ಜನ ಮೆಚ್ಚಿದ 'ಅರ್ಜುನ್ ಜನ್ಯ'ಗೆ ಫಿಲ್ಮಿಬೀಟ್ ಕಡೆಯಿಂದ ಪ್ರೀತಿಯ ಸನ್ಮಾನ
2016ನೇ ಸಾಲಿನ ನಿಮ್ಮ ಫಿಲ್ಮಿಬೀಟ್ ಕನ್ನಡದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' ಪೋಲ್ ನಲ್ಲಿ ಸಾವಿರಾರು ಓದುಗರು 'ಅರ್ಜುನ್ ಜನ್ಯ' ಅವರನ್ನು 'ಅತ್ಯುತ್ತಮ ಸಂಗೀತ ನಿರ್ದೇಶಕ' ಎಂದು ಪ್ರೀತಿಯಿಂದ ಆಯ್ಕೆ ಮಾಡಿದ್ದರು.[ಓದುಗರು ಮೆಚ್ಚಿದ ಅರ್ಜುನ್ ಜನ್ಯಗೆ 'ಅತ್ಯುತ್ತಮ ಸಂಗೀತ ನಿರ್ದೇಶಕ' ಪ್ರಶಸ್ತಿ.! ]
ಓದುಗರ ಇಚ್ಛೆಯಂತೆ ಅರ್ಜುನ್ ಜನ್ಯ ಅವರಿಗೆ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ತಂಡದಿಂದ ನಿನ್ನೆ (ಮಾರ್ಚ್ 23) 'ಅತ್ಯುತ್ತಮ ಸಂಗೀತ ನಿರ್ದೇಶಕ' ಪ್ರಶಸ್ತಿ ಪ್ರದಾನ ಮಾಡಲಾಯಿತು.

'ಅತ್ಯುತ್ತಮ ಸಂಗೀತ ನಿರ್ದೇಶಕ' ಅರ್ಜುನ್ ಜನ್ಯ
'ಫಿಲ್ಮಿಬೀಟ್ ಕನ್ನಡ' ಓದುಗರ ತೀರ್ಪಿನಂತೆ 'ಮುಂಗಾರು ಮಳೆ-2' ಚಿತ್ರಕ್ಕೆ 'ಅತ್ಯುತ್ತಮ ಸಂಗೀತ ನಿರ್ದೇಶಕ-2016' ಪ್ರಶಸ್ತಿಯನ್ನ ಅರ್ಜುನ್ ಜನ್ಯ ಪಡೆದರು.['ಫಿಲ್ಮಿಬೀಟ್ ಕನ್ನಡ'ದಿಂದ 'ರಾಮಾ ರಾಮಾ ರೇ' ಚಿತ್ರಕ್ಕೆ ವಿಶೇಷ ಪ್ರಶಸ್ತಿ ]

'ಅರ್ಜುನ್ ಜನ್ಯ'ಗೆ ಪ್ರಶಸ್ತಿ ಪ್ರದಾನ
'ಫಿಲ್ಮಿಬೀಟ್ ಕನ್ನಡ' ಓದುಗರ ಪರವಾಗಿ 'ಮುಂಗಾರು ಮಳೆ-2' ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಅರ್ಜುನ್ ಜನ್ಯ ಅವರಿಗೆ 'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಸಂಪಾದಕರ ಶಾಮಸುಂದರ ಅವರು 'ಅತ್ಯುತ್ತಮ ಸಂಗೀತ ನಿರ್ದೇಶಕ-2016' ಪ್ರಶಸ್ತಿ ಪ್ರದಾನ ಮಾಡಿದರು.[ಓದುಗರ ಆಯ್ಕೆ: ರವಿಚಂದ್ರನ್ ಗೆ 'ಫಿಲ್ಮಿಬೀಟ್ ಕನ್ನಡ'ದಿಂದ ಪ್ರೀತಿಯ ಸನ್ಮಾನ ]

ಅರ್ಜುನ್ ಜನ್ಯ ಮನೆಯಲ್ಲಿ ಸನ್ಮಾನ
ಬೆಂಗಳೂರಿನ ಹೆಬ್ಬಾಳದಲ್ಲಿರುವ ಅರ್ಜುನ್ ಜನ್ಯ ರವರ ನಿವಾಸಕ್ಕೆ ಭೇಟಿ ನೀಡಿದ ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡ, 'ಕನ್ನಡದ ಎ.ಆರ್ ರೆಹಮಾನ್ ಗೆ ಆತ್ಮೀಯವಾಗಿ ಸನ್ಮಾನಿಸಿತು.['ಫಿಲ್ಮಿಬೀಟ್ ಕನ್ನಡ'ದಿಂದ 'ಕರ್ವ' ನಿರ್ದೇಶಕರಿಗೆ ಪ್ರಶಸ್ತಿ ಪ್ರದಾನ ]

'ಫಿಲ್ಮಿಬೀಟ್ ತಂಡ' ಉಪಸ್ಥಿತಿ
ಇದೇ ವೇಳೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡದಿಂದ ಹರ್ಷಿತಾ ರಾಕೇಶ್, ಭರತ್ ಕುಮಾರ್, ರಾಘವೇಂದ್ರ.ಸಿ.ವಿ ಹಾಗೂ ಸುಹಾಸ್ ಹಾಜರಿದ್ದರು.['ತಿಥಿ' ಸ್ಟಾರ್ 'ಗಡ್ಡಪ್ಪ'ನಿಗೆ ಪ್ರಶಸ್ತಿ ಪ್ರದಾನ ಮಾಡಿದ ಫಿಲ್ಮಿಬೀಟ್ ಕನ್ನಡ ]

ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ
'ಫಿಲ್ಮಿಬೀಟ್ ಕನ್ನಡ ಅವಾರ್ಡ್' ಸ್ವೀಕರಿಸಿ, ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡಕ್ಕೆ ಅರ್ಜುನ್ ಜನ್ಯ ನೀಡಿರುವ ಎಕ್ಸ್ ಕ್ಲೂಸಿವ್ ಸಂದರ್ಶನ ಇಲ್ಲಿದೆ ನೋಡಿ...


Click it and Unblock the Notifications











