ಸಿನಿ ಪ್ರಿಯರ ಪ್ರಕಾರ 'ಸ.ಹಿ.ಪ್ರಾ.ಶಾಲೆ ಕಾಸರಗೋಡು' 2018 ರ 'ಅತ್ಯುತ್ತಮ ಸದಭಿರುಚಿಯ ಚಿತ್ರ'

ರಿಶಬ್ ಶೆಟ್ಟಿ ನಿರ್ದೇಶನದ ಅನಂತ್ ನಾಗ್ ಅಭಿನಯದ 'ಸ.ಹಿ.ಪ್ರಾ.ಶಾಲೆ ಕಾಸರಗೋಡು' ಚಿತ್ರ 2018 ರ 'ಅತ್ಯುತ್ತಮ ಸದಭಿರುಚಿಯ ಚಿತ್ರ'ವಾಗಿ ಹೊರಹೊಮ್ಮಿದೆ. ಇದು ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ ಓದುಗರ ಆಯ್ಕೆ.

ಹೌದು, ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ, ತಂತ್ರಜ್ಞರಿಗೆ, ಚಿತ್ರಗಳಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.

ತಮ್ಮ ನೆಚ್ಚಿನ ನಟ-ನಟಿ, ನಿರ್ದೇಶಕರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು.

ಸುಮಾರು ಒಂದುವರೆ ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರ ಬಂದಿದೆ. ಇದರಲ್ಲಿ 2018ರ 'ಅತ್ಯುತ್ತಮ ಸದಭಿರುಚಿಯ ಚಿತ್ರ'ವಾಗಿ ಸ.ಹಿ.ಪ್ರಾ.ಶಾಲೆ ಕಾಸರಗೋಡು ಆಯ್ಕೆ ಆಗಿದೆ. ಮುಂದೆ ಓದಿರಿ...

ಸ.ಹಿ.ಪ್ರಾ.ಶಾಲೆ ಕಾಸರಗೋಡು ಬೆಸ್ಟ್.!

ಸ.ಹಿ.ಪ್ರಾ.ಶಾಲೆ ಕಾಸರಗೋಡು ಬೆಸ್ಟ್.!

'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2018ರ ಅತ್ಯುತ್ತಮ ಸದಭಿರುಚಿಯ ಚಿತ್ರ 'ಸ.ಹಿ.ಪ್ರಾ.ಶಾಲೆ ಕಾಸರಗೋಡು'. ನಾಮನಿರ್ದೇಶನಗೊಂಡಿದ್ದ 9 ಚಿತ್ರಗಳ ಪೈಕಿ 'ಸ.ಹಿ.ಪ್ರಾ.ಶಾಲೆ ಕಾಸರಗೋಡು' ಚಿತ್ರ 56% ರಷ್ಟು ಮತಗಳನ್ನು ಪಡೆದಿದೆ.

'ಸ.ಹಿ.ಪ್ರಾ.ಶಾಲೆ ಕಾಸರಗೋಡು' ಚಿತ್ರಕ್ಕೆ ಸಿಕ್ಕ ಮತಗಳು ಎಷ್ಟು.?

'ಸ.ಹಿ.ಪ್ರಾ.ಶಾಲೆ ಕಾಸರಗೋಡು' ಚಿತ್ರಕ್ಕೆ ಸಿಕ್ಕ ಮತಗಳು ಎಷ್ಟು.?

ಒಟ್ಟು 6591 ಜನರು 'ಸ.ಹಿ.ಪ್ರಾ.ಶಾಲೆ ಕಾಸರಗೋಡು' ಚಿತ್ರದ ಪರವಾಗಿ ಮತ ಚಲಾಯಿಸಿದ್ದಾರೆ. ಅತಿ ಹೆಚ್ಚು ಮತ ಪಡೆದ 'ಸ.ಹಿ.ಪ್ರಾ.ಶಾಲೆ ಕಾಸರಗೋಡು' ಚಿತ್ರ ಓದುಗರ ಅಭಿಪ್ರಾಯದಂತೆ 'ಅತ್ಯುತ್ತಮ ಸದಭಿರುಚಿಯ ಚಿತ್ರ'ವಾಗಿದೆ.

ನಂತರದ ಸ್ಥಾನದಲ್ಲಿ...

ನಂತರದ ಸ್ಥಾನದಲ್ಲಿ...

ಗುಳ್ಟು (2678), ಆ ಕರಾಳ ರಾತ್ರಿ (1518) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

ಉಳಿದ ಚಿತ್ರಗಳು...

ಉಳಿದ ಚಿತ್ರಗಳು...

ನಾಲ್ಕನೇ ಸ್ಥಾನ - ಅಮ್ಮಚ್ಚಿ ಎಂಬ ನೆನಪು (288)

ಐದನೇ ಸ್ಥಾನ - ಹೆಬ್ಬೆಟ್ ರಾಮಕ್ಕ (190)

ಆರನೇ ಸ್ಥಾನ - ಇರುವುದೆಲ್ಲವ ಬಿಟ್ಟು (180)

ಏಳನೇ ಸ್ಥಾನ - ಒಂದಲ್ಲಾ ಎರಡಲ್ಲಾ (149)

ಎಂಟನೇ ಸ್ಥಾನ - ಚೂರಿಕಟ್ಟೆ (72)

ಒಂಬತ್ತನೇ ಸ್ಥಾನ - ಪ್ರಯಾಣಿಕರ ಗಮನಕ್ಕೆ (20)

ಎಲ್ಲರಿಗೂ ಧನ್ಯವಾದಗಳು

ಎಲ್ಲರಿಗೂ ಧನ್ಯವಾದಗಳು

ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಈ ಚಿತ್ರ ಗೆಲ್ಲಬೇಕಿತ್ತು, ಆ ಚಿತ್ರ ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.

More from Filmibeat

English summary
Best of 2018 - Filmibeat Kannada Awards 2018 poll results are out. Kannada Movie Sa.Hi.Pra.Shale Kasaragodu is selected as Best Critically Acclaimed Movie-2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X