ಸಿನಿ ಪ್ರಿಯರ ಇಚ್ಛೆ: 2018ರ 'ಅತ್ಯುತ್ತಮ ಖಳನಟ' ಡಾಲಿ ಧನಂಜಯ್.!
'ಅತ್ಯುತ್ತಮ ನಟ', 'ಅತ್ಯುತ್ತಮ ನಟಿ', 'ಅತ್ಯುತ್ತಮ ಖಳನಟ' ಸೇರಿದಂತೆ ಒಟ್ಟು ಹನ್ನೊಂದು ವಿಭಾಗಗಳಲ್ಲಿ 2018ನೇ ಸಾಲಿನ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018' ಪೋಲ್ ನ ನಿಮ್ಮ ಫಿಲ್ಮಿಬೀಟ್ ಕನ್ನಡ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.
ತಮ್ಮ ನೆಚ್ಚಿನ ನಟ-ನಟಿಯರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು.
ಡಿಸೆಂಬರ್ ತಿಂಗಳಿನಿಂದ ಆರಂಭವಾಗಿ ಸುಮಾರು ಒಂದುವರೆ ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರ ಬಿದ್ದಿದೆ. ಓದುಗ ಪ್ರಭುಗಳ ಇಚ್ಛೆ ಪ್ರಕಾರ, 2018ರ 'ಅತ್ಯುತ್ತಮ ಖಳನಟ' ಆಗಿ ಡಾಲಿ ಧನಂಜಯ್ ಹೊರಹೊಮ್ಮಿದ್ದಾರೆ. ಮುಂದೆ ಓದಿರಿ....

2018 ರ ಬೆಸ್ಟ್ ವಿಲನ್ ಧನಂಜಯ್
'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2018ರ ಅತ್ಯುತ್ತಮ ವಿಲನ್ ಧನಂಜಯ್. ನಾಮನಿರ್ದೇಶನಗೊಂಡಿದ್ದ 10 ಖಳನಟರ ಪೈಕಿ 'ಟಗರು' ಚಿತ್ರದ ಅಭಿನಯಕ್ಕಾಗಿ ಧನಂಜಯ್ ಅವರು 66% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಧನಂಜಯ್ ಗೆ ಸಿಕ್ಕ ಮತಗಳು ಎಷ್ಟು.?
ಒಟ್ಟು 6541 ಜನರು ಧನಂಜಯ್ ಪರವಾಗಿ ಮತ ಚಲಾಯಿಸಿದ್ದಾರೆ. ಅತಿ ಹೆಚ್ಚು ಮತ ಪಡೆದ ಧನಂಜಯ್ ಓದುಗರ ಅಭಿಪ್ರಾಯದಂತೆ 'ಅತ್ಯುತ್ತಮ ಖಳನಟ'ರಾಗಿದ್ದಾರೆ.

ನಂತರದ ಸ್ಥಾನದಲ್ಲಿ...
'ಕೆ.ಜಿ.ಎಫ್' ಚಿತ್ರದ ನಟನೆಗಾಗಿ ರಾಮಚಂದ್ರ ರಾಜು (2131), 'ಅಯೋಗ್ಯ' ಚಿತ್ರದ ಅಭಿನಯಕ್ಕಾಗಿ ರವಿಶಂಕರ್ (667) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

ಉಳಿದವರು...
ನಾಲ್ಕನೇ ಸ್ಥಾನ - ಭಜರಂಗಿ ಲೋಕಿ (201)
ಐದನೇ ಸ್ಥಾನ - ಪ್ರಕಾಶ್ ರೈ (132)
ಆರನೇ ಸ್ಥಾನ - ರಾಜ್ ದೀಪಕ್ ಶೆಟ್ಟಿ (98)
ಏಳನೇ ಸ್ಥಾನ - ಪ್ರಕಾಶ್ ಬೆಳವಾಡಿ (80)
ಎಂಟನೇ ಸ್ಥಾನ - ಬಾಲಾಜಿ ಮನೋಹರ್ (38)
ಒಂಬತ್ತನೇ ಸ್ಥಾನ - ಡ್ಯಾನಿ (31)
ಹತ್ತನೇ ಸ್ಥಾನ - ಯಶ್ ಶೆಟ್ಟಿ (21)

ಎಲ್ಲರಿಗೂ ಧನ್ಯವಾದಗಳು
ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.


Click it and Unblock the Notifications











