'ಮದಕರಿ'ಗೆ ನಾಯಕಿ ಯಾರು?: ಅತಿ ಹೆಚ್ಚು ಜನ ಹೇಳಿದ್ದು ಈಕೆಯ ಹೆಸರು

Recommended Video

ಹೆಚ್ಚು ಜನರ ಪ್ರಕಾರ ಇವರೇ ಮದಕರಿಗೆ ನಾಯಕಿ ಆಗಬೇಕಂತೆ | FILMIBEAT KANNADA

'ಗಂಡುಗಲಿ ಮದಕರಿ ನಾಯಕ' ಸಿನಿಮಾ ಡಿಸೆಂಬರ್ 2 ರಂದು ಲಾಂಚ್ ಆಗುತ್ತಿದೆ. 'ಕುರುಕ್ಷೇತ್ರ' ಸಿನಿಮಾದ ನಂತರ ಮತ್ತೊಂದು ದೊಡ್ಡ ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಈ ಸಿನಿಮಾದ ನಾಯಕಿ ಯಾರು ಎನ್ನುವುದು ಸದ್ಯದ ಕುತೂಹಲವಾಗಿದೆ.

ಈ ಸಿನಿಮಾಗೆ ರಮ್ಯಾ ನಾಯಕಿ ಆಗುತ್ತಾರೆ ಎನ್ನುವ ಸುದ್ದಿ ಇತ್ತು. ಟಾಲಿವುಡ್ ನಟಿ ಕೀರ್ತಿ ಸುರೇಶ್ 'ಗಂಡುಗಲಿ ಮದಕರಿ ನಾಯಕ' ಮೂಲಕ ಕನ್ನಡಕ್ಕೆ ಬರುತ್ತಾರೆ ಎನ್ನುವ ಮಾತಿತ್ತು. ಹೀಗಾಗಿ, ಅಭಿಮಾನಿಗಳ ಆಯ್ಕೆ ಏನಿರಬಹುದು ಎನ್ನುವ ಕುತೂಹಲದಲ್ಲಿ ಫಿಲ್ಮಿಬೀಟ್ ಕನ್ನಡ ಒಂದು ಪೋಲ್ ಏರ್ಪಡಿಸಿತ್ತು. ರಮ್ಯಾ, ಕೀರ್ತಿ ಸುರೇಶ್ ಹಾಗೂ ಹೊಸಬರು ಎನ್ನುವ ಮೂರು ಆಯ್ಕೆಗಳನ್ನು ನೀಡಲಾಗಿತ್ತು.

ಫಿಲ್ಮಿಬೀಟ್ ಕನ್ನಡ ವೆಬ್ ಸೈಟ್ ಹಾಗೂ ಫೇಸ್ ಬುಕ್ ನಲ್ಲಿ ಈ ಪೋಲ್ ನಡೆದಿದ್ದು, ಸಾಕಷ್ಟು ಸಂಖ್ಯೆಯ ಓದುಗರು ಇದರಲ್ಲಿ ತಮ್ಮ ಆಯ್ಕೆ ತಿಳಿಸಿದ್ದಾರೆ. ದರ್ಶನ್ ಅಭಿಮಾನಿಗಳು ಸಹ ಈ ಪ್ರಶ್ನೆಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ, ಅಭಿಮಾನಿಗಳ ಆಯ್ಕೆ ಏನು?, ಮುಂದೆ ಓದಿ.

ಮನಸ್ಸು ಗೆದ್ದ ಮಹಾನಟಿ

ಮನಸ್ಸು ಗೆದ್ದ ಮಹಾನಟಿ

ಮಹಾನಟಿ ಕೀರ್ತಿ ಸುರೇಶ್ ಅತಿ ಹೆಚ್ಚು ಜನರ ಪ್ರೀತಿ ಪಡೆದಿದ್ದಾರೆ. ಫಿಲ್ಮಿಬೀಟ್ ಕನ್ನಡ ವೆಬ್ ಸೈಟ್ ಹಾಗೂ ಫೇಸ್ ಬುಕ್ ನಲ್ಲಿ ಹೆಚ್ಚಿನ ಜನರು ಅವರ ಹೆಸರನ್ನು ನಾಯಕಿಯಾಗಿ ಸೂಚಿಸಿದ್ದಾರೆ. 48% ಜನರು ಅವರನ್ನು ಆಯ್ಕೆ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ ಬೇರೆ ಬೇರೆ ನಟಿಯರ ಹೆಸರುಗಳನ್ನು ಕಾಮೆಂಟ್ ಮಾಡಿದ್ದರೂ, ಅದರಲ್ಲಿ ಹೆಚ್ಚಿನ ಮತ ಸಿಕ್ಕಿರುವುದು ಕೀರ್ತಿ ಸುರೇಶ್ ರಿಗೆ.

ರಮ್ಯಾ ವಾಪಸ್ ಬರಬೇಕು

ರಮ್ಯಾ ವಾಪಸ್ ಬರಬೇಕು

ನಟಿ ರಮ್ಯಾ ಚಿತ್ರರಂಗದಿಂದ ದೂರ ಆಗಿದ್ದಾರೆ. ಆದರೆ, ಅವರು ಕಮ್ ಬ್ಯಾಕ್ ಮಾಡಬೇಕು ಎನ್ನುವುದು ಎಷ್ಟೋ ಅಭಿಮಾನಿಗಳ ಆಸೆಯಾಗಿದೆ. 30% ಜನರು 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕು ಎಂದು ಹೇಳಿದ್ದಾರೆ. ದರ್ಶನ್ ರಿಗೆ ರಮ್ಯಾ ಒಳ್ಳೆಯ ಜೋಡಿ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.

ಮಿಶ್ರ ಪ್ರತಿಕ್ರಿಯೆಗಳು

ಮಿಶ್ರ ಪ್ರತಿಕ್ರಿಯೆಗಳು

ಕೀರ್ತಿ ಸುರೇಶ್ ಹಾಗೂ ರಮ್ಯಾ ಬಿಟ್ಟು ಬೇರೆ ಬೇರೆ ಹೆಸರುಗಳೂ ಕೇಳಿ ಬಂದಿವೆ. ಅನುಷ್ಕಾ ಶೆಟ್ಟಿ, ಶ್ರೀಲೀಲಾ, ಶಾನ್ವಿ ಶ್ರೀವಾತ್ಸವ, ಸ್ನೇಹ, ರಾಧಿಕಾ ಕುಮಾರಸ್ವಾಮಿ, ರಾಧಿಕಾ ಪಂಡಿತ್ ಹೀಗೆ ಕೆಲವು ಕಾಮೆಂಟ್ಸ್ ಗಳು ಬಂದಿವೆ. ಇನ್ನು ಕೆಲವರು ಹೊಸಬರಿಗೆ ಅವಕಾಶ ನೀಡಿ ಎಂದು ಸಲಹೆ ನೀಡಿದ್ದಾರೆ. ನಾಯಕಿಯ ಹೆಸರುಗಳಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ಕೀರ್ತಿ ಸುರೇಶ್ ನಾಯಕಿ ಆಗುತ್ತಾರಾ?

ಕೀರ್ತಿ ಸುರೇಶ್ ನಾಯಕಿ ಆಗುತ್ತಾರಾ?

ಈ ಹಿಂದೆ ಕೀರ್ತಿ ಸುರೇಶ್ 'ಗಂಡುಗಲಿ ಮದಕರಿ ನಾಯಕ'ಗೆ ನಾಯಕಿ ಆಗುತ್ತಾರೆ ಎನ್ನುವ ಸುದ್ದಿ ಇತ್ತು. ಅದೇ ರೀತಿಯಲ್ಲಿ ಫಿಲ್ಮಿಬೀಟ್ ಕನ್ನಡದ ಪೋಲ್ ನಲ್ಲಿಯೂ ಕೀರ್ತಿ ಸುರೇಶ್ ಮುಂದೆ ಇದ್ದಾರೆ. ಹೀಗಾಗಿ ಅವರೇ ಸಿನಿಮಾ ನಾಯಕಿ ಆಗುತ್ತಾರೆಯೇ ಎನ್ನುವ ಕುತೂಹಲ ಹೆಚ್ಚಾಗಿದೆ. ಹಾಗೆನಾದರೂ ಈ ಚಿತ್ರದಲ್ಲಿ ನಟಿಸಿರೆ, ದೊಡ್ಡ ಲಾಂಚ್ ಆಗುತ್ತದೆ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಹಾಗೂ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಚಿತ್ರಕ್ಕಿದೆ. ನಾದಬ್ರಹ್ಮ ಹಂಸಲೇಖ ಸಂಗೀತ ನೀಡುತ್ತಿದ್ದಾರೆ.

More from Filmibeat

English summary
Filmibeat Kannada Poll Result Gandugali Madakari Nayaka movie heroine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X