'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಸ್ವೀಕರಿಸಿ ಸಂತಸ ಪಟ್ಟ ನಟಿ ರಚಿತಾ ರಾಮ್
2016ನೇ ಸಾಲಿನಲ್ಲಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಡೆಸಿದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' ಪೋಲ್ ನಲ್ಲಿ 'ಅತ್ಯುತ್ತಮ' ಎಂದು ನೀವೇ ಮತ ಹಾಕಿದ ಕಲಾವಿದರಿಗೆ, ನಿಮ್ಮೆಲ್ಲರ ಪರವಾಗಿ 'ಫಿಲ್ಮಿಬೀಟ್ ಕನ್ನಡ ತಂಡ' ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬರುತ್ತಿದೆ.
ಅದರಂತೆ ನಿನ್ನೆ (ಜುಲೈ 27) 'ಬುಲ್ ಬುಲ್' ಬೆಡಗಿ... ಡಿಂಪಲ್ ಕ್ವೀನ್ ರಚಿತಾ ರಾಮ್ ರವರಿಗೆ 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅತ್ಯುತ್ತಮ ನಟಿ - 2016
'ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2016 ರ 'ಅತ್ಯುತ್ತಮ ನಟಿ' ಡಿಂಪಲ್ ಕ್ವೀನ್ ರಚಿತಾ ರಾಮ್. ನಾಮನಿರ್ದೇಶನಗೊಂಡಿದ್ದ 12 ನಟಿಯರ ಪೈಕಿ 'ಚಕ್ರವ್ಯೂಹ' ಚಿತ್ರದ ಅಭಿನಯಕ್ಕಾಗಿ ರಚಿತಾ ರಾಮ್ ರವರಿಗೆ ಅತಿ ಹೆಚ್ಚು ಮಂದಿ ವೋಟ್ ಹಾಕಿದ್ದರು. ಓದುಗರ ಇಚ್ಛೆಯಂತೆ ರಚಿತಾ ರಾಮ್ ರವರಿಗೆ 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಲಭಿಸಿದೆ.

ರಚಿತಾ ರಾಮ್ ಗೆ ಪ್ರಶಸ್ತಿ ಪ್ರದಾನ
'ಫಿಲ್ಮಿಬೀಟ್ ಕನ್ನಡ' ಓದುಗರ ಪರವಾಗಿ ರಚಿತಾ ರಾಮ್ ರವರಿಗೆ 'ಅತ್ಯುತ್ತಮ ನಟಿ-2016' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹರ್ಷ ವ್ಯಕ್ತಪಡಿಸಿದ ರಚಿತಾ ರಾಮ್
''ಇದು ಓದುಗರೇ ಆಯ್ಕೆ ಮಾಡಿರುವುದರಿಂದ ಈ ಅವಾರ್ಡ್ ತುಂಬಾ ಸ್ಪೆಷಲ್. ಎಲ್ಲ ಫಿಲ್ಮಿಬೀಟ್ ಕನ್ನಡ ಓದುಗರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ'' ಎಂದು 'ಫಿಲ್ಮಿಬೀಟ್ ಕನ್ನಡ' ಟ್ರೋಫಿ ಹಿಡಿದು ರಚಿತಾ ರಾಮ್ ಸಂಭ್ರಮಿಸಿದರು.

'ಫಿಲ್ಮಿಬೀಟ್ ಕನ್ನಡ' ತಂಡ ಉಪಸ್ಥಿತಿ
ಇದೇ ವೇಳೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡದಿಂದ ಹರ್ಷಿತಾ ರಾಕೇಶ್, ಭರತ್ ಕುಮಾರ್, ರಾಘವೇಂದ್ರ.ಸಿ.ವಿ ಹಾಜರಿದ್ದರು.


Click it and Unblock the Notifications











