ನಾನೊಬ್ಬಳೇ ಎಂದ ರಶ್ಮಿಕಾ ಮಂದಣ್ಣ ಬಗ್ಗೆ ಹರ್ಷಿಕಾ ಪೂಣಚ್ಚ ಹೇಳಿದ್ದೇನು ?

ಕೊಡಗಿನ ಕಿನ್ನರಿ ರಶ್ಮಿಕಾ ಮಂದಣ್ಣ ಮಾಡಿಕೊಳ್ಳುವ ರಂಪ-ರಾಮಾಯಣ ಒಂದೆರಡಲ್ಲ. ಅದೇನೋ ಮಾತನಾಡಲು ಹೋಗಿ, ಇನ್ನೇನೋ ಮಾತನಾಡಿ .. ವಿನಾ ಕಾರಣ ವಿವಾದಕ್ಕೀಡಾಗುತ್ತಲೇ ಬಂದಿರುವ ರಶ್ಮಿಕಾ ಮಂದಣ್ಣ, ಸದ್ಯ .. ನಾನೇ ನಂಬರ್ ಓನ್ ಎಂದು ರಣಕೇಕೆ ಹಾಕಿದ್ದಾರೆ. ಆದರೆ .. ಇವರ ಈ ಕೇಕೆ ಹಲವರ ಅಸಹನೆ .. ಅಸಮಾಧಾನಕ್ಕೆ ಕಾರಣವಾಗಿದೆ. ರಶ್ಮಿಕಾ ಮಂದಣ್ಣ ವಿರುದ್ಧ ಆಕ್ರೋಶದ ಅಲೆ ಎದ್ದಿದೆ.

ಅದರಲ್ಲಿಯೂ ಕೊಡಗುದಿಂದ ಬಂದು ಚಿತ್ರರಂಗದಲ್ಲಿ ತಮ್ಮದೇ ಖಾಯಂ ಸ್ಥಾನವನ್ನು ಹೊಂದಿರುವ ಅನೇಕ ನಾಯಕಿಯರು ರಶ್ಮಿಕಾ ಮಂದಣ್ಣ ಹೆಸರು ಕೇಳಿಯೇ ನಿಗಿ ನಿಗಿ ಕೆಂಡ ಕಾರುತ್ತಿದ್ದಾರೆ.

Filmibeat Kannada Exclusive Harshika Poonacha on Rashmika s Only Kodava Star Comment -Forgive Her

ಅಂದಕಾಲತ್ತಿಲ್ .. ತಮ್ಮ ಅಭಿನಯದಿಂದನೇ ಕನ್ನಡಿಗರ ಹೃದಯ ಗೆದ್ದ.. ರಶ್ಮಿಕಾ ಹುಟ್ಟುವ ಮುಂಚೆಯೇ ಪರಭಾಷೆಯಲ್ಲಿ ಮಿಂಚಿದ ಘನತೆವೆತ್ತ ಪ್ರೇಮಾ ಅಂತಹ ನಾಯಕಿಯೇ ರಶ್ಮಿಕಾ ಮಂದಣ್ಣ ಅವರ ಕುರಿತು ಮಾತನಾಡಿದ್ದಾರೆ. ನಯವಾಗಿಯೇ ತಮ್ಮ ಮಾತುಗಳ ಮೂಲಕ ರಶ್ಮಿಕಾ ಮಂದಣ್ಣ ಅವರಿಗೆ ತಿವಿದಿದ್ದಾರೆ. ಅವರ ಮಟ್ಟಿಗೆ ನಾವು ಮಾತನಾಡೋದಕ್ಕೆ ಆಗೋದಿಲ್ಲ. ನಾವು ನಾವೇ, ಅವರು ಅವರೇ ಎಂದು ಹೇಳಿದ್ದಾರೆ.

ಇದರ ನಡುವೆ ಇದೀಗ ಕೂರ್ಗ್‌ನ ಮತ್ತೊಬ್ಬ ಚೆಲುವೆ ಹರ್ಷಿಕಾ ಪೂಣಚ್ಚ ಈ ವಿಚಾರದ ಕುರಿತು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ವೆಬ್ ಸೈಟ್ ಜೊತೆ ಮಾತನಾಡಿದ್ದಾರೆ. ಈ ಕುರಿತು ಫಿಲ್ಮಿ ಬೀಟ್ ಕನ್ನಡ ಜೊತೆ ಮಾತನಾಡಿರುವ ಹರ್ಷಿಕಾ ಪೂಣಚ್ಚ ತಪ್ಪು ಮನುಷ್ಯನ ಸಹಜ ಗುಣ ಬಾಯ್ತಪ್ಪಿ ರಶ್ಮಿಕಾ ಮಂದಣ್ಣ ಆ ತರ ಮಾತನಾಡಿರಬಹುದು ಎಂದು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಮೇಲೆ ನನಗೆ ಅಪಾರವಾದ ಗೌರವ ಇದೆ ಎಂದು ಹೇಳಿರುವ ಹರ್ಷಿಕಾ ಪೂಣಚ್ಚ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿನ ಅವರ ಸಾಧನೆ ಮತ್ತು ಅವರ ಬೆಳವಣಿಗೆಯ ಕುರಿತು ಅವರು ಮಾತನಾಡಲು ಮುಂದಾಗಿದ್ದರು ಅನ್ಸುತ್ತೆ ಈ ಸಮಯದಲ್ಲಿ ಎಡವಿದ್ದಾರೆ ಎನ್ನುವುದು ನನ್ನ ಭಾವನೆ ಎಂದು ಹೇಳಿದ್ದಾರೆ.

ಕೊಡಗು ಸಮುದಾಯದಿಂದ ಈ ಕ್ಷಣಕ್ಕೆ.. ಈ ಹಂತದವರೆಗೆ ಬಂದ ಮೊದಲ ನಾಯಕಿ ನಾನು ಎಂದು ಹೇಳುವುದು ಅವರ ಉದ್ದೇಶವಾಗಿದ್ದರು ಆಗಿರಬಹುದು ಎಂದಿರುವ ಹರ್ಷಿಕಾ ಪೂಣಚ್ಚ ಮಾತಿನ ಭರದಲ್ಲಿ ತಪ್ಪು ಮಾತನಾಡಿದ್ದಾರೆ ಅವರ ಮಾತುಗಳನ್ನು ಕಡೆಗಣಿಸಿ ಅವರನ್ನು ಕ್ಷಮಿಸಿ ಎಂದು ಹೇಳಿದ್ದಾರೆ.

Filmibeat Kannada Exclusive Harshika Poonacha on Rashmika s Only Kodava Star Comment -Forgive Her

ಇನ್ನು ಕೊಡವ ಕಮ್ಯುನಿಟಿಯಲ್ಲಿ ಜಡ್ಜ್ ಮಾಡ್ತಾರೆ ಎಂದು ಅವರೇನೋ ಹೇಳಿದ್ದಾರೆ ಎಂದಿರುವ ಹರ್ಷಿಕಾ ಪೂಣಚ್ಚ ಚಿತ್ರರಂಗ .. ರಾಜಕೀಯ.. ಸೇನೆ.. ಫ್ಯಾಷನ್..ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ನಮ್ಮ ಸಮುದಾಯದವರು ಇದ್ದಾರೆ, ಕೊಡವತಿಯಾಗಿ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ನಮ್ಮ ಉಡುಗೆ-ತೊಡುಗೆಗಳು ಮತ್ತು ಆಭರಣ.. ಸಂಸ್ಕ್ರತಿ ಸಂಪ್ರದಾಯದ ಕುರಿತು ಕೂಡ ನನಗೆ ಹೆಮ್ಮೆ ಇದೆ ಎಂದು ಹೇಳಿರುವ ಹರ್ಷಿಕಾ ನಮ್ಮಲ್ಲಿ ಗಂಡು-ಹೆಣ್ಣು ಎನ್ನುವ ಬೇಧ ಭಾವ ಇಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ರಶ್ಮಿಕಾ ಅವರು ಏನೋ ಹೇಳಲು ಹೋಗಿ ಇನ್ನೇನೋ ಹೇಳಿದ್ದಾರೆ. ಹೀಗಾಗಿ ಅವರನ್ನು ಕ್ಷಮಿಸಿ ಎಂದು ಹೇಳಿರುವ ಹರ್ಷಿಕಾ ಮುಂದಿನ ದಿನಗಳಲ್ಲಿ ಅವರು ಮಾತನಾಡುವಾಗ ಚೂರು ಯೋಚನೆ ಮಾಡಿ ಮಾತನಾಡಲಿ ಎನ್ನುವುದು ನನ್ನ ಆಶಯ ಎಂದು ಹೇಳಿದ್ದಾರೆ. ಪ್ರೇಮಾ ಅವರಂತಹ ನಟಿಯರನ್ನು ನೋಡಿಕೊಂಡು ಬೆಳೆದವರು ನಾವೆಲ್ಲ ಹೀಗಾಗಿ ಮುಂದೆ ಮಾತನಾಡುವಾಗ ತುಸು ಎಚ್ಚರಿಕೆಯಿಂದ ರಶ್ಮಿಕಾ ಮಂದಣ್ಣ ಮಾತನಾಡುವಂತಾಗಲಿ ಎಂದು ಕೂಡ ಹರ್ಷಿಕಾ ಹೇಳಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗ್ಯಾರಂಟಿ ನ್ಯೂಸ್ ಜೊತೆ ಕೂಡ ಮಾತನಾಡಿರುವ ಹರ್ಷಿಕಾ ಪೂಣಚ್ಛ, ಬೆಳೆಯುತ್ತಿರುವ ಹೆಣ್ಣು ಮಗು ಈ ಸಮಯದಲ್ಲಿ ನೀನು ಹೀಗೆ ಹೇಳಿದ್ದು ತಪ್ಪು, ನೀನು ಹೀಗೆ ಮಾಡಿದ್ದು ತಪ್ಪು ಎಂದು ಅವರನ್ನು ಡಿಸ್ಟರ್ಬ್ ಮಾಡುವುದು ಬೇಡ ಬೆಳಿತಿದಾರೆ, ಇನ್ನೂ ಬೆಳಿಲಿ ಎಂದು ಹೇಳಿದ್ದಾರೆ.

Take a Poll

ರಶ್ಮಿಕಾ ಮಂದಣ್ಣ ಅವರಿಗೆ ಸಲಹೆ ಕೊಡುವಷ್ಟು ನಾನು ದೊಡ್ಡವಳಲ್ಲ ಎಂದು ಹೇಳಿರುವ ಹರ್ಷಿಕಾ, ಬಂದಿರುವ ಮೂಲ ಯಾವತ್ತು ಮರೆಯಬೇಡಿ ಎಂದು ನಾನು ಕೊಡವತಿಯಾಗಿ ರಶ್ಮಿಕಾ ಅವರಿಗೆ ಹೇಳಬಹುದು ಎಂದು ಹೇಳಿದ್ದಾರೆ. ಮೂಲ ಮರೆಯದೇ ಇದ್ದಾಗ ಜನ ಕೂಡ ಅಷ್ಟೇ ಪ್ರೀತಿಯನ್ನು ಕೊಡ್ತಾರೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಹೇಳಿದ್ಧಾರೆ.

ರಶ್ಮಿಕಾ ನಮ್ಮ ಸಮುದಾಯದ ಹುಡುಗಿ ಹೀಗಾಗಿ ನಾನು ಅವರಿಗೆ ಬೆಂಬಲ ಕೊಡ್ತಿದ್ದೀನಿ ಎಂದು ಅಂದುಕೊಳ್ಳಬೇಡಿ ಯಾಕೆಂದರೆ ನಾನು ಸಾಮಾನ್ಯವಾಗಿ ಹೆಣ್ಣು ಮಕ್ಕಳ ಪರವಾಗಿ ಯಾವತ್ತು ಮಾತನಾಡುತ್ತೇನೆ ಎಂದಿರುವ ಹರ್ಷಿಕಾ, ನಾನು ರಶ್ಮಿಕಾ ಮಂದಣ್ಣ ಅವರನ್ನು ಭೇಟಿಯಾಗಿದ್ದು ಕಿರಿಕ್ ಪಾರ್ಟಿ ಚಿತ್ರದ ಸಮಯದಲ್ಲಿ ಮಾತ್ರ ಅದು ಹೊರತು ಪಡಿಸಿದರೆ ನನಗೆ ರಶ್ಮಿಕಾ ಮಂದಣ್ಣ ಅವರ ಪರಿಚಯ ಇಲ್ಲ ಎಂದು ಹೇಳಿದ್ಧಾರೆ.

More from Filmibeat

English summary
Get the exclusive on Harshika Poonacha's take on Rashmika Mandanna's Kodava comment. She urges, "It's time to forgive her."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X