»   » 'ಸ್ಫೂರ್ತಿಯ ಚಿಲುಮೆ' ಜಯಂತ್ ಕಾಯ್ಕಿಣಿಗೆ ಫಿಲ್ಮಿಬೀಟ್ ಕನ್ನಡದ ಪ್ರಶಸ್ತಿ

'ಸ್ಫೂರ್ತಿಯ ಚಿಲುಮೆ' ಜಯಂತ್ ಕಾಯ್ಕಿಣಿಗೆ ಫಿಲ್ಮಿಬೀಟ್ ಕನ್ನಡದ ಪ್ರಶಸ್ತಿ

Posted By:
Subscribe to Filmibeat Kannada

2016ನೇ ಸಾಲಿನಲ್ಲಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಡೆಸಿದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' ಪೋಲ್ ನಲ್ಲಿ 'ಅತ್ಯುತ್ತಮ' ಎಂದು ನೀವೇ ಮತ ಹಾಕಿದ ಕಲಾವಿದರಿಗೆ, ತಂತ್ರಜ್ಞರಿಗೆ, ನಿಮ್ಮೆಲ್ಲರ ಪರವಾಗಿ 'ಫಿಲ್ಮಿಬೀಟ್ ಕನ್ನಡ ತಂಡ' ಪ್ರಶಸ್ತಿಯನ್ನ ನೀಡಿ ಗೌರವಿಸುತ್ತಾ ಬರುತ್ತಿದೆ

ಅದರಂತೆ ಇಂದು (ಆಗಸ್ಟ್ 10) ಸಾಹಿತಿ ಜಯಂತ್ ಕಾಯ್ಕಿಣಿ ಅವರಿಗೆ 'ವರ್ಷದ ಸ್ಫೂರ್ತಿಯ ಚಿಲುಮೆ' ಎಂದು 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ವರ್ಷದ ಸ್ಪೂರ್ತಿಯ ಚಿಲುಮೆ - 2016

ಪ್ರತಿ ವರ್ಷ ಕನ್ನಡ ಚಿತ್ರರಂಗಕ್ಕೆ ಯುವ ಕಲಾವಿದರು, ಯುವ ನಿರ್ದೇಶಕರು, ಯುವ ನಟನಟಿಯರು ಪರಿಚಯವಾಗ್ತಾರೆ. ಅದೇ ರೀತಿ ಯುವ ಚಿತ್ರ ಸಾಹಿತಿಗಳು ಕೂಡ ತಮ್ಮ ಪ್ರತಿಭೆ ಮೂಲಕ ಗಮನ ಸೆಳೆಯುತ್ತಾರೆ. ಇಂತಹ ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗಿರುವ ಸಾಹಿತಿ ಜಯಂತ್ ಕಾಯ್ಕಿಣಿ ಅವರಿಗೆ 'ಒನ್ ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ' ವತಿಯಿಂದ '2016-ವರ್ಷದ ಸ್ಫೂರ್ತಿಯ ಚಿಲುಮೆ' ಎಂದು ಗೌರವಿಸಲಾಗಿದೆ.

ಕಾಯ್ಕಿಣಿ ಅವರಿಗೆ ಪ್ರಶಸ್ತಿ ಪ್ರದಾನ

'ಫಿಲ್ಮಿಬೀಟ್ ಕನ್ನಡ'ದ ಪರವಾಗಿ ಜಯಂತ್ ಕಾಯ್ಕಿಣಿ ಅವರಿಗೆ 'ವರ್ಷದ ಸ್ಫೂರ್ತಿಯ ಚಿಲುಮೆ-2016' ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂತಸ ವ್ಯಕ್ತಪಡಿಸಿದ ಕಾಯ್ಕಿಣಿ

ಫಿಲ್ಮಿಬೀಟ್ ಕನ್ನಡ ಪ್ರಶಸ್ತಿ ಸ್ವೀಕರಿಸಿದ ಜಯಂತ್ ಕಾಯ್ಕಿಣಿ ಅವರು ಸಂತಸ ವ್ಯಕ್ತಪಡಿಸಿದರು.

ಫಿಲ್ಮಿಬೀಟ್ ಕನ್ನಡ ತಂಡ ಉಪಸ್ಥಿತಿ

ಇದೇ ವೇಳೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡದಿಂದ ಹರ್ಷಿತಾ ರಾಕೇಶ್, ಮಹೇಶ್ ಮಲ್ನಾಡ್, ಭರತ್ ಕುಮಾರ್, ರಾಘವೇಂದ್ರ.ಸಿ.ವಿ ಹಾಜರಿದ್ದರು.

English summary
Filmibeat Kannada/Oneindia Kannada team felicitated lyrics writer jayanth kaykini on august 10th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada