For Quick Alerts
  ALLOW NOTIFICATIONS  
  For Daily Alerts

  ಓದುಗರ ಮನಗೆದ್ದ ನವನಟಿ ಶ್ರದ್ಧಾ ಶ್ರೀನಾಥ್ ಗೆ ಫಿಲ್ಮಿಬೀಟ್ ಪ್ರಶಸ್ತಿ ಪ್ರದಾನ

  By Bharath Kumar
  |

  2016ನೇ ಸಾಲಿನ ನಿಮ್ಮ ಫಿಲ್ಮಿಬೀಟ್ ಕನ್ನಡದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' ಪೋಲ್ ನಲ್ಲಿ ಸಾವಿರಾರು ಓದುಗರು 'ನಟಿ ಶ್ರದ್ಧಾ ಶ್ರೀನಾಥ್ ಅವರನ್ನು 'ಅತ್ಯುತ್ತಮ ಉದಯೋನ್ಮುಖ ನಟಿ' ಎಂದು ಪ್ರೀತಿಯಿಂದ ಆಯ್ಕೆ ಮಾಡಿದ್ದರು.['ತಿಥಿ' ಸ್ಟಾರ್ 'ಗಡ್ಡಪ್ಪ'ನಿಗೆ ಪ್ರಶಸ್ತಿ ಪ್ರದಾನ ಮಾಡಿದ ಫಿಲ್ಮಿಬೀಟ್ ಕನ್ನಡ ]

  ಓದುಗರ ಇಚ್ಛೆಯಂತೆ ಶ್ರದ್ಧಾ ಶ್ರೀನಾಥ್ ಅವರಿಗೆ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ತಂಡದಿಂದ ನಿನ್ನೆ (ಏಪ್ರಿಲ್ 24) ''ಅತ್ಯುತ್ತಮ ಉದಯೋನ್ಮುಖ ನಟಿ' ಪ್ರಶಸ್ತಿ ಪ್ರದಾನ ಮಾಡಲಾಯಿತು.

  'ಅತ್ಯುತ್ತಮ ಉದಯೋನ್ಮುಖ ನಟಿ' ಶ್ರದ್ಧಾ ಶ್ರೀನಾಥ್

  'ಅತ್ಯುತ್ತಮ ಉದಯೋನ್ಮುಖ ನಟಿ' ಶ್ರದ್ಧಾ ಶ್ರೀನಾಥ್

  'ಫಿಲ್ಮಿಬೀಟ್ ಕನ್ನಡ' ಓದುಗರ ತೀರ್ಪಿನಂತೆ ''ಅತ್ಯುತ್ತಮ ಉದಯೋನ್ಮುಖ ನಟಿ'-2016' ಪ್ರಶಸ್ತಿಗೆ 'ಯುಟರ್ನ್' ನಾಯಕಿ ಶ್ರದ್ಧಾ ಶ್ರೀನಾಥ್ ಪಾತ್ರರಾಗಿದ್ದರು. ಜನರು ಆಯ್ಕೆ ಮಾಡಿದ ಪ್ರಶಸ್ತಿಯನ್ನ ಸ್ವೀಕರಿಸಲು ಜಯನಗರ 3ನೇ ಹಂತದಲ್ಲಿರುವ ಒನ್ ಇಂಡಿಯಾ ಕಛೇರಿಗೆ ಪ್ರೀತಿಯಿಂದ ಆಗಮಿಸಿದ್ದರು.['ಫಿಲ್ಮಿಬೀಟ್ ಕನ್ನಡ'ದಿಂದ 'ರಾಮಾ ರಾಮಾ ರೇ' ಚಿತ್ರಕ್ಕೆ ವಿಶೇಷ ಪ್ರಶಸ್ತಿ]

  ಪ್ರಶಸ್ತಿ ಪ್ರದಾನ ಮಾಡಿದ ಸಂಪಾದಕ ಶಾಮಸುಂದರ

  ಪ್ರಶಸ್ತಿ ಪ್ರದಾನ ಮಾಡಿದ ಸಂಪಾದಕ ಶಾಮಸುಂದರ

  'ಯುಟರ್ನ್' ನಾಯಕಿ ಶ್ರದ್ಧಾ ಶ್ರೀನಾಥ್' ರವರಿಗೆ 'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಸಂಪಾದಕ ಎಸ್.ಕೆ.ಶಾಮಸುಂದರ ಅವರು 'ಅತ್ಯುತ್ತಮ ಉದಯೋನ್ಮುಖ ನಟಿ' ಪ್ರಶಸ್ತಿ ಪ್ರದಾನ ಮಾಡಿದರು.['ಫಿಲ್ಮಿಬೀಟ್ ಕನ್ನಡ'ದಿಂದ 'ಕರ್ವ' ನಿರ್ದೇಶಕರಿಗೆ ಪ್ರಶಸ್ತಿ ಪ್ರದಾನ]

  'ಫಿಲ್ಮಿಬೀಟ್ ತಂಡ' ಉಪಸ್ಥಿತಿ

  'ಫಿಲ್ಮಿಬೀಟ್ ತಂಡ' ಉಪಸ್ಥಿತಿ

  ಇದೇ ವೇಳೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡದಿಂದ ಹರ್ಷಿತಾ ರಾಕೇಶ್, ಭರತ್ ಕುಮಾರ್, ಸುನೀಲ್, ರಾಘವೇಂದ್ರ, ರಾಘವೇಂದ್ರ.ಸಿ.ವಿ ಹಾಗೂ ಸುಹಾಸ್ ಹಾಜರಿದ್ದರು.[ಜನ ಮೆಚ್ಚಿದ 'ಅರ್ಜುನ್ ಜನ್ಯ'ಗೆ ಫಿಲ್ಮಿಬೀಟ್ ಕಡೆಯಿಂದ ಪ್ರೀತಿಯ ಸನ್ಮಾನ ]

  ಧನ್ಯವಾದ ಹೇಳಿದ ಶ್ರದ್ಧಾ ಶ್ರೀನಾಥ್!

  ಧನ್ಯವಾದ ಹೇಳಿದ ಶ್ರದ್ಧಾ ಶ್ರೀನಾಥ್!

  ಪ್ರಶಸ್ತಿ ಪಡೆದು ಮಾತನಾಡಿದ ಶ್ರದ್ಧಾ ಶ್ರೀನಾಥ್, ವೋಟ್ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನ ಹೇಳಿದರು. ಹಾಗೂ 'ಯುಟರ್ನ್' ಚಿತ್ರದ ಬಗ್ಗೆ ಮತ್ತು ಚಿತ್ರತಂಡದ ಬಗ್ಗೆ ಸಂತಸ ವ್ಯಕ್ತಪಡಿಸಿದರು.[ಓದುಗರ ಆಯ್ಕೆ: ರವಿಚಂದ್ರನ್ ಗೆ 'ಫಿಲ್ಮಿಬೀಟ್ ಕನ್ನಡ'ದಿಂದ ಪ್ರೀತಿಯ ಸನ್ಮಾನ ]

  ವಿಡಿಯೋ ನಿರೀಕ್ಷಿಸಿ...

  ವಿಡಿಯೋ ನಿರೀಕ್ಷಿಸಿ...

  'ಫಿಲ್ಮಿಬೀಟ್ ಕನ್ನಡ ಅವಾರ್ಡ್' ಸಮಾರಂಭದ ಎಕ್ಸ್ ಕ್ಲೂಸಿವ್ ವಿಡಿಯೋವನ್ನ ಫಿಲ್ಮಿಬೀಟ್ ಕನ್ನಡ ಯ್ಯೂಟ್ಯೂಬ್ ಚಾನಲ್ ನಲ್ಲಿ ನೋಡಿ... ಲಿಂಕ್ ಇಲ್ಲಿದೆ....

  English summary
  Filmibeat Kannada/Oneindia Kannada team felicitated Actress Shraddha Srinath Today (April 24th). Shraddha Srinath Chosen as 'Best Debutante Actress' for U-turn Movie by Our Readers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X