ಕೆ.ಜಿ.ಎಫ್ ಚೆನ್ನಾಗಿದ್ಯಾ? : ಫಿಲ್ಮಿಬೀಟ್ ಪೋಲ್ ನಲ್ಲಿ ಪ್ರೇಕ್ಷಕ ಹೇಳಿದ್ದೇನು?
ಇಂದು ವಿಶ್ವಾದ್ಯಂತ 'ಕೆಜಿಎಫ್' ಚಿತ್ರ ತೆರೆಕಂಡಿದೆ. ಎರಡು ವರ್ಷಗಳಿಂದ ಕಾಯಿಸಿ, ಕಡೆಗೂ ಯಶ್ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.
ಯಾವುದೇ ಸಿನಿಮಾ ಬಿಡುಗಡೆಯಾದರೂ, ಚೆನ್ನಾಗಿದೆ-ಚೆನ್ನಾಗಿಲ್ಲ ಎಂಬ ಪ್ರತಿಕ್ರಿಯೆ ಬರುತ್ತದೆ. ಇನ್ನೂ ಕೆಜಿಎಫ್' ರೀತಿಯ ದೊಡ್ದ ಸಿನಿಮಾ ಬಿಡುಗಡೆ ಆದಾಗ, ಪ್ರತಿಕ್ರಿಯೆಗಳು ದೊಡ್ದ ಮಟ್ಟದಲ್ಲೇ ಇರುತ್ತದೆ. ಸಿನಿಮಾಗೆ ಬಂದ ಪ್ರತಿಕ್ರಿಯೆಗಳನ್ನು ನೋಡಿ, ನಂತರ ಸಿನಿಮಾಗೆ ಹೋಗುವ ಪ್ರೇಕ್ಷಕ ವರ್ಗವೂ ಇದೆ. ಆ ಪ್ರೇಕ್ಷಕ ವರ್ಗ ಈಗ ಕೇಳುತ್ತಿರುವ ಪ್ರೆಶ್ನೆ, ಕೆಜಿಎಫ್ ಸಿನಿಮಾ ಹೇಗಿದೆ? ಈ ಪ್ರೇಕ್ಷಕ ವರ್ಗವನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ಫಿಲ್ಮಿಬೀಟ್ ಕನ್ನಡ, ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ಪೋಲ್ ಏರ್ಪಡಿಸಿತ್ತು.

ಫೇಸ್ ಬುಕ್ ನಲ್ಲಿ ಏರ್ಪಡಿಸಿದ್ದ ಪೋಲ್ ಗೆ ಎರಡು ಸಾವಿರಕ್ಕೂ ಹೆಚ್ಚು ಮತಗಳು ಬಂದಿದ್ದು ಶೇಕಡ 88ರಷ್ಟು ಜನ ಕೆಜಿಎಫ್ ಸಿನಿಮಾ ಚೆನ್ನಾಗಿದೆ ಎಂದಿದ್ದಾರೆ. ಇನ್ನೂ ಟ್ವಿಟರ್ ನಲ್ಲಿ 85% ರಷ್ಟು ಜನ ಚೆನ್ನಾಗಿದೆ ಎಂದಿದ್ದಾರೆ. 12% ಪರವಾಗಿಲ್ಲ ಎಂದಿದ್ದಾರೆ ಮತ್ತು 3% ಜನ ಚೆನ್ನಾಗಿಲ್ಲ ಎಂದಿದ್ದಾರೆ.

ಒಟ್ಟಾರೆ, ಫೇಸ್ ಬುಕ್ ಮತ್ತು ಟ್ವಿಟರ್ ಎರಡರಲ್ಲೂ 'ಕೆಜಿಎಫ್' ಚಿತ್ರವನ್ನು ಹೆಚ್ಚಿನ ಜನ ಚೆನ್ನಾಗಿದೆ ಎಂದಿದ್ದಾರೆ.


Click it and Unblock the Notifications











