ಭರವಸೆ ಮೂಡಿಸಿದ ಯುವ ನಿರ್ದೇಶಕನಿಗೆ ಫಿಲ್ಮಿಬೀಟ್ ಪ್ರಶಸ್ತಿ ಪ್ರದಾನ
2016ನೇ ಸಾಲಿನಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ ನಡೆಸಿದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' ಪೋಲ್ ನಲ್ಲಿ 'ಅತ್ಯುತ್ತಮ'ವೆಂದು ಆಯ್ಕೆಯಾದ ಚಿತ್ರಗಳಿಗೆ, ಕಲಾವಿದರಿಗೆ, ಮತ್ತು ತಂತ್ರಜ್ಞರಿಗೆ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗುತ್ತಿದೆ. ಓದುಗರ ಇಚ್ಛೆಯಂತೆ ಅತಿ ಹೆಚ್ಚು ಮತ ಪಡೆದ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಜೊತೆಗೆ ಕೆಲವು ಚಿತ್ರಗಳನ್ನ ಹಾಗೂ ತಂತ್ರಜ್ಞರನ್ನ ವಿಶೇಷವಾಗಿ ಗುರುತಿಸಿ ಪ್ರಶಸ್ತಿ ನೀಡಲು ನಿಮ್ಮ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ನಿರ್ಧರಿಸಿತ್ತು. ಅದರ ಅನ್ವಯ ಚೊಚ್ಚಲ ಚಿತ್ರದ ಮೂಲಕ ಕನ್ನಡದಲ್ಲಿ ಹೊಸ ಭರವಸೆ ಮೂಡಿಸಿರುವ 'ಮಮ್ಮಿ ಸೇವ್ ಮಿ' ಚಿತ್ರದ ನಿರ್ದೇಶಕ ಲೋಹಿತ್ ಅವರಿಗೆ 'ಉದಯೋನ್ಮುಖ ನಿರ್ದೇಶಕ' ಎಂಬ ಪ್ರಶಸ್ತಿಯನ್ನ ನೀಡಿ ಸನ್ಮಾನಿಸಲಾಗಿದೆ.

'ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ' ಲೋಹಿತ್
'ಮಮ್ಮಿ ಸೇವ್ ಮಿ' ಚಿತ್ರದ ನಿರ್ದೇಶಕ ಲೋಹಿತ್ ಅವರನ್ನ 'ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ' ಎಂದು ನಿಮ್ಮ ಫಿಲ್ಮಿಬೀಟ್/ಒನ್ ಇಂಡಿಯಾ ಆಯ್ಕೆ ಮಾಡಿದೆ. 2016ನೇ ತೆರೆಕಂಡಿದ್ದ ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸುವುದರ ಜೊತೆಗೆ ಶತದಿನೋತ್ಸವವನ್ನ ಆಚರಿಸಿಕೊಂಡಿತ್ತು. ಪ್ರಿಯಾಂಕಾ ಉಪೇಂದ್ರ, ಬೇಬಿ ಯುವಿನಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕಂಪ್ಲೀಟ್ ಹಾರರ್ ಥ್ರಿಲ್ಲಿಂಗ್ ಚಿತ್ರವಾಗಿದ್ದು, ಮಮ್ಮಿ ಸೇವ್ ಮಿ, ಮೇಕಿಂಗ್ ವಿಷ್ಯದಲ್ಲಿ ಹೆಚ್ಚು ಗಮನ ಸೆಳದಿತ್ತು. ಹಿನ್ನಲೆ ಸಂಗೀತ ಮತ್ತು ಕ್ಯಾಮೆರಾ ವರ್ಕ್ ಮೋಡಿ ಮಾಡಿತ್ತು. ಹೀಗಾಗಿ, ಈ ಚಿತ್ರದ ನಿರ್ದೇಶಕರನ್ನ ಗುರುತಿಸಿ ಸನ್ಮಾನಿಸಲಾಗಿದೆ.[ವಿಮರ್ಶೆ: ಗುಂಡಿಗೆ ಗಟ್ಟಿ ಮಾಡಿಕೊಂಡು ಮಿಸ್ ಮಾಡದೇ 'ಮಮ್ಮಿ' ನೋಡಿ]

ನಿರ್ದೇಶಕ ಲೋಹಿತ್ ಗೆ ಗೌರವ! '
'ಮಮ್ಮಿ ಸೇವ್ ಮಿ' ಅಂತಹ ಒಂದೊಳ್ಳೆ ಸಿನಿಮಾವನ್ನ ನೀಡಿದ ಯುವ ನಿರ್ದೇಶಕ ಲೋಹಿತ್ ಅವರಿಗೆ ನಿಮ್ಮ ಫಿಲ್ಮಿಬೀಟ್ ಕನ್ನಡ ಓದುಗರ ಪರವಾಗಿ 'ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ' ಪ್ರಶಸ್ತಿಯನ್ನ ನೀಡಿ ಗೌರವಿಸಿದೆ.['ಫಿಲ್ಮಿಬೀಟ್ ಕನ್ನಡ'ದಿಂದ 'ರಾಮಾ ರಾಮಾ ರೇ' ಚಿತ್ರಕ್ಕೆ ವಿಶೇಷ ಪ್ರಶಸ್ತಿ]

ಪ್ರಶಸ್ತಿ ಪ್ರದಾನ ಮಾಡಿದ ಸಂಪಾದಕ ಶಾಮಸುಂದರ
'ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ' ಪ್ರಶಸ್ತಿಗೆ ಆಯ್ಕೆಯಾದ 'ಮಮ್ಮಿ ಸೇವ್ ಮಿ' ಚಿತ್ರದ ನಿರ್ದೇಶಕ ಲೋಹಿತ್ ಅವರಿಗೆ 'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಸಂಪಾದಕರಾದ ಎಸ್.ಕೆ. ಶಾಮಸುಂದರ ಅವರು ಪ್ರಶಸ್ತಿ ಪ್ರದಾನ ಮಾಡಿದರು.['ತಿಥಿ' ಸ್ಟಾರ್ 'ಗಡ್ಡಪ್ಪ'ನಿಗೆ ಪ್ರಶಸ್ತಿ ಪ್ರದಾನ ಮಾಡಿದ ಫಿಲ್ಮಿಬೀಟ್ ಕನ್ನಡ]

ಒನ್ ಇಂಡಿಯಾ ಕಛೇರಿಯಲ್ಲಿ ಸನ್ಮಾನ
ಬೆಂಗಳೂರಿನ ಜಯನಗರ 3ನೇ ಹಂತದಲ್ಲಿರುವ ನಮ್ಮ ಒನ್ ಇಂಡಿಯಾ/ಫಿಲ್ಮಿಬೀಟ್ ಕಚೇರಿಗೆ ಪ್ರೀತಿಯಿಂದ ಆಗಮಿಸಿದ್ದ ನಿರ್ದೇಶಕ ಲೋಹಿತ್ ಅವರಿಗೆ 'ಫಿಲ್ಮಿಬೀಟ್ ಕನ್ನಡ' ತಂಡ ಆತ್ಮೀಯವಾಗಿ ಸನ್ಮಾನಿಸಿತು.['ಫಿಲ್ಮಿಬೀಟ್ ಕನ್ನಡ'ದಿಂದ 'ಕರ್ವ' ನಿರ್ದೇಶಕರಿಗೆ ಪ್ರಶಸ್ತಿ ಪ್ರದಾನ]

'ಫಿಲ್ಮಿಬೀಟ್ ತಂಡ' ಉಪಸ್ಥಿತಿ
ಇದೇ ವೇಳೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡದಿಂದ ಹರ್ಷಿತಾ ರಾಕೇಶ್, ಭರತ್ ಕುಮಾರ್, ರಾಘವೇಂದ್ರ.ಸಿ.ವಿ ಹಾಗೂ ಸುಹಾಸ್ ಹಾಜರಿದ್ದರು.[ಓದುಗರ ಆಯ್ಕೆ: ರವಿಚಂದ್ರನ್ ಗೆ 'ಫಿಲ್ಮಿಬೀಟ್ ಕನ್ನಡ'ದಿಂದ ಪ್ರೀತಿಯ ಸನ್ಮಾನ]

ಪ್ರಶಸ್ತಿ ಪ್ರದಾನ ವಿಡಿಯೋ ನೋಡಿ
'ಫಿಲ್ಮಿಬೀಟ್ ಕನ್ನಡ ಅವಾರ್ಡ್' ಸಮಾರಂಭದ ಎಕ್ಸ್ ಕ್ಲೂಸಿವ್ ವಿಡಿಯೋ ಇಲ್ಲಿದೆ ನೋಡಿ.


Click it and Unblock the Notifications











