2018ರ 'ಅತ್ಯುತ್ತಮ ನಿರ್ದೇಶಕ'ನಾದ 'ಕೆಜಿಎಫ್' ಡೈರೆಕ್ಟರ್ ಪ್ರಶಾಂತ್ ನೀಲ್.!

2018 ರಲ್ಲಿ ರಾಷ್ಟ್ರಮಟ್ಟದಲ್ಲಿ ಸದ್ದು-ಸುದ್ದಿ ಮಾಡಿದ ಕನ್ನಡ ಸಿನಿಮಾ 'ಕೆ.ಜಿ.ಎಫ್'. ಇಡೀ ಭಾರತವನ್ನು ತಮ್ಮ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿದವರು 'ಕೆ.ಜಿ.ಎಫ್' ಡೈರೆಕ್ಟರ್ ಪ್ರಶಾಂತ್ ನೀಲ್. ತಮ್ಮ ಮೇಕಿಂಗ್ ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದ ಪ್ರಶಾಂತ್ ನೀಲ್ 2018ರ 'ಅತ್ಯುತ್ತಮ ನಿರ್ದೇಶಕ'ನಾಗಿ ಹೊರಹೊಮ್ಮಿದ್ದಾರೆ.

ಹೌದು, ನಿಮ್ಮ ಫಿಲ್ಮಿಬೀಟ್ ಕನ್ನಡ ಆಯೋಜಿಸಿದ್ದ 2018ನೇ ಸಾಲಿನ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018' ಪೋಲ್ ನಲ್ಲಿ ಪ್ರಶಾಂತ್ ನೀಲ್ 'ಬೆಸ್ಟ್ ಡೈರೆಕ್ಟರ್' ಆಗಿದ್ದಾರೆ.

'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018' ಆನ್ ಲೈನ್ ಮತಗಟ್ಟೆ ಮೂಲಕ ತಮ್ಮ ನೆಚ್ಚಿನ ನಟ-ನಟಿ, ನಿರ್ದೇಶಕರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿತ್ತು. ಸುಮಾರು ಒಂದುವರೆ ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರಬಿದ್ದಿದೆ. ಮುಂದೆ ಓದಿರಿ...

2018 ರ ಬೆಸ್ಟ್ ಡೈರೆಕ್ಟರ್ ಪ್ರಶಾಂತ್ ನೀಲ್

2018 ರ ಬೆಸ್ಟ್ ಡೈರೆಕ್ಟರ್ ಪ್ರಶಾಂತ್ ನೀಲ್

'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2018ರ ಅತ್ಯುತ್ತಮ ನಿರ್ದೇಶಕ ಪ್ರಶಾಂತ್ ನೀಲ್. ನಾಮನಿರ್ದೇಶನಗೊಂಡಿದ್ದ 12 ನಿರ್ದೇಶಕರ ಪೈಕಿ 'ಕೆ.ಜಿ.ಎಫ್' ಚಿತ್ರದ ನಿರ್ದೇಶನಕ್ಕಾಗಿ ಪ್ರಶಾಂತ್ ನೀಲ್ ಅವರು 37% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಶಾಂತ್ ನೀಲ್ ಗೆ ಸಿಕ್ಕ ಮತಗಳು ಎಷ್ಟು.?

ಪ್ರಶಾಂತ್ ನೀಲ್ ಗೆ ಸಿಕ್ಕ ಮತಗಳು ಎಷ್ಟು.?

ಒಟ್ಟು 7554 ಜನರು ಪ್ರಶಾಂತ್ ನೀಲ್ ಪರವಾಗಿ ಮತ ಚಲಾಯಿಸಿದ್ದಾರೆ. ಅತಿ ಹೆಚ್ಚು ಮತ ಪಡೆದ ಪ್ರಶಾಂತ್ ನೀಲ್ ಓದುಗರ ಅಭಿಪ್ರಾಯದಂತೆ 'ಅತ್ಯುತ್ತಮ ನಿರ್ದೇಶಕ'ರಾಗಿದ್ದಾರೆ.

ನಂತರದ ಸ್ಥಾನದಲ್ಲಿ...

ನಂತರದ ಸ್ಥಾನದಲ್ಲಿ...

'ಕನಕ' ಚಿತ್ರದ ನಿರ್ದೇಶನಕ್ಕಾಗಿ ಆರ್.ಚಂದ್ರು (6644), 'ಸ.ಹಿ.ಪ್ರಾ.ಶಾಲೆ ಕಾಸರಗೋಡು' ಚಿತ್ರದ ನಿರ್ದೇಶನಕ್ಕಾಗಿ ರಿಶಬ್ ಶೆಟ್ಟಿ (3771) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

ಉಳಿದವರು...

ಉಳಿದವರು...

ನಾಲ್ಕನೇ ಸ್ಥಾನ - ದುನಿಯಾ ಸೂರಿ (1429)

ಐದನೇ ಸ್ಥಾನ - ಪ್ರೇಮ್ (287)

ಆರನೇ ಸ್ಥಾನ - ದಯಾಳ್ ಪದ್ಮನಾಭನ್ (241)

ಏಳನೇ ಸ್ಥಾನ - ಅರ್ಜುನ್ ಸರ್ಜಾ (224)

ಎಂಟನೇ ಸ್ಥಾನ - ನವನೀತ್ (180)

ಒಂಬತ್ತನೇ ಸ್ಥಾನ - ದಿನಕರ್ ತೂಗುದೀಪ (162)

ಹತ್ತನೇ ಸ್ಥಾನ - ಅನಿಲ್ ಕುಮಾರ್ (81)

ಹನ್ನೊಂದನೇ ಸ್ಥಾನ - ಡಿ.ಸತ್ಯ ಪ್ರಕಾಶ್ (75)

ಹನ್ನೆರಡನೇ ಸ್ಥಾನ - ಶಶಾಂಕ್ (28)

ಎಲ್ಲರಿಗೂ ಧನ್ಯವಾದಗಳು

ಎಲ್ಲರಿಗೂ ಧನ್ಯವಾದಗಳು

ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.

More from Filmibeat

English summary
Best of 2018 - Filmibeat Kannada Awards 2018 poll results are out. Kannada Director Prashanth Neel is selected as Best Director-2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X