For Quick Alerts
  ALLOW NOTIFICATIONS  
  For Daily Alerts

  ಫಿಲ್ಮಿಬೀಟ್ ಪೋಲ್: ದರ್ಶನ್-ಪುನೀತ್ ಅಭಿಮಾನಿಗಳ ನಡುವೆ ಭಾರಿ ಪೈಪೋಟಿ

  |

  'ಫಿಲ್ಮಿಬೀಟ್ ಕನ್ನಡ' ಪ್ರತಿ ವರ್ಷ ವರ್ಷಾಂತ್ಯ ಪೋಲ್ ನಡೆಸಿ ವರ್ಷದ ಅತ್ಯುತ್ತಮ ಸಿನಿಮಾ, ನಾಯಕ, ನಾಯಕಿ, ನಿರ್ದೇಶಕ ಹೀಗೆ ಅನೇಕ ವಿಭಾಗಗಳಲ್ಲಿನ ಪ್ರತಿಭಾವಂತರನ್ನು ಗುರುತಿಸುತ್ತದೆ. ಈ ಬಾರಿಯೂ ಫಿಲ್ಮಿಬೀಟ್ ಗೆ ಪೋಲ್ ಭರ್ಜರಿಯಾಗಿ ಮುಂದುವರೆಯುತ್ತಿದೆ.

  ವಿವಿಧ ವಿಭಾಗಗಳಿಗೆ ಲಕ್ಷಾಂತರ ಮತಗಳು ಬಂದಿದೆ. ನಾಯಕ ನಟರ ಪೈಕಿ ಪ್ರಮುಖವಾಗಿ ನಟ ದರ್ಶನ್ ಹಾಗೂ ಪುನೀತ್ ರಾಜ್ ಕುಮಾರ್ ನಡುವೆ ಪೈಪೋಟಿ ನಡೆದಿದೆ. ಈ ನಟರಿಗೆ ಹೋಲಿಕೆ ಮಾಡಿದರೆ ಸುದೀಪ್, ರಕ್ಷಿತ್ ಶೆಟ್ಟಿ, ರವಿಚಂದ್ರನ್, ಶಿವರಾಜ್ ಕುಮಾರ್, ಸತೀಶ್ ನೀನಾಸಂ, ಜಗ್ಗೇಶ್ ಹಿಂದೆ ಇದ್ದಾರೆ.

  ಚಾಲೆಂಜಿಂಗ್ ಸ್ಟಾರ್ ಮತ್ತು ಪವರ್ ಸ್ಟಾರ್

  ಚಾಲೆಂಜಿಂಗ್ ಸ್ಟಾರ್ ಮತ್ತು ಪವರ್ ಸ್ಟಾರ್

  'ಫಿಲ್ಮಿಬೀಟ್ ಕನ್ನಡ' ಪೋಲ್ ನಲ್ಲಿ ನಟರ ವಿಭಾಗದಲ್ಲಿ ದರ್ಶನ್ ಹಾಗೂ ಪುನೀತ್ ನಡುವೆ ಪೈಪೋಟಿ ಇದೆ. ಇಲ್ಲಿಯವರೆಗೆ 49000ಕ್ಕೂ ಹೆಚ್ಚು ಮತಗಳನ್ನು ದರ್ಶನ್ ಪಡೆದಿದ್ದಾರೆ. ಪುನೀತ್ ರಾಜ್ ಕುಮಾರ್ 37000ಕ್ಕೂ ಅಧಿಕ ವೋಟ್ ಗಳಿಸಿದ್ದಾರೆ. ಪುನೀತ್ 'ನಟ ಸಾರ್ವಭೌಮ' ಚಿತ್ರದಿಂದ ನಾಮಿನೇಟ್ ಆಗಿದ್ದರೆ, ದರ್ಶನ್ 'ಯಜಮಾನ' ಹಾಗೂ 'ಕುರುಕ್ಷೇತ್ರ'ದಿಂದ ನಾಮಾಂಕಿತರಾಗಿದ್ದಾರೆ.

  ಫಿಲ್ಮಿಬೀಟ್ Poll ಆರಂಭ: ನಿಮ್ಮ ನೆಚ್ಚಿನ ನಟ-ನಟಿ-ಸಿನಿಮಾ ಯಾವುದು ವೋಟ್ ಮಾಡಿಫಿಲ್ಮಿಬೀಟ್ Poll ಆರಂಭ: ನಿಮ್ಮ ನೆಚ್ಚಿನ ನಟ-ನಟಿ-ಸಿನಿಮಾ ಯಾವುದು ವೋಟ್ ಮಾಡಿ

  ಟಾಪ್ ನಲ್ಲಿ ಇದ್ದಾರೆ ರಚಿತಾ ರಾಮ್

  ಟಾಪ್ ನಲ್ಲಿ ಇದ್ದಾರೆ ರಚಿತಾ ರಾಮ್

  ನಟಿಯರ ಪೈಕಿ ರಚಿತಾ ರಾಮ್ ಮೊದಲ ಸ್ಥಾನದಲ್ಲಿ ಇದ್ದಾರೆ. 'ಆಯುಷ್ಮಾನ್ ಭವ' ಸಿನಿಮಾದಿಂದ ರಚಿತಾ ರಾಮ್ ನಾಮಿನೇಟ್ ಆಗಿದ್ದಾರೆ. ಸದ್ಯ, 19 ಸಾವಿರಕ್ಕೂ ಹೆಚ್ಚು ಮತಗಳ ರಚಿತಾಗೆ ಬಂದಿದೆ. ನಂತರದ ಸ್ಥಾನದಲ್ಲಿ ಶಾನ್ವಿ ಶ್ರೀವಾತ್ಸವ ಇದ್ದಾರೆ. 'ಅವನೇ ಶ್ರೀಮನ್ನಾರಾಯಣ' ಮೂಲಕ ನಾಮಿನೇಟ್ ಆಗಿರುವ ಅವರು, 9 ಸಾವಿರಕ್ಕೂ ಅಧಿಕ ಮತ ಪಡೆದಿದ್ದಾರೆ.

  ಮುಂದೆ ಇದ್ದಾನೆ 'ಯಜಮಾನ'

  ಮುಂದೆ ಇದ್ದಾನೆ 'ಯಜಮಾನ'

  ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಅತ್ಯುತ್ತಮ ಸಿನಿಮಾಗಳ ಪೈಕಿ ಮುಂದೆ ಇದೆ. 18 ಸಾವಿರಕ್ಕೂ ಹೆಚ್ಚು ಮತಗಳು ಬಂದಿದೆ. ಇಲ್ಲಿಯೂ 'ನಟ ಸಾರ್ವಭೌಮ' ಹಾಗೂ 'ಯಜಮಾನ' ಸಿನಿಮಾಗಳಿಗೆ ದೊಡ್ಡ ಪೈಪೋಟಿ ಇದೆ. 'ಯಜಮಾನ'ಗೆ 18506 ಹಾಗೂ 'ನಟ ಸಾರ್ವಭೌಮ'ಗೆ 18384 ಮತಗಳು ಬಂದಿದೆ.

  10 ವರ್ಷದ ಹಿಂದೆ ನಮ್ ಸ್ಟಾರ್ಸ್ ಹೇಗಿದ್ರು, ಯಾವ ಸಿನಿಮಾ ಮಾಡ್ತಿದ್ರು?10 ವರ್ಷದ ಹಿಂದೆ ನಮ್ ಸ್ಟಾರ್ಸ್ ಹೇಗಿದ್ರು, ಯಾವ ಸಿನಿಮಾ ಮಾಡ್ತಿದ್ರು?

  ಬೇಗ ಬೇಗ ಮತ ಹಾಕಿ

  ಬೇಗ ಬೇಗ ಮತ ಹಾಕಿ

  ಉಳಿದಂತೆ, ನವ ನಟಿ, ನವ ನಟಿ, ನಿರ್ದೇಶಕ, ಸಂಗೀತ ನಿರ್ದೇಶಕ, ಪೋಷಕ ನಟ, ಅತ್ಯುತ್ತಮ ವಿಮರ್ಶಾತ್ಮಕ ಸಿನಿಮಾ ಹೀಗೆ 9 ಬೇರೆ ಬೇರೆ ವಿಭಾಗಗಳು ಇದೆ. ಈ ಎಲ್ಲ ವಿಭಾಗಗಳಿಗೆ ನೀವು ಕೂಡ ಮತ ಹಾಕಬಹುದಾಗಿದೆ. ವೋಟ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

  English summary
  Filmibeat kannada poll 2019: Competition between Darshan and Puneeth Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X