ಎಕ್ಸ್ ಕ್ಲೂಸಿವ್ ; 'ಮಾಸ್ಟರ್ ಪೀಸ್' ವಿತರಣಾ ಹಕ್ಕು ಅಬ್ಬಬ್ಬಾ! ಅಷ್ಟೊಂದಾ?!

By Harshitha

'ಗೂಗ್ಲಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸಿದ ರಾಕಿಂಗ್ ಸ್ಟಾರ್ ಯಶ್, 'ಮಾಸ್ಟರ್ ಪೀಸ್' ಸಿನಿಮಾದಿಂದ ಸುಂಟರಗಾಳಿ ಎಬ್ಬಿಸಿದರೆ ಅಚ್ಚರಿ ಇಲ್ಲ ಬಿಡಿ!

ಯಾಕೆ ಅಂತ ಹೇಳ್ತೀವಿ ಕೇಳಿ, ರಾಜ್ಯಾದ್ಯಂತ ಬಿಡುಗಡೆಗೆ ರೆಡಿಯಾಗಿರುವ 'ಮಾಸ್ಟರ್ ಪೀಸ್' ಸಿನಿಮಾದ ವಿತರಣಾ ಹಕ್ಕು ಪಡೆಯುವುದಕ್ಕೆ ಇದೀಗ ವಿತರಕರು ನಾ ಮುಂದು, ತಾ ಮುಂದು ಅಂತ ಮುಗಿಬೀಳ್ತಿದ್ದಾರೆ. [ಯಶ್ ಅಭಿನಯದ 'ಮಾಸ್ಟರ್ ಪೀಸ್' ಧ್ವನಿಸುರುಳಿ ವಿಮರ್ಶೆ]

ಯಶ್ ಸಿನಿಮಾ ಅಂದ್ಮೇಲೆ ಲಾಸ್ ಅನ್ನೋ ಮಾತೇ ಇಲ್ಲ ಅನ್ನೋದು ವಿತರಕರಿಗೆ ಗ್ಯಾರೆಂಟಿ ಆಗಿರ್ಬೇಕು. ಅದಕ್ಕೆ 'ಮಾಸ್ಟರ್ ಪೀಸ್' ಸಿನಿಮಾದ ಡಿಸ್ಟ್ರಿಬ್ಯೂಷನ್ ರೈಟ್ಸ್ ಗೆ ದಾಖಲೆ ಬೆಲೆ ಕಟ್ಟಲಾಗುತ್ತಿದೆ. ಮುಂದೆ ಓದಿ......

ದಾಖಲೆ ಬೆಲೆಗೆ 'ಮಾಸ್ಟರ್ ಪೀಸ್' ಡಿಸ್ಟ್ರಿಬ್ಯೂಷನ್ ರೈಟ್ಸ್!

ದಾಖಲೆ ಬೆಲೆಗೆ 'ಮಾಸ್ಟರ್ ಪೀಸ್' ಡಿಸ್ಟ್ರಿಬ್ಯೂಷನ್ ರೈಟ್ಸ್!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬೆಲೆಗೆ ಯಶ್ ಅಭಿನಯದ, ಮಂಜು ಮಾಂಡವ್ಯ ನಿರ್ದೇಶನದ, ವಿಜಯ್ ಕಿರಗಂದೂರ್ ನಿರ್ಮಾಣದ 'ಮಾಸ್ಟರ್ ಪೀಸ್' ಡಿಸ್ಟ್ರಿಬ್ಯೂಷನ್ ರೈಟ್ಸ್ ಸೇಲ್ ಆಗುವ ಮುನ್ಸೂಚನೆ ನೀಡಿದೆ. ಆ ಬೆಲೆ ಎಷ್ಟು ಅಂತ ಕೇಳಿದ್ರೆ, ನೀವೂ ಕೂಡ ಅಬ್ಬಬ್ಬಾ..! ಅಷ್ಟೊಂದಾ..?! ಅಂತೀರಾ.! ಅದೆಷ್ಟು ಅಂತ ಹೇಳ್ತೀವಿ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ.....

'ಮಾಸ್ಟರ್ ಪೀಸ್' ವಿತರಣೆ ಬೆಲೆ ಎಷ್ಟು?

'ಮಾಸ್ಟರ್ ಪೀಸ್' ವಿತರಣೆ ಬೆಲೆ ಎಷ್ಟು?

ಮೂಲಗಳ ಪ್ರಕಾರ, 'ಮಾಸ್ಟರ್ ಪೀಸ್' ಸಿನಿಮಾದ ವಿತರಣಾ ಹಕ್ಕು ಪಡೆದುಕೊಳ್ಳುವುದಕ್ಕೆ ಬರೋಬ್ಬರಿ 30 ಕೋಟಿ ರೂಪಾಯಿ ಆಫರ್ ನೀಡಲಾಗಿದೆ. [ಚಿತ್ರಗಳು: ಅಣ್ತಮ್ಮಂದಿರಾ, ಯಶ್ 'ಅಣ್ಣಂಗೆ ಲವ್ ಆಗಿದೆ']

'ಮಾಸ್ಟರ್ ಪೀಸ್' ಡಿಸ್ಟ್ರಿಬ್ಯೂಷನ್ ರೈಟ್ಸ್ ಸೇಲ್ ಆಯ್ತಾ?

'ಮಾಸ್ಟರ್ ಪೀಸ್' ಡಿಸ್ಟ್ರಿಬ್ಯೂಷನ್ ರೈಟ್ಸ್ ಸೇಲ್ ಆಯ್ತಾ?

ನಿರ್ದೇಶಕ ಮಂಜು ಮಾಂಡವ್ಯ 'ಫಿಲ್ಮಿಬೀಟ್ ಕನ್ನಡ'ಗೆ ನೀಡಿದ ಮಾಹಿತಿ ಪ್ರಕಾರ, 'ಮಾಸ್ಟರ್ ಪೀಸ್' ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಇನ್ನೂ ಸೇಲ್ ಆಗಿಲ್ಲ. 30 ಕೋಟಿ ರೂಪಾಯಿ ಆಫರ್ ಬಂದಿರುವುದು ಸತ್ಯ. [ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಕ್ಷಮೆ ಕೇಳಿದ್ದು ಯಾಕೆ?]

30 ಕೋಟಿ ರೂಪಾಯಿ!

30 ಕೋಟಿ ರೂಪಾಯಿ!

ಬರೋಬ್ಬರಿ 30 ಕೋಟಿ ರೂಪಾಯಿ ಅಂದ್ರೆ, ಆಲ್ ಓವರ್ ಇಂಡಿಯಾ ಡಿಸ್ಟ್ರಿಬ್ಯೂಷನ್ ರೈಟ್ಸ್ ಇರಬಹುದಾ ಅಂತ ನೀವು ಕೇಳ್ಬಹುದು. ಆದ್ರೆ, ಬರೀ ಕರ್ನಾಟಕದಾದ್ಯಂತ ವಿತರಣೆ ಮಾಡುವುದಕ್ಕೆ ಮಾತ್ರ 30 ಕೋಟಿ ರೂಪಾಯಿ ಆಫರ್ ನೀಡಲಾಗಿದೆ.

 ಆಫರ್ ಕೊಟ್ಟಿರುವವರು ಯಾರು?

ಆಫರ್ ಕೊಟ್ಟಿರುವವರು ಯಾರು?

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತದ ಆಫರ್ ನೀಡಿದವರು ಯಾರು ಅನ್ನೋದನ್ನ ಮಾತ್ರ ನಿರ್ದೇಶಕ ಮಂಜು ಮಾಂಡವ್ಯ ಬಿಟ್ಟುಕೊಡಲಿಲ್ಲ.

ಜಯಣ್ಣ-ಭೋಗೇಂದ್ರ ಪಾಲಿಗೆ 'ಮಾಸ್ಟರ್ ಪೀಸ್' ವಿತರಣೆ?

ಜಯಣ್ಣ-ಭೋಗೇಂದ್ರ ಪಾಲಿಗೆ 'ಮಾಸ್ಟರ್ ಪೀಸ್' ವಿತರಣೆ?

ನಟ ಯಶ್ ಗೆ ನಿರ್ಮಾಪಕರು ಜಯಣ್ಣ-ಭೋಗೇಂದ್ರ ಸಖತ್ ಕ್ಲೋಸ್. ಯಶ್ ಇವತ್ತು ಈ ಮಟ್ಟಕ್ಕೆ ಬೆಳೆದು ನಿಲ್ಲುವಲ್ಲಿ ಜಯಣ್ಣ-ಭೋಗೇಂದ್ರ ಸಪೋರ್ಟ್ ಕೂಡ ಕಾರಣ. ಹೀಗಾಗಿ 'ಮಾಸ್ಟರ್ ಪೀಸ್' ವಿತರಣಾ ಹಕ್ಕು ಜಯಣ್ಣ ಕಂಬೈನ್ಸ್ ಪಾಲಾಗಬಹುದು ಅನ್ನುವ ಊಹೆ ಕೂಡ ಗಾಂಧಿನಗರದ ಪಂಡಿತರಲ್ಲಿ ಕಾಡುತ್ತಿದೆ.

'ಮಾಸ್ಟರ್ ಪೀಸ್' ರಿಲೀಸ್ ಯಾವಾಗ?

'ಮಾಸ್ಟರ್ ಪೀಸ್' ರಿಲೀಸ್ ಯಾವಾಗ?

ಡಿಸೆಂಬರ್ 24 ರಂದು ಕ್ರಿಸ್ಮಸ್ ಹಾಗು ಹೊಸ ವರ್ಷದ ಪ್ರಯುಕ್ತ 'ಮಾಸ್ಟರ್ ಪೀಸ್' ರಿಲೀಸ್ ಆಗುತ್ತಿದೆ. ಇಡೀ ಭಾರತದಾದ್ಯಂತ ಏಕಕಾಲಕ್ಕೆ 'ಮಾಸ್ಟರ್ ಪೀಸ್' ಸಿನಿಮಾ ರಿಲೀಸ್ ಆಗಲಿದೆ ಅಂತ ನಿರ್ದೇಶಕ ಮಂಜು ಮಾಂಡವ್ಯ 'ಫಿಲ್ಮಿಬೀಟ್ ಕನ್ನಡ'ಗೆ ತಿಳಿಸಿದರು.

ಓವರ್ ಸೀಸ್ ರಿಲೀಸ್ ಯಾವಾಗ?

ಓವರ್ ಸೀಸ್ ರಿಲೀಸ್ ಯಾವಾಗ?

ಭಾರತದಲ್ಲಿ 'ಮಾಸ್ಟರ್ ಪೀಸ್' ಸಿನಿಮಾ ಬಿಡುಗಡೆ ಆದ ಎರಡು-ಮೂರು ವಾರಗಳಲ್ಲಿ ವಿದೇಶಗಳಲ್ಲಿ ರಿಲೀಸ್ ಆಗಲಿದೆ.

ಯಾರು 'ಮಾಸ್ಟರ್ ಪೀಸ್'?

ಯಾರು 'ಮಾಸ್ಟರ್ ಪೀಸ್'?

ಯಶ್ ಮತ್ತು ಶಾನ್ವಿ ಅಭಿನಯದ ಸಿನಿಮಾ 'ಮಾಸ್ಟರ್ ಪೀಸ್'. ಸಂಭಾಷಣೆಕಾರ ಮಂಜು ಮಾಂಡವ್ಯ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಚಿತ್ರ ಇದು. ಕ್ರಾಂತಿಕಾರಿ ಭಗತ್ ಸಿಂಗ್ ಲುಕ್ ನಲ್ಲಿ ಯಶ್ ಈ ಚಿತ್ರದಲ್ಲಿ ಮಿಂಚಿದ್ದಾರೆ.

More from Filmibeat

English summary
According to the sources, Kannada Actor Yash starrer 'Masterpiece' has received an offer of Rs.30 Crores for distribution rights in Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X