ಓದುಗರ ಪ್ರಕಾರ 'ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ' ಜನಾರ್ಧನ್ ಚಿಕ್ಕಣ್ಣ
'ಗುಳ್ಟು' ಚಿತ್ರದ ಮೂಲಕ ಡೇಟಾ ಸುರಕ್ಷತೆಯ ಮಹತ್ವವನ್ನು ಮನರಂಜನಾತ್ಮಕವಾಗಿ ಕನ್ನಡ ಪ್ರೇಕ್ಷಕರ ಮುಂದೆ ಇಟ್ಟಿದ್ದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ 2018 ರ 'ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ'ರಾಗಿ ಹೊರಹೊಮ್ಮಿದ್ದಾರೆ. ಹೌದು, ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ ಓದುಗರ ಪ್ರಕಾರ, 2018 ರ 'ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ' ಜನಾರ್ಧನ್ ಚಿಕ್ಕಣ್ಣ.
ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ, ತಂತ್ರಜ್ಞರಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.
ತಮ್ಮ ನೆಚ್ಚಿನ ನಟ-ನಟಿ, ನಿರ್ದೇಶಕರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು.
ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018 ಫಲಿತಾಂಶ ಇಲ್ಲಿದೆ ನೋಡಿ
ಸುಮಾರು ಒಂದುವರೆ ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರ ಬಂದಿದೆ. ಇದರಲ್ಲಿ 2018ರ 'ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ'ರಾಗಿ ಜನಾರ್ಧನ್ ಚಿಕ್ಕಣ್ಣ ಆಯ್ಕೆ ಆಗಿದ್ದಾರೆ. ಮುಂದೆ ಓದಿರಿ...

2018 ರ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಜನಾರ್ಧನ್ ಚಿಕ್ಕಣ್ಣ
'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2018ರ ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ. ನಾಮನಿರ್ದೇಶನಗೊಂಡಿದ್ದ 6 ಡೆಬ್ಯೂ ಡೈರೆಕ್ಟರ್ ಗಳ ಪೈಕಿ 'ಗುಳ್ಟು' ಚಿತ್ರದ ನಿರ್ದೇಶನಕ್ಕಾಗಿ ಜನಾರ್ಧನ್ ಚಿಕ್ಕಣ್ಣ ಅವರು 40% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜನಾರ್ಧನ್ ಚಿಕ್ಕಣ್ಣ ಗೆ ಸಿಕ್ಕ ಮತಗಳು ಎಷ್ಟು.?
ಒಟ್ಟು 2136 ಜನರು ಜನಾರ್ಧನ್ ಚಿಕ್ಕಣ್ಣ ಪರವಾಗಿ ಮತ ಚಲಾಯಿಸಿದ್ದಾರೆ. ಅತಿ ಹೆಚ್ಚು ಮತ ಪಡೆದ ಜನಾರ್ಧನ್ ಚಿಕ್ಕಣ್ಣ ಓದುಗರ ಅಭಿಪ್ರಾಯದಂತೆ 'ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ'ರಾಗಿದ್ದಾರೆ.

ನಂತರದ ಸ್ಥಾನದಲ್ಲಿ...
'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ನಿರ್ದೇಶನಕ್ಕಾಗಿ ಗುರುದತ್ ಗಾಣಿಗ (1362), 'ಅಯೋಗ್ಯ' ಚಿತ್ರದ ನಿರ್ದೇಶನಕ್ಕಾಗಿ ಮಹೇಶ್ (887) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

ಉಳಿದವರು...
ನಾಲ್ಕನೇ ಸ್ಥಾನ - ರಿಶಿಕಾ ಶರ್ಮಾ (434)
ಐದನೇ ಸ್ಥಾನ - ವಿಜಯ್ ರಾಘವೇಂದ್ರ (422)
ಆರನೇ ಸ್ಥಾನ - ಸೆನ್ನಾ ಹೆಗ್ಡೆ (122)

ಎಲ್ಲರಿಗೂ ಧನ್ಯವಾದಗಳು
ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.


Click it and Unblock the Notifications











