ಫಿಲ್ಮಿಬೀಟ್ ಪೋಲ್: ಅಂಬಿ vs ಕೆಜಿಎಫ್ ನಡುವೆ ಅಂತಿಮ ಹಂತದ ಹಣಾಹಣಿ

ಫಿಲ್ಮಿಬೀಟ್ ಕನ್ನಡ ಅಯೋಜನೆ ಮಾಡಿರುವ ಬೆಸ್ಟ್ ಆಫ್ ಸ್ಯಾಂಡಲ್ ವುಡ್ 2018 ಪೋಲ್ ಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅಂತಿಮ ಹಂತಕ್ಕೆ ಬಂದಿದೆ.

ಕಳೆದ ಒಂದೂವರೆ ತಿಂಗಳಿನಿಂದ ಈ ಪೋಲ್ ನಡೆಯುತ್ತಿದ್ದು, 2018ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಚಿತ್ರಗಳು, ನಟರು, ತಂತ್ರಜ್ಞರ ಪೈಕಿ ಜನರ ಮನಸ್ಸು ಗೆದ್ದವರು ಯಾರು ಎಂದು ನಿರ್ಧರಿಸುವ ಸಮಯ ಬಂದಿದೆ.

ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಸಿನಿಮಾ, ನಿರ್ದೇಶಕ, ಸಂಗೀತ ನಿರ್ದೇಶಕ, ಹಾಸ್ಯನಟ, ಖಳನಟ ಸೇರಿದಂತೆ 11 ವಿಭಾಗದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇದೀಗ, ಪೋಲ್ ಅಂತ್ಯವಾಗುವ ಸಮಯ ಬಂದಿದೆ. ಫೆಬ್ರವರಿ 5 ರಂದು ಪೋಲ್ ಕೊನೆಯಾಗಲಿದೆ. ಸದ್ಯಕ್ಕೆ ಯಾರು ಮುನ್ನಡೆ ಗಳಿಸಿಕೊಂಡಿದ್ದಾರೆ ಎಂದು ತಿಳಿಯಲು ಮುಂದೆ ಓದಿ....

ಅಂಬಿ vs ಕೆಜಿಎಫ್

ಅಂಬಿ vs ಕೆಜಿಎಫ್

ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಮೂರು ಸಿನಿಮಾಗಳ ಮಧ್ಯೆ ಭಾರಿ ಪೈಪೋಟಿ ಇತ್ತು. ಮೊದಲಿನಿಂದಲೂ ಅಂಬರೀಶ್ ಅವರ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಮುನ್ನಡೆ ಕಾಯ್ದುಕೊಂಡಿದೆ. ಈಗ ಅಂಬಿ ಚಿತ್ರಕ್ಕೆ ಕೆಜಿಎಫ್ ಸಿನಿಮಾ ಭಾರಿ ಫೈಟ್ ನೀಡುತ್ತಿದ್ದು, ಉಳಿದ ದಿನದಲ್ಲಿ ಏನೂ ಬೇಕಾದರೂ ಆಗಬಹುದು. ಈ ಎರಡು ಚಿತ್ರಗಳ ಹಿಂದೆ ಶಿವಣ್ಣ ಟಗರು ಕೂಡ ರೇಸ್ ನಲ್ಲಿದೆ.

ಚಂದ್ರು vs ಪ್ರಶಾಂತ್ ನೀಲ್

ಚಂದ್ರು vs ಪ್ರಶಾಂತ್ ನೀಲ್

ವರ್ಷದ ಬಹುದೊಡ್ಡ ಹಿಟ್ ಕಂಡ ಕೆಜಿಎಫ್ ಚಿತ್ರದ ನಿರ್ದೇಶಕ ಮತ್ತು ಕನಕ ಚಿತ್ರದ ನಿರ್ದೇಶಕ ಆರ್ ಚಂದ್ರು ನಡುವೆ ಕೂಡ ಫೈಟ್ ಇದೆ. ಇನ್ನು ಕೆಲವು ದಿನ ಬಾಕಿಯಿದ್ದು, ಇವರಿಬ್ಬರಲ್ಲಿ ಯಾರೂ ಬೇಕಾದರೂ ಗೆಲ್ಲಬಹುದು. ಸದ್ಯಕ್ಕೆ ಆರ್ ಚಂದ್ರು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಅಂಬಿಗೆ ಎದುರಾಳಿ ಇಲ್ಲ

ಅಂಬಿಗೆ ಎದುರಾಳಿ ಇಲ್ಲ

ಸದ್ಯದ ಪರಿಸ್ಥಿತಿ ನೋಡಿದ್ರೆ ಅತ್ಯುತ್ತಮ ನಟ ವಿಭಾದಲ್ಲಿ ಅಂಬರೀಶ್ ಅವರೇ ಭಾರಿ ಮುನ್ನಡೆಯಲ್ಲಿದ್ದಾರೆ. ಅಂಬಿ ನಂತರ ಶಿವರಾಜ್ ಕುಮಾರ್, ಯಶ್ ಇದ್ದಾರೆ. ಇಲ್ಲಿ ಅಂಬರೀಶ್ ಕಡೆ ಹೆಚ್ಚು ಮತಗಳಿದ್ದು, ಜಯದ ಸನಿಹ ಇದ್ದಾರೆ.

ಜನ್ಯ vs ಬಸ್ರೂರು

ಜನ್ಯ vs ಬಸ್ರೂರು

ಸಂಗೀತ ನಿರ್ದೇಶಕರ ವಿಭಾಗದಲ್ಲಿ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮತ್ತು ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಡುವೆ ಫೈಟ್ ಇದೆ. ಇನ್ನುಳಿದಂತೆ ಚರಣ್ ರಾಜ್, ಅಜನಿಶ್ ಲೋಕನಾಥ್ ಸೇರಿದಂತೆ ಹಲವು ಸಂಗೀತ ನಿರ್ದೇಶಕರು ನಾಮನಿರ್ದೇಶನರಾಗಿದ್ದಾರೆ.

ನಾಗಭೂಷಣ್ vs ಕುರಿ

ನಾಗಭೂಷಣ್ vs ಕುರಿ

ಅತ್ಯುತ್ತಮ ಹಾಸ್ಯನಟ ವಿಭಾಗದಲ್ಲಿ ಕುರಿ ಪ್ರತಾಪ್ ಮತ್ತು ನಾಗಭೂಷಣ್ ನಡುವೆ ಪೈಪೋಟಿ ಇದೆ. ಅತ್ಯುತ್ತಮ ನಟಿಯರಲ್ಲಿ ಆಶಿಕಾ ರಂಗನಾಥ್ ಮತ್ತು ಪ್ರಿಯಾಂಕಾ ಉಪೇಂದ್ರ ರೇಸ್ ನಲ್ಲಿದ್ದಾರೆ.

More from Filmibeat

English summary
Filmibeat kannada poll 2018 will ends on february 5th. Vote your favorite film actor, director, and other category.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X