ಓದುಗರ ಜಡ್ಜ್ ಮೆಂಟ್: 'ಅತ್ಯುತ್ತಮ ಉದಯೋನ್ಮುಖ ನಟ' ಪ್ರಥಮ್.!
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ವಿನ್ನರ್ ಆಗಿದ್ದ ಪ್ರಥಮ್ ಮಾತಿನ ಮಲ್ಲ. ನಟನೆಯಲ್ಲಿ ಅವರು ಇನ್ನೂ ಮಾಗಬೇಕು ಅಂತ ಯಾರು ಎಷ್ಟೇ ಕಾಮೆಂಟ್ ಮಾಡಿದರೂ, 'ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರು ಮಾತ್ರ 2018 ರ 'ಅತ್ಯುತ್ತಮ ಉದಯೋನ್ಮುಖ ನಟ' ಪ್ರಥಮ್ ಎಂಬ ತೀರ್ಪು ಕೊಟ್ಟಿದ್ದಾರೆ.
ಹೌದು, ನಿಮ್ಮ ಫಿಲ್ಮಿಬೀಟ್ ಕನ್ನಡ 2018ನೇ ಸಾಲಿನ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.
ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018 ಫಲಿತಾಂಶ ಇಲ್ಲಿದೆ ನೋಡಿ
ತಮ್ಮ ನೆಚ್ಚಿನ ನಟ-ನಟಿಯರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು. ಸುಮಾರು ಒಂದುವರೆ ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರಬಿದ್ದಿದೆ.
ಓದುಗ ಪ್ರಭುಗಳ ಇಚ್ಛೆ ಪ್ರಕಾರ, 2018ರ 'ಅತ್ಯುತ್ತಮ ಉದಯೋನ್ಮುಖ ನಟ'ರಾಗಿ ಹೊರಹೊಮ್ಮಿರುವುದು ನಟ ಪ್ರಥಮ್. ಮುಂದೆ ಓದಿರಿ...

2018 ರ ಬೆಸ್ಟ್ ಡೆಬ್ಯೂ ನಟ ಪ್ರಥಮ್
'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2018ರ ಅತ್ಯುತ್ತಮ ಉದಯೋನ್ಮುಖ ನಟ ಪ್ರಥಮ್. ನಾಮನಿರ್ದೇಶನಗೊಂಡಿದ್ದ 6 ಉದಯೋನ್ಮುಖ ನಟರ ಪೈಕಿ 'ದೇವ್ರಂಥ ಮನುಷ್ಯ' ಚಿತ್ರದ ನಟನೆಗಾಗಿ ಪ್ರಥಮ್ ಅವರು 39% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಥಮ್ ಗೆ ಸಿಕ್ಕ ಮತಗಳು ಎಷ್ಟು.?
ಒಟ್ಟು 5100 ಜನರು ಪ್ರಥಮ್ ಪರವಾಗಿ ಮತ ಚಲಾಯಿಸಿದ್ದಾರೆ. ಅತಿ ಹೆಚ್ಚು ಮತ ಪಡೆದ ಪ್ರಥಮ್ ಓದುಗರ ಅಭಿಪ್ರಾಯದಂತೆ 'ಅತ್ಯುತ್ತಮ ಉದಯೋನ್ಮುಖ ನಟ'ರಾಗಿದ್ದಾರೆ.

ನಂತರದ ಸ್ಥಾನದಲ್ಲಿ...
'ನಡುವೆ ಅಂತರವಿರಲಿ' ಚಿತ್ರದ ನಟನೆಗಾಗಿ ಪ್ರಖ್ಯಾತ್ (2925), 'ಗುಳ್ಟು' ಚಿತ್ರದ ನಟನೆಗಾಗಿ ನವೀನ್ ಶಂಕರ್ (2437) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

ಉಳಿದವರು...
ನಾಲ್ಕನೇ ಸ್ಥಾನ - ಡ್ಯಾನಿಶ್ ಸೇಠ್ (1580)
ಐದನೇ ಸ್ಥಾನ - ಶ್ರೀಮಹಾದೇವ್ (509)
ಆರನೇ ಸ್ಥಾನ - ಪ್ರಣಮ್ ದೇವರಾಜ್ (501)

ಎಲ್ಲರಿಗೂ ಧನ್ಯವಾದಗಳು
ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.


Click it and Unblock the Notifications











