಗಭೂಷಣ್ ಗೆ ಸಿಕ್ಕ ಮತಗಳು ಎಷ್ಟು.?

ನಾಗಭೂಷಣ್ ಗೆ ಸಿಕ್ಕ ಮತಗಳು ಎಷ್ಟು.?

ಒಟ್ಟು 2725 ಜನರು ನಾಗಭೂಷಣ್ ಪರವಾಗಿ ಮತ ಚಲಾಯಿಸಿದ್ದಾರೆ. ಅತಿ ಹೆಚ್ಚು ಮತ ಪಡೆದ ನಾಗಭೂಷಣ್ ಓದುಗರ ಅಭಿಪ್ರಾಯದಂತೆ 'ಅತ್ಯುತ್ತಮ ಹಾಸ್ಯ ನಟ'ರಾಗಿದ್ದಾರೆ.

ನಂತರದ ಸ್ಥಾನದಲ್ಲಿ...

ನಂತರದ ಸ್ಥಾನದಲ್ಲಿ...

ಕುರಿ ಪ್ರತಾಪ್ (2644), ಸಾಧು ಕೋಕಿಲ (1545) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

ಉಳಿದವರು...

ಉಳಿದವರು...

ನಾಲ್ಕನೇ ಸ್ಥಾನ - ಚಿಕ್ಕಣ್ಣ (1161)

ಐದನೇ ಸ್ಥಾನ - ಶಿವರಾಜ್.ಕೆ.ಆರ್.ಪೇಟೆ (439)

ಆರನೇ ಸ್ಥಾನ - ವಿಜಯ್ ಚೆಂದೂರ್ (230)

ಏಳನೇ ಸ್ಥಾನ - ರಂಗಾಯಣ ರಘು (160)

ಎಂಟನೇ ಸ್ಥಾನ - ಅಮಿತ್ (149)

ಒಂಬತ್ತನೇ ಸ್ಥಾನ - ತಬಲಾ ನಾಣಿ (135)

ಎಲ್ಲರಿಗೂ ಧನ್ಯವಾದಗಳು

ಎಲ್ಲರಿಗೂ ಧನ್ಯವಾದಗಳು

ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.

More from Filmibeat

English summary
Best of 2018 - Filmibeat Kannada Awards 2018 poll results are out. Kannada Actor Nagabhushan is selected as Best Comedian-2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X