ಫಿಲ್ಮಿಬೀಟ್ ಓದುಗರ ತೀರ್ಪು: 2018ರ ಅತ್ಯುತ್ತಮ ನಟ ಅಂಬರೀಶ್
2018ನೇ ಸಾಲಿನ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಾಸ್ಯ ನಟ ಸೇರಿದಂತೆ ಒಟ್ಟು ಹನ್ನೊಂದು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018' ಪೋಲ್ ಆಯೋಜಿಸಿತ್ತು.
ಕಳೆದ ಒಂದೂವರೆ ತಿಂಗಳಿಂದ ನಡೆದ ಈ ಸಿನಿ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಓದುಗ ಪ್ರಭುಗಳ ಇಚ್ಛೆ ಪ್ರಕಾರ, 2018ರ 'ಅತ್ಯುತ್ತಮ ನಟ' ಆಗಿ ಹೊರಹೊಮ್ಮಿರುವುದು ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್.
ಸುದೀಪ್, ಶಿವರಾಜ್ ಕುಮಾರ್, ಯಶ್ ಅಂತಹ ಯುವ ನಟರು ನಾಮನಿರ್ದೇಶನವಾಗಿದ್ದರೂ, ಅವರನ್ನೆಲ್ಲಾ ಹಿಂದಿಕ್ಕಿ ಅಂಬಿ ಅತಿ ಹೆಚ್ಚು ಮತಗಳನ್ನ ಪಡೆದುಕೊಂಡಿದ್ದಾರೆ. ಹಾಗಿದ್ರೆ, ಒಟ್ಟು ಎಷ್ಟು ಮತ ಬಂದಿದೆ? ಮುಂದೆ ಓದಿ.....

ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ
ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುದೀಪ್ ಅಭಿನಯಿಸಿದ್ದ ಕೊನೆಯ ಸಿನಿಮಾ ಚಿತ್ರ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಅಭಿನಯಕ್ಕಾಗಿ ಅಂಬರೀಶ್ ನಾಮನಿರ್ದೇಶನವಾಗಿದ್ದರು. ಶೇಕಡಾ 34 ರಷ್ಟು ಮತ ಪಡೆದುಕೊಂಡಿರುವ ದಿವಂಗತ ನಟ ಅಂಬರೀಶ್ ಒಟ್ಟು 18863 ಮತಗಳನ್ನ ಪಡೆದು ಜಯಶೀಲರಾಗಿದ್ದಾರೆ.

ನಂತರದ ಸ್ಥಾನದಲ್ಲಿ ಶಿವಣ್ಣ
ಟಗರು ಚಿತ್ರದ ನಟನೆಗಾಗಿ ನಾಮಿನೇಟ್ ಆಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (11102 ಮತ) ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಕೆಜಿಎಫ್ ಸ್ಟಾರ್ ಯಶ್ (10489) ಸ್ಥಾನ ಪಡೆದುಕೊಂಡಿದ್ದಾರೆ.

ಸುದೀಪ್ ಮತ್ತು ಗಣೇಶ್
ನಾಲ್ಕನೇ ಸ್ಥಾನದಲ್ಲಿ ದಿ ವಿಲನ್ ಚಿತ್ರಕ್ಕಾಗಿ ನಾಮನಿರ್ದೇಶನವಾಗಿದ್ದ ಕಿಚ್ಚ ಸುದೀಪ್ (9162 ಮತ) ಹಾಗೂ ಐದನೇ ಸ್ಥಾನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು (1377 ಮತ) ಇದ್ದಾರೆ.

ಉಳಿದವರು ಯಾರು?
ಟಾಪ್ ಐದರ ನಂತರ ಅಜಯ್ ರಾವ್, ಕಾರ್ತಿಕ್ ಜಯರಾಂ, ಸತೀಶ್ ನೀನಾಸಂ, ಶರಣ್, ದುನಿಯಾ ವಿಜಯ್, ಜಗ್ಗೇಶ್, ಚಿರಂಜೀವಿ ಸರ್ಜಾ ಹಾಗೂ ದಿಗಂತ್ ಕ್ರಮವಾಗಿ ಸ್ಥಾನ ಪಡೆದುಕೊಂಡಿದ್ದಾರೆ.


Click it and Unblock the Notifications











