ಫಿಲ್ಮಿಬೀಟ್ Poll ನಲ್ಲಿ ಯಾರಿಗೆ ಮುನ್ನಡೆ, ವೋಟಿಂಗ್ ಯಾವಾಗ ಅಂತ್ಯ?

ಪ್ರತಿವರ್ಷದಂತೆ ಈ ವರ್ಷವೂ ಫಿಲ್ಮಿಬೀಟ್ ಕನ್ನಡದಲ್ಲಿ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' Poll ಆಯೋಜನೆಯಾಗಿದೆ. 2018ನೇ ಸಾಲಿನ ಅತ್ಯುತ್ತಮ ಸಿನಿಮಾ, ನಟ, ನಟಿ, ನಿರ್ದೇಶಕ, ಸಂಗೀತ ನಿರ್ದೇಶಕ, ಖಳನಟ, ಹೊಸನಟ, ಹೊಸನಟಿ, ಹಾಸ್ಯನಟ, ನವನಿರ್ದೇಶಕ, ಆಫ್ ಬೀಟ್ ಸಿನಿಮಾ ವಿಭಾಗಗಳಲ್ಲಿ ಚುನಾವಣೆ ನಡೆಯುತ್ತಿದೆ.

ಈಗಾಗಲೇ ವೋಟಿಂಗ್ ಆರಂಭವಾಗಿ ಎರಡು ವಾರ ಕಳೆದಿದೆ. ಎರಡು ವಾರದಲ್ಲಿ ಫಿಲ್ಮಿಬೀಟ್ ಪೋಲ್ ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ತಮ್ಮ ನೆಚ್ಚಿನ ನಟ, ನಟಿ, ನಿರ್ದೇಶಕ ಹಾಗೂ ಸಿನಿಮಾಗೆ ವೋಟ್ ಹಾಕುತ್ತಿದ್ದಾರೆ.

ಜನವರಿ 4 ರವರೆಗೂ ಯಾವ ವಿಭಾಗದಲ್ಲಿ, ಯಾರು ಮುನ್ನಡೆ ಸಾಧಿಸಿದ್ದಾರೆ, ಯಾರಿಗೆ ಹೆಚ್ಚು ಮತ ಸಿಕ್ಕಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಅಂದ್ಹಾಗೆ, ಇನ್ನು ಎಷ್ಟು ದಿನ ಈ ವೋಟಿಂಗ್ ಮುಂದುವರಿಯಲಿದೆ? ಮುಂದೆ ಓದಿ.....

ಅಂಬರೀಶ್ ಗೆ ಭಾರಿ ಮುನ್ನಡೆ

ಅಂಬರೀಶ್ ಗೆ ಭಾರಿ ಮುನ್ನಡೆ

ಜನವರಿ 4ನೇ ತಾರೀಖಿನವರೆಗೂ ನಡೆದ ಪೋಲ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಗೆ ಭಾರಿ ಮುನ್ನಡೆ ಸಿಕ್ಕಿದೆ. ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ನಾಮನಿರ್ದೇಶನವಾಗಿದ್ದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಹೆಚ್ಚು ಮತಗಳನ್ನ ಪಡೆದು ಮುನ್ನಡೆ ಸಾಧಿಸಿದೆ. ಅದೇ ರೀತಿ ಅತ್ಯುತ್ತಮ ನಟ ವಿಭಾಗದಲ್ಲೂ ಅಂಬರೀಶ್ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಟಗರು ಹಾಗೂ ಶಿವರಾಜ್ ಕುಮಾರ್ ಇದ್ದು, ಎರಡು ಚಿತ್ರಗಳ ನಡುವೆ ಫೈಟ್ ಇದೆ. ಇನ್ನು ಕಲಾವಕಾಶವಿದ್ದು, ನಿಮ್ಮ ನೆಚ್ಚಿನ ಸಿನಿಮಾಗೆ ವೋಟ್ ಮಾಡಿ ಗೆಲ್ಲಸಬಹುದು.

ನಟಿ, ಖಳನಾಯಕ, ಡೈರೆಕ್ಟರ್ ವಿಭಾಗದಲ್ಲಿ

ನಟಿ, ಖಳನಾಯಕ, ಡೈರೆಕ್ಟರ್ ವಿಭಾಗದಲ್ಲಿ

ಇನ್ನು ಅತ್ಯುತ್ತಮ ನಟಿ ವಿಭಾದಲ್ಲಿ ಆಶಿಕಾ ರಂಗನಾಥ್ ಮುನ್ನಡೆ ಸಾಧಿಸಿದ್ದು, ಪ್ರಿಯಾಂಕಾ ಉಪೇಂದ್ರ, ಹರಿಪ್ರಿಯಾ ಪೈಪೋಟಿ ನಡೆಸುತ್ತಿದ್ದಾರೆ. ವಿಲನ್ ವಿಭಾಗದಲ್ಲಿ ಧನಂಜಯ್ ಭಾರಿ ಮುನ್ನಡೆ ಪಡೆದುಕೊಂಡಿದ್ದು, ಕೆಜಿಎಫ್ ವಿಲನ್ ರಾಮ್, ರವಿಶಂಕರ್ ರೇಸ್ ನಲ್ಲಿದ್ದಾರೆ. ನಿರ್ದೇಶಕರ ವಿಭಾಗದಲ್ಲಿ ಆರ್ ಚಂದ್ರು ಮುನ್ನಡೆ ಕಾಯ್ದುಕೊಂಡಿದ್ದು, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ರೇಸ್ ನಲ್ಲಿದ್ದಾರೆ.

ಸಂಗೀತ, ಕಾಮಿಡಿ ವಿಭಾಗದಲ್ಲಿ

ಸಂಗೀತ, ಕಾಮಿಡಿ ವಿಭಾಗದಲ್ಲಿ

ಸಂಗೀತ ನಿರ್ದೇಶಕ ವಿಭಾಗದಲ್ಲಿ ಅರ್ಜುನ್ ಜನ್ಯ ಮುನ್ನಡೆ ಸಾಧಿಸಿದ್ದಾರೆ. ಕಾಮಿಡಿ ವಿಭಾಗದಲ್ಲಿ ನಾಗಭೂಷಣ್, ನವನಿರ್ದೇಶಕ ವಿಭಾಗದಲ್ಲಿ ಜನಾರ್ಧನ್ ಚಿಕ್ಕಣ್ಣ, ನವನಟ ವಿಭಾಗದಲ್ಲಿ ಪ್ರಥಮ್, ನವನಟಿ ವಿಭಾಗದಲ್ಲಿ ಐಶ್ವರ್ಯ ಅರ್ಜುನ್ ಹಾಗೂ ಆಫ್ ಬೀಟ್ ಸಿನಿಮಾ ವಿಭಾಗದಲ್ಲಿ ಸರ್ಕಾರಿ ಹಿ ಪ್ರಾ ಶಾಲೆ ಚಿತ್ರಗಳು ಮುನ್ನಡೆ ಕಾಯ್ದುಕೊಂಡಿದೆ. ಈ ಎಲ್ಲದಕ್ಕೂ ಉಳಿದ ಚಿತ್ರಗಳು ಭಾರಿ ಫೈಟ್ ನೀಡುತ್ತಿದೆ.

ಫೆಬ್ರವರಿ 5 ರಂದು ಫಲಿತಾಂಶ

ಫೆಬ್ರವರಿ 5 ರಂದು ಫಲಿತಾಂಶ

ಅಂದ್ಹಾಗೆ, ಇದೇ ಫಲಿತಾಂಶವಲ್ಲ. ಜನವರಿ 4ರ ತನಕ ಮುನ್ನಡೆಯಲ್ಲಿರುವವರ ಪಟ್ಟಿಯಷ್ಟೆ. ಫಿಲ್ಮಿಬೀಟ್ ಪೋಲ್ ಫೆಬ್ರವರಿ 5ರ ವರೆಗೂ ನಡೆಯಲಿದ್ದು, ಅಂದು ಕೊನೆಯಾಗಲಿದೆ. ಇನ್ನು ಒಂದು ತಿಂಗಳು ಕಾಲಾವಕಾಶವಿದ್ದು, ನಿಮ್ಮ ನೆಚ್ಚಿನ ತಾರೆಯರನ್ನ ಗೆಲ್ಲಿಸುವ ಅವಕಾಶ ನಿಮ್ಮ ಮುಂದೆ ಇದೆ. ಕೆಳಗೆ ನೀಡಲಿರುವ ಲಿಂಕ್ ಕ್ಲಿಕ್ ಮಾಡಿ ವೋಟ್ ಮಾಡಿ.

More from Filmibeat

English summary
Filmibeat kannada poll 2018 will ends on february 5th. Vote your favorite film actor, director, and other category.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X