'ಫಿಲ್ಮಿಬೀಟ್ ಕನ್ನಡ'ದಿಂದ 'ಕರ್ವ' ನಿರ್ದೇಶಕರಿಗೆ ಪ್ರಶಸ್ತಿ ಪ್ರದಾನ
2016ನೇ ಸಾಲಿನ ನಿಮ್ಮ ಫಿಲ್ಮಿಬೀಟ್ ಕನ್ನಡದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' ಪೋಲ್ ನಲ್ಲಿ ಸಾವಿರಾರು ಓದುಗರು ಕರ್ವ ಚಿತ್ರವನ್ನ 'ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ' ಎಂದು ಪ್ರೀತಿಯಿಂದ ಆಯ್ಕೆ ಮಾಡಿದ್ದರು.[2016ರ 'ಅತ್ಯುತ್ತಮ ಪ್ರಯೋಗಾತ್ಮಕ' ಚಿತ್ರದ ಕಿರೀಟ ಯಾರಿಗೆ?]
ಓದುಗರ ಇಚ್ಛೆಯಂತೆ ಕರ್ವ ಚಿತ್ರಕ್ಕೆ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ತಂಡದಿಂದ ನಿನ್ನೆ 'ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ 'ಕರ್ವ'
'ಫಿಲ್ಮಿಬೀಟ್ ಕನ್ನಡ' ಓದುಗರ ತೀರ್ಪಿನಂತೆ 'ಕರ್ವ' ಚಿತ್ರಕ್ಕೆ 'ಅತ್ಯುತ್ತಮ ಪ್ರಯೋಗಾತ್ಮಕ-2016' ಪ್ರಶಸ್ತಿಯನ್ನ ನಿರ್ದೇಶಕ ನವನೀತ್ ಪಡೆದರು.

ನಿರ್ದೇಶಕರಿಗೆ ಪ್ರಶಸ್ತಿ ಪ್ರದಾನ
'ಫಿಲ್ಮಿಬೀಟ್ ಕನ್ನಡ' ಓದುಗರ ಪರವಾಗಿ 'ಕರ್ವ' ಚಿತ್ರದ ನಿರ್ದೇಶಕ ನವನೀತ್ ಅವರಿಗೆ 'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' Associate Editor ಪ್ರಸಾದ್ ನಾಯಕ್ ಅವರು 'ಅತ್ಯುತ್ತಮ ಪ್ರಯೋಗಾತ್ಮಕ-2016' ಪ್ರಶಸ್ತಿ ಪ್ರದಾನ ಮಾಡಿದರು.

ಒನ್ ಇಂಡಿಯಾ ಕಛೇರಿಯಲ್ಲಿ ಸನ್ಮಾನ
ಬೆಂಗಳೂರಿನ ಜಯನಗರ 3ನೇ ಹಂತದಲ್ಲಿರುವ ನಮ್ಮ ಒನ್ ಇಂಡಿಯಾ/ಫಿಲ್ಮಿಬೀಟ್ ಕಚೇರಿಗೆ ಪ್ರೀತಿಯಿಂದ ಆಗಮಿಸಿದ್ದ ಕರ್ವ ಚಿತ್ರದ ನಿರ್ದೇಶಕ ನವನೀತ್ ಅವರಿಗೆ 'ಫಿಲ್ಮಿಬೀಟ್ ಕನ್ನಡ' ತಂಡ ಆತ್ಮೀಯವಾಗಿ ಸನ್ಮಾನಿಸಿತು.

ಪ್ರಶಸ್ತಿ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದ ನಿರ್ದೇಶಕ
''ತುಂಬಾ ಖುಷಿ ಆಗ್ತಿದೆ. ಮೊದಲ ಸಲ ಸಿನಿಮಾ ಮಾಡಿದ್ದೀನಿ. ನೀವು ಮೊದಲ ಸಲ ಪ್ರಶಸ್ತಿ ನೀಡುತ್ತಿದ್ದೀರಾ. ಇದು ನಮಗೆ ಸಿಕ್ಕಂತಹ ಪ್ರೋತ್ಸಾಹ. ನಾವು ಮಾಡಿದ ಕೆಲಸಕ್ಕೆ ಇದು ಸಾರ್ಥಕವೆನಿಸುತ್ತಿದೆ. ಜನಗಳು ವೋಟಿಂಗ್ ಮಾಡಿ ಆಯ್ಕೆ ಮಾಡಿರುವುದು ಹೆಚ್ಚು ಖುಷಿ ತಂದಿದೆ. '' ಎಂದು ಕರ್ವ ಚಿತ್ರದ ನಿರ್ದೇಶಕ ನವನೀತ್ 'ಫಿಲ್ಮಿಬೀಟ್ ಕನ್ನಡ' ತಂಡದೊಂದಿಗೆ ಸಂತಸ ವ್ಯಕ್ತಪಡಿಸಿದರು.

'ಫಿಲ್ಮಿಬೀಟ್ ತಂಡ' ಉಪಸ್ಥಿತಿ
ಇದೇ ವೇಳೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡದಿಂದ ಹರ್ಷಿತಾ ರಾಕೇಶ್, ಭರತ್ ಕುಮಾರ್, ಸುನೀಲ್, ರಾಘವೇಂದ್ರ.ಸಿ.ವಿ ಹಾಗೂ ಸುಹಾಸ್ ಹಾಜರಿದ್ದರು.

ಇಲ್ಲಿದೆ ನೋಡಿ ವಿಡಿಯೋ...
'ಫಿಲ್ಮಿಬೀಟ್ ಕನ್ನಡ ಅವಾರ್ಡ್' ಸಮಾರಂಭದ ಎಕ್ಸ್ ಕ್ಲೂಸಿವ್ ವಿಡಿಯೋ ಇಲ್ಲಿದೆ ನೋಡಿ.


Click it and Unblock the Notifications











