ಹೊಸ ಮೊಬೈಲ್ ವಿನ್ಯಾಸದಲ್ಲಿ 'ಫಿಲ್ಮಿಬೀಟ್ ಕನ್ನಡ' ನಿಮ್ಮ ಮುಂದೆ

Recommended Video

Filmibeat kannada news portal gets a new design

ಸೆಪ್ಟೆಂಬರ್ ತಿಂಗಳಿನಲ್ಲಿ 50 ಮಿಲಿಯನ್, ಅಕ್ಟೋಬರ್ ತಿಂಗಳಿನಲ್ಲಿ 60 ಮಿಲಿಯನ್ ವೀಕ್ಷಣೆ ಪಡೆದು, ಡಿಜಿಟಲ್ ದುನಿಯಾದಲ್ಲಿ ಹೊಸ ಮೈಲಿಗಲ್ಲು ಸಾಧಿಸಿರುವ 'ಫಿಲ್ಮಿಬೀಟ್ ಕನ್ನಡ'ದ ಮೊಬೈಲ್‌ನಲ್ಲಿ ಈಗ ಹೊಸ ವಿನ್ಯಾಸ ಪಡೆದುಕೊಂಡಿದೆ. ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ನಿರಂತರವಾಗಿ ಚಿತ್ರಜಗತ್ತಿನ ಕಲರ್ ಫುಲ್ ಸುದ್ದಿಗಳನ್ನ ರುಚಿರುಚಿಯಾಗಿ ಉಣಬಡಿಸುತ್ತಿರುವ 'ಫಿಲ್ಮಿಬೀಟ್ ಕನ್ನಡ' ಹೊಸ ಮೈಲಿಗಲ್ಲಿನಲ್ಲಿ ದಾಪುಗಾಲು ಹಾಕುತ್ತಿದೆ; ಮತ್ತು, ಅದಕ್ಕೆ ನಿಮ್ಮ ಪ್ರೋತ್ಸಾಹವೇ ಕಾರಣವಾಗಿದೆ.

ಮೊಬೈಲ್ ನಲ್ಲಿ Filmibeat kannada ಎಂದು ಗೂಗಲ್ ಮಾಡಿದರೆ, ಈ ಹಿಂದೆ ಬರುತ್ತಿದ್ದ ವಿನ್ಯಾಸ ಇನ್ಮುಂದೆ ಕಾಣಿಸುವುದಿಲ್ಲ. ಈಗ ಮತ್ತಷ್ಟು ಕಲರ್ ಫುಲ್ ಆಗಿ, ಮತ್ತಷ್ಟು ವಿಶೇಷ ವಿಭಾಗಗಳಾಗಿ ರೂಪುಗೊಂಡು, ಓದುಗರಿಗೆ ಇಷ್ಟ ಆಗುವಂತೆ ವೆಬ್ ಸೈಟ್ ವಿನ್ಯಾಸ ಬದಲಾಗಿದೆ. ನೀವು ನೇರವಾಗಿ ನಿಮ್ಮ ಮೊಬೈಲ್‌ ಬ್ರೌಸರ್ನಲ್ಲಿ www.kannada.filmibeat.com ಎಂದು ಟೈಪ್‌ ಮಾಡಿದರೂ ಸಾಕು, ಮನೋರಂಜನಾ ಲೋಕಕ್ಕೆ ನಿಮಗೊಂದು ಹೃದಯಸ್ಪರ್ಶಿ ಸ್ವಾಗತ ದೊರೆಯುತ್ತದೆ.

Filmibeat Kannada Entertainment News Portal Gets New Design

ಕಾಲಿಡುವ ಮುನ್ನ...

ನಿಮ್ಮ ಮೊಬೈಲ್‌ ಪರದೆಯ ಮೇಲೆ ಫಿಲ್ಮಿ ಬೀಟ್ ಕನ್ನಡ ಮೂಡುತ್ತಿದ್ದಂತೆ ಕಣ್ಣಿಗೆ ಬೀಳುವುದು ಟಾಪ್ ೫ ಸುದ್ದಿಗಳು. ಯಾವ ಸುದ್ದಿಯನ್ನು ಹೆಚ್ಚು ಓದಲಾಗುತ್ತಿದೆ ಎಂಬ ಆಧಾರದ ಮೇಲೆ ನಿಮಗಿಲ್ಲಿ ಸೈಟ್‌ಗೆ ಸ್ವಾಗತ ಸಿಗುತ್ತದೆ.

ಹಾಗೆ, ಕೆಳಗೆ ಸ್ಕ್ರಾಲ್ ಮಾಡಿದರೆ ನಿಮ್ಮ ಕಣ್ಣಿಗೆ ಬೀಳುವುದು ಸಿನಿ ಸಮಾಚಾರ. ಇಲ್ಲಿ ಕನ್ನಡ ಚಿತ್ರಗಳ ಎಲ್ಲ ರೀತಿಯ ಸುದ್ದಿಗಳನ್ನು ನೀಡಲಾಗುತ್ತದೆ. ಒಂದು ಸಿನಿಮಾ ಶುರುವಿನಿಂದ ಹಿಡಿದು, ಬಿಡುಗಡೆ, ರಿಲೀಸ್ ನಂತರದ ಅಪ್ ಡೇಟ್ ದೊರೆಯುತ್ತದೆ. ಚಿತ್ರರಂಗದ ಎಲ್ಲ ರೀತಿಯ ಬೆಳವಣಿಗೆ, ಬ್ರೇಕಿಂಗ್ ಸುದ್ದಿಗಳು, ಸ್ಟಾರ್ ಸಿನಿಮಾ ಮತ್ತು ವೈಯಕ್ತಿಕ ಸಮಾಚಾರಗಳನ್ನ ತಿಳಿಯಬಹುದು.

ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಯ ಸಿನಿಮಾಗಳ ಸುದ್ದಿಗಳು ಪ್ರತ್ಯೇಕ ವಿಭಾಗಗಳಲ್ಲಿ ಸಿಗುತ್ತವೆ. ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಪ್ಯಾನ್ ಇಂಡಿಯಾ ಸುದ್ದಿಗಳನ್ನು ನೀಡುತ್ತೇವೆ, ನಿಮ್ಮ ಓದಿನ ಖುಷಿಯಾಗಿದೆ. ಉಳಿದಂತೆ ಸೆಕ್ಷನ್ ಗಳು ಹೀಗಿವೆ...

ವಿಮರ್ಶೆ: ಪ್ರತಿ ಶುಕ್ರವಾರ ಬಿಡುಗಡೆ ಆಗುವ ಸಿನಿಮಾಗಳು ಹೇಗಿವೆ, ಒಂದು ಸಿನಿಮಾ ಪ್ಲಸ್ ಏನು, ಮೈನಸ್ ಏನು, ನೀವು ಆ ಸಿನಿಮಾ ನೋಡಬಹುದು ಎನ್ನುವ ಮಾಹಿತಿಗಾಗಿ ಈ ಸೆಕ್ಷನ್ ಗೆ ಹೋಗಬೇಕು.

ಟಿವಿ: ಸಿನಿಮಾ ಮಾತ್ರವಲ್ಲದೆ ಸಣ್ಣ ಪರದೆ ಅಂದರೆ, ಟಿವಿ ಜಗತ್ತಿನ ದಿನನಿತ್ಯದ ಬೆಳವಣಿಗೆ ವಿವರ ಇಲ್ಲಿ ಸಿಗುತ್ತದೆ. ರಿಯಾಲಿಟಿ ಶೋಗಳು, ಧಾರಾವಾಹಿಗಳ ಸುದ್ದಿಗಳು, ಟಿವಿ ಸ್ಟಾರ್ ಗಳು ವಿಷಯಗಳು ಇಲ್ಲಿ ಓದಬಹುದು.

Filmibeat Kannada Entertainment News Portal Gets New Design

ಸಂದರ್ಶನ: ಚಿತ್ರರಂಗದ ತಾರೆಯರು, ನಿರ್ದೇಶಕರು, ತಾಂತ್ರಿಕ ವರ್ಗ ಹೀಗೆ ಅನೇಕ ನೇರ ಮಾತುಗಳನ್ನು ಇಲ್ಲ ಓದಬಹುದು. ಅವರ ಅನುಭವ, ಅವರ ಆಪ್ತ ಮಾತುಗಳು ಇರುತ್ತವೆ.

ಫೀಚರ್ಸ್: ಒಂದು ರೀತಿಯ ಸುದ್ದಿಗಳು ಹಿಂದೆ ಓಡುವ ಬದಲು, ಫೀಚರ್ಸ್ ನಲ್ಲಿ ಬೇರೆ ಬೇರೆ ರೀತಿಯ ಸುದ್ದಿಗಳನ್ನು ಓದಬಹುದು. ಚಿತ್ರರಂಗದ ದಂತಕಥೆಗಳು, ಅವರು ನಡೆದು ಬಂದ ಹಾದಿ, ಚಿತ್ರರಂಗದ ಸ್ವಾರಸ್ಯಕರ ಸಂಗತಿಗಳು, ಸ್ಫೂರ್ತಿಯ ಕಥೆಗಳು, ವಿಶಿಷ್ಟ ಲೇಖನಗಳು ಇಲ್ಲಿ ಓದಬಹುದು.

ಗಾಸಿಪ್: ಸಿನಿಮಾ ಎಂದ ಮೇಲೆ ಗಾಸಿಪ್ ಇರಲೇ ಬೇಕು. ಚಿತ್ರರಂಗದ ಇನ್ ಸೈಡ್ ಸ್ಟೋರಿಸ್ ಇಲ್ಲಿ ಕ್ಲಿಕ್ ಮಾಡಿ.

ಚಲನಚಿತ್ರಗಳು, ಸೆಲೆಬ್ರಿಟಿಗಳು: ಒಂದು ಸಿನಿಮಾದ ಪೂರ್ಣ ವಿವರ, ಅವರ ಒಬ್ಬ ಸ್ಟಾರ್ ಗಳ ಪೂರ್ಣ ಮಾಹಿತಿ ಇಲ್ಲ ಸಿಗುತ್ತದೆ. ಹೊಸಬರಿಂದ ಹಿಡಿದು, ಸೂಪರ್ ಸ್ಟಾರ್ ಗಳ ಸಿನಿ ಜರ್ನಿ ಅತಿ ದೊಡ್ಡ ಡಾಟಬೇಸ್ ಇಲ್ಲಿದೆ.

ಫೋಟೋಗಳು: ಸಿನಿಮಾ ನಟಿ, ನಟಿಯರ ಫೋಟೋಗಳು, ಪ್ರೆಸ್ ಮೀಟ್ ಫೋಟೋಗಳು, ಅಪರೂಪದ ಚಿತ್ರಗಳು, ಗ್ಲಾಮಸರ್ ಫೋಟೋಗಳು, ಮದುವೆ ಆಲ್ಬಂ ಇಲ್ಲಿ ನೋಡಬಹುದು.

ವಿಡಿಯೋ: ಸಿನಿಮಾ ಸುದ್ದಿಗಳು ಹಾಗೂ ಸಂದರ್ಶನಗಳ ವಿಡಿಯೋ ಕೂಡ ಲಭ್ಯವಿದೆ. ಇಲ್ಲಿ ವಿಡಿಯೋ ನೋಡಬಹುದು.

ಸೋಷಿಯಲ್ ಮೀಡಿಯಾ ಖಾತೆಗಳು

'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್

'ಫಿಲ್ಮಿಬೀಟ್ ಕನ್ನಡ' ಟ್ವಿಟ್ಟರ್

ಫಿಲ್ಮಿಬೀಟ್ ಕನ್ನಡ' ಇನ್ಸ್ಟಾಗ್ರಾಮ್

'ಫಿಲ್ಮಿಬೀಟ್ ಕನ್ನಡ' ಹಲೋ ಅಪ್

ಫಿಲ್ಮಿಬೀಟ್ ಕನ್ನಡ' ಈ ಮೇಲಿನ ಸಾಮಾಜಿಕ ಜಾಲತಾಣಗಳನ್ನು ಹೊಂದಿದ್ದು, ಇವುಗಳನ್ನು ಫಾಲೋ ಮಾಡುವುದರ ಮೂಲಕವೂ ಸುದ್ದಿಗಳನ್ನು ಪಡೆಯಬಹುದಾಗಿದೆ.

More from Filmibeat

English summary
Filmibeat Kannada entertainment news portal gets new design.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X