ಓದುಗರ ಆಯ್ಕೆ: ರವಿಚಂದ್ರನ್ ಗೆ 'ಫಿಲ್ಮಿಬೀಟ್ ಕನ್ನಡ'ದಿಂದ ಪ್ರೀತಿಯ ಸನ್ಮಾನ

By Harshitha

2016ನೇ ಸಾಲಿನ ನಿಮ್ಮ ಫಿಲ್ಮಿಬೀಟ್ ಕನ್ನಡದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' ಪೋಲ್ ನಲ್ಲಿ ಸಾವಿರಾರು ಓದುಗರು ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ರವರನ್ನು 'ಅತ್ಯುತ್ತಮ ನಿರ್ದೇಶಕ' ಎಂದು ಪ್ರೀತಿಯಿಂದ ಆಯ್ಕೆ ಮಾಡಿದ್ದರು.[ಓದುಗ ಪ್ರಭುಗಳ ತೀರ್ಪು: 2016ರ 'ಅತ್ಯುತ್ತಮ ನಿರ್ದೇಶಕ' ವಿ.ರವಿಚಂದ್ರನ್.!]

ಓದುಗರ ಇಚ್ಛೆಯಂತೆ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ರವರಿಗೆ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ತಂಡದಿಂದ ಇಂದು 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿ ಪ್ರದಾನ ಮಾಡಲಾಯಿತು.

'ಬೆಸ್ಟ್ ಡೈರೆಕ್ಟರ್' ವಿ.ರವಿಚಂದ್ರನ್

'ಬೆಸ್ಟ್ ಡೈರೆಕ್ಟರ್' ವಿ.ರವಿಚಂದ್ರನ್

'ಫಿಲ್ಮಿಬೀಟ್ ಕನ್ನಡ' ಓದುಗರ ತೀರ್ಪಿನಂತೆ 'ಅಪೂರ್ವ' ಚಿತ್ರದ ನಿರ್ದೇಶನಕ್ಕಾಗಿ 'ಅತ್ಯುತ್ತಮ ನಿರ್ದೇಶಕ-2016' ಪ್ರಶಸ್ತಿಯನ್ನ ವಿ.ರವಿಚಂದ್ರನ್ ತಮ್ಮದಾಗಿಸಿಕೊಂಡರು.

ಇಂದು ಪ್ರಶಸ್ತಿ ಪ್ರದಾನ

ಇಂದು ಪ್ರಶಸ್ತಿ ಪ್ರದಾನ

'ಫಿಲ್ಮಿಬೀಟ್ ಕನ್ನಡ' ಓದುಗರ ಪರವಾಗಿ 'ಕನಸುಗಾರ' ವಿ.ರವಿಚಂದ್ರನ್ ರವರಿಗೆ 'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಸಂಪಾದಕ ಎಸ್.ಕೆ.ಶಾಮಸುಂದರ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿ ಪ್ರದಾನ ಮಾಡಿದರು.

ರವಿಚಂದ್ರನ್ ರವರ ಮನೆಯಲ್ಲಿ ಸನ್ಮಾನ

ರವಿಚಂದ್ರನ್ ರವರ ಮನೆಯಲ್ಲಿ ಸನ್ಮಾನ

ಬೆಂಗಳೂರಿನ ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ವಿ.ರವಿಚಂದ್ರನ್ ರವರ ನಿವಾಸಕ್ಕೆ ಭೇಟಿ ನೀಡಿದ ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡ 'ಕನಸುಗಾರ'ನಿಗೆ ಆತ್ಮೀಯವಾಗಿ ಸನ್ಮಾನಿಸಿತು.

ಪ್ರಶಸ್ತಿ ಸ್ವೀಕರಿಸಿ ಸಂತಸ ಪಟ್ಟ ವಿ.ರವಿಚಂದ್ರನ್

ಪ್ರಶಸ್ತಿ ಸ್ವೀಕರಿಸಿ ಸಂತಸ ಪಟ್ಟ ವಿ.ರವಿಚಂದ್ರನ್

''ಸಾಮಾಜಿಕ ಜಾಲತಾಣಗಳಲ್ಲಿ 'ಅಪೂರ್ವ' ಚಿತ್ರಕ್ಕೆ ಮೊದಮೊದಲು ನೆಗೆಟಿವ್ ಕಾಮೆಂಟ್ಸ್ ಬಂತು. ಎರಡು ವಾರಗಳು ಕಳೆದ ನಂತರ ತುಂಬಾ ಪಾಸಿಟಿವ್ ರಿಯಾಕ್ಷನ್ ಬರಲು ಶುರು ಆಯ್ತು. ಈಗ ಓದುಗರೇ 'ಅಪೂರ್ವ' ಚಿತ್ರಕ್ಕಾಗಿ ನನ್ನನ್ನ 'ಅತ್ಯುತ್ತಮ ನಿರ್ದೇಶಕ'ನಾಗಿ ಆಯ್ಕೆ ಮಾಡಿರುವುದು ಖುಷಿ ಕೊಟ್ಟಿದೆ. ಇದು ಓದಗರ ಅವಾರ್ಡ್ ಆಗಿರುವುದರಿಂದ ನನಗೆ ಹೆಮ್ಮೆ ಎನಿಸಿದೆ'' ಎಂದು ವಿ.ರವಿಚಂದ್ರನ್ 'ಫಿಲ್ಮಿಬೀಟ್ ಕನ್ನಡ' ತಂಡದೊಂದಿಗೆ ಸಂತಸ ವ್ಯಕ್ತಪಡಿಸಿದರು.

'ಫಿಲ್ಮಿಬೀಟ್ ತಂಡ' ಉಪಸ್ಥಿತಿ

'ಫಿಲ್ಮಿಬೀಟ್ ತಂಡ' ಉಪಸ್ಥಿತಿ

ಇದೇ ವೇಳೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡದಿಂದ ಹರ್ಷಿತಾ ರಾಕೇಶ್, ಭರತ್ ಕುಮಾರ್, ರಾಘವೇಂದ್ರ.ಸಿ.ವಿ ಹಾಗೂ ಸುಹಾಸ್ ಹಾಜರಿದ್ದರು.

ಸಂದರ್ಶನ ನಿರೀಕ್ಷಿಸಿ...

ಸಂದರ್ಶನ ನಿರೀಕ್ಷಿಸಿ...

'ಫಿಲ್ಮಿಬೀಟ್ ಕನ್ನಡ ಅವಾರ್ಡ್' ಸ್ವೀಕರಿಸಿ, ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡಕ್ಕೆ ವಿ.ರವಿಚಂದ್ರನ್ ನೀಡಿರುವ ಎಕ್ಸ್ ಕ್ಲೂಸಿವ್ ಸಂದರ್ಶನ ಸದ್ಯದಲ್ಲಿಯೇ ಪ್ರಕಟವಾಗಲಿದೆ. ನಿರೀಕ್ಷಿಸಿ...

More from Filmibeat

English summary
Filmibeat Kannada/Oneindia Kannada team felicitated Crazy Star V.Ravichandran today (March 13th). V.Ravichandran chosen as 'Best Director' by our Readers for Kannada Movie 'Apoorva'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X