twitter
    For Quick Alerts
    ALLOW NOTIFICATIONS  
    For Daily Alerts

    ಫಿಲ್ಮಿಬೀಟ್ ಓದುಗರ ತೀರ್ಪು: 2018ರ ಅತ್ಯುತ್ತಮ ನಟ ಅಂಬರೀಶ್

    |

    2018ನೇ ಸಾಲಿನ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಾಸ್ಯ ನಟ ಸೇರಿದಂತೆ ಒಟ್ಟು ಹನ್ನೊಂದು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018' ಪೋಲ್ ಆಯೋಜಿಸಿತ್ತು.

    ಕಳೆದ ಒಂದೂವರೆ ತಿಂಗಳಿಂದ ನಡೆದ ಈ ಸಿನಿ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಓದುಗ ಪ್ರಭುಗಳ ಇಚ್ಛೆ ಪ್ರಕಾರ, 2018ರ 'ಅತ್ಯುತ್ತಮ ನಟ' ಆಗಿ ಹೊರಹೊಮ್ಮಿರುವುದು ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್.

    ಫಿಲ್ಮಿಬೀಟ್ ಪೋಲ್: ಅಂಬಿ vs ಕೆಜಿಎಫ್ ನಡುವೆ ಅಂತಿಮ ಹಂತದ ಹಣಾಹಣಿ ಫಿಲ್ಮಿಬೀಟ್ ಪೋಲ್: ಅಂಬಿ vs ಕೆಜಿಎಫ್ ನಡುವೆ ಅಂತಿಮ ಹಂತದ ಹಣಾಹಣಿ

    ಸುದೀಪ್, ಶಿವರಾಜ್ ಕುಮಾರ್, ಯಶ್ ಅಂತಹ ಯುವ ನಟರು ನಾಮನಿರ್ದೇಶನವಾಗಿದ್ದರೂ, ಅವರನ್ನೆಲ್ಲಾ ಹಿಂದಿಕ್ಕಿ ಅಂಬಿ ಅತಿ ಹೆಚ್ಚು ಮತಗಳನ್ನ ಪಡೆದುಕೊಂಡಿದ್ದಾರೆ. ಹಾಗಿದ್ರೆ, ಒಟ್ಟು ಎಷ್ಟು ಮತ ಬಂದಿದೆ? ಮುಂದೆ ಓದಿ.....

    ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ

    ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ

    ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುದೀಪ್ ಅಭಿನಯಿಸಿದ್ದ ಕೊನೆಯ ಸಿನಿಮಾ ಚಿತ್ರ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಅಭಿನಯಕ್ಕಾಗಿ ಅಂಬರೀಶ್ ನಾಮನಿರ್ದೇಶನವಾಗಿದ್ದರು. ಶೇಕಡಾ 34 ರಷ್ಟು ಮತ ಪಡೆದುಕೊಂಡಿರುವ ದಿವಂಗತ ನಟ ಅಂಬರೀಶ್ ಒಟ್ಟು 18863 ಮತಗಳನ್ನ ಪಡೆದು ಜಯಶೀಲರಾಗಿದ್ದಾರೆ.

    ಫಿಲ್ಮಿಬೀಟ್ Poll: ಹೀರೋಯಿನ್ ವಿಭಾಗದಲ್ಲಿ ಆಶಿಕಾ-ಪ್ರಿಯಾಂಕಾ ನಡುವೆ ರೇಸ್ ಫಿಲ್ಮಿಬೀಟ್ Poll: ಹೀರೋಯಿನ್ ವಿಭಾಗದಲ್ಲಿ ಆಶಿಕಾ-ಪ್ರಿಯಾಂಕಾ ನಡುವೆ ರೇಸ್

    ನಂತರದ ಸ್ಥಾನದಲ್ಲಿ ಶಿವಣ್ಣ

    ನಂತರದ ಸ್ಥಾನದಲ್ಲಿ ಶಿವಣ್ಣ

    ಟಗರು ಚಿತ್ರದ ನಟನೆಗಾಗಿ ನಾಮಿನೇಟ್ ಆಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (11102 ಮತ) ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಕೆಜಿಎಫ್ ಸ್ಟಾರ್ ಯಶ್ (10489) ಸ್ಥಾನ ಪಡೆದುಕೊಂಡಿದ್ದಾರೆ.

    ಫಿಲ್ಮಿಬೀಟ್ Poll ನಲ್ಲಿ ಯಾರಿಗೆ ಮುನ್ನಡೆ, ವೋಟಿಂಗ್ ಯಾವಾಗ ಅಂತ್ಯ?ಫಿಲ್ಮಿಬೀಟ್ Poll ನಲ್ಲಿ ಯಾರಿಗೆ ಮುನ್ನಡೆ, ವೋಟಿಂಗ್ ಯಾವಾಗ ಅಂತ್ಯ?

    ಸುದೀಪ್ ಮತ್ತು ಗಣೇಶ್

    ಸುದೀಪ್ ಮತ್ತು ಗಣೇಶ್

    ನಾಲ್ಕನೇ ಸ್ಥಾನದಲ್ಲಿ ದಿ ವಿಲನ್ ಚಿತ್ರಕ್ಕಾಗಿ ನಾಮನಿರ್ದೇಶನವಾಗಿದ್ದ ಕಿಚ್ಚ ಸುದೀಪ್ (9162 ಮತ) ಹಾಗೂ ಐದನೇ ಸ್ಥಾನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು (1377 ಮತ) ಇದ್ದಾರೆ.

    ಉಳಿದವರು ಯಾರು?

    ಉಳಿದವರು ಯಾರು?

    ಟಾಪ್ ಐದರ ನಂತರ ಅಜಯ್ ರಾವ್, ಕಾರ್ತಿಕ್ ಜಯರಾಂ, ಸತೀಶ್ ನೀನಾಸಂ, ಶರಣ್, ದುನಿಯಾ ವಿಜಯ್, ಜಗ್ಗೇಶ್, ಚಿರಂಜೀವಿ ಸರ್ಜಾ ಹಾಗೂ ದಿಗಂತ್ ಕ್ರಮವಾಗಿ ಸ್ಥಾನ ಪಡೆದುಕೊಂಡಿದ್ದಾರೆ.

    English summary
    'Best of Sandalwood-2018' Poll Results are out. Kannada Actor ambarish is selected as 'Best Actor-2018' for ambi ning vayassaytho movie.
    Wednesday, February 6, 2019, 14:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X