»   » 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಸ್ವೀಕರಿಸಿದ ಹಾಸ್ಯ ನಟ ಸಾಧು ಕೋಕಿಲ

'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಸ್ವೀಕರಿಸಿದ ಹಾಸ್ಯ ನಟ ಸಾಧು ಕೋಕಿಲ

Posted By:
Subscribe to Filmibeat Kannada

2016ನೇ ಸಾಲಿನಲ್ಲಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಡೆಸಿದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' ಪೋಲ್ ನಲ್ಲಿ 'ಅತ್ಯುತ್ತಮ' ಎಂದು ನೀವೇ ಮತ ಹಾಕಿದ ಕಲಾವಿದರಿಗೆ, ನಿಮ್ಮೆಲ್ಲರ ಪರವಾಗಿ 'ಫಿಲ್ಮಿಬೀಟ್ ಕನ್ನಡ ತಂಡ' ಪ್ರಶಸ್ತಿಯನ್ನ ನೀಡಿ ಗೌರವಿಸುತ್ತಾ ಬರುತ್ತಿದೆ.

ಓದುಗರ ಆಯ್ಕೆ: 2016 ರ 'ಅತ್ಯುತ್ತಮ ಹಾಸ್ಯನಟ' ಗರಿ ಸಾಧು ಕೋಕಿಲ ಮುಡಿಗೆ

ಅದರಂತೆ ನಿನ್ನೆ (ಆಗಸ್ಟ್ 8) ಹಾಸ್ಯ ನಟ ಸಾಧು ಕೋಕಿಲ ರವರಿಗೆ 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅತ್ಯುತ್ತಮ ಹಾಸ್ಯ ನಟ - 2016

'ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2016 ರ 'ಅತ್ಯುತ್ತಮ ಹಾಸ್ಯ ನಟ' ಸಾಧು ಕೋಕಿಲ. ನಾಮ ನಿರ್ದೇಶನಗೊಂಡಿದ್ದ 6 ಹಾಸ್ಯ ಕಲಾವಿದರ ಪೈಕಿ 'ಶಿವಲಿಂಗ' ಚಿತ್ರದ ಕಾಮಿಡಿ ಪಾತ್ರದ ಅಭಿನಯಕ್ಕಾಗಿ ನಟ ಸಾಧು ಕೋಕಿಲ ರವರಿಗೆ ಅತಿ ಹೆಚ್ಚು ಮಂದಿ ವೋಟ್ ಹಾಕಿದ್ದರು. ಓದುಗರ ಇಚ್ಛೆಯಂತೆ ಸಾಧು ಕೋಕಿಲ ರವರಿಗೆ 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಲಭಿಸಿದೆ.

ಸಾಧು ಕೋಕಿಲ ರವರಿಗೆ ಪ್ರಶಸ್ತಿ ಪ್ರದಾನ

'ಫಿಲ್ಮಿಬೀಟ್ ಕನ್ನಡ' ಓದುಗರ ಪರವಾಗಿ ಸಾಧು ಕೋಕಿಲ ರವರಿಗೆ 'ಅತ್ಯುತ್ತಮ ಹಾಸ್ಯ ನಟ-2016' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಓದುಗರಿಗೆ ಧನ್ಯವಾದ ಹೇಳಿದ ಸಾಧು ಕೋಕಿಲ

ತಮಗೆ ವೋಟ್ ಹಾಕಿದ ಸಾವಿರಾರು ಓದುಗರಿಗೆ ಸಾಧು ಕೋಕಿಲ ಧನ್ಯವಾದ ಅರ್ಪಿಸಿದರು.

ಫಿಲ್ಮಿಬೀಟ್ ಕನ್ನಡ ತಂಡ ಉಪಸ್ಥಿತಿ

ಇದೇ ವೇಳೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡದಿಂದ ಹರ್ಷಿತಾ ರಾಕೇಶ್, ಭರತ್ ಕುಮಾರ್, ನವೀನ್, ರಾಘವೇಂದ್ರ.ಸಿ.ವಿ ಹಾಜರಿದ್ದರು.

English summary
Filmibeat Kannada/Oneindia Kannada team felicitated Kannada Actor Sadhu Kokila. Sadhu Kokila Chosen as 'Best Comedian 2016' by Our Readers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada