ಓದುಗರ ಅಭಿಮತ: 2017ರ 'ಅತ್ಯುತ್ತಮ ನಟಿ' ಶಾನ್ವಿ ಶ್ರೀವಾಸ್ತವ್
2017ನೇ ಸಾಲಿನ 'ಅತ್ಯುತ್ತಮ ನಟಿ' ಸೇರಿದಂತೆ ಒಟ್ಟು 15 ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' ಪೋಲ್ ಆಯೋಜಿಸಿತ್ತು. ಈ ಪೋಲ್ ನ ಫಲಿತಾಂಶ ಈಗ ಹೊರಬಿದ್ದಿದೆ.
ಅತ್ಯುತ್ತಮ ನಟ ವಿಭಾಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಯಶಾಲಿ ಆಗಿದ್ದಾರೆ. ಸ್ಟಾರ್ ನಟರ ವಿಭಾಗದಲ್ಲಿದ್ದ ಪೈಪೋಟಿ ನಟಿಯರ ವಿಭಾಗದಲ್ಲೂ ಕಂಡು ಬಂದಿತ್ತು. ಕೊನೆಯವರೆಗೂ ಯಾರಿಗೆ ಹೆಚ್ಚು ಮತ ಸಿಗಬಹುದು ಎಂಬ ಕುತೂಹಲ ಇತ್ತು.
ಸುಮಾರು ಒಂದು ತಿಂಗಳ ಕಾಲ ಮತದಾನ ಪ್ರಕ್ರಿಯೆ ನಡೆದ ಫಿಲ್ಮಿಬೀಟ್ ಪೋಲ್ ನಲ್ಲಿ ಶಾನ್ವಿ ಶ್ರೀವಾಸ್ತವ್ 2017ರ 'ಅತ್ಯುತ್ತಮ ನಟಿ' ಆಗಿ ಹೊರಹೊಮ್ಮಿದ್ದಾರೆ. ಅಷ್ಟಕ್ಕೂ, ಶಾನ್ವಿ ಪಡೆದ ಮತಗಳೆಷ್ಟು? ಯಾರೆಲ್ಲಾ ನಾಮಿನೇಟ್ ಆಗಿದ್ದರು ಎಂದು ತಿಳಿಯಲು ಮುಂದೆ ಓದಿ.....

2017ರ ಅತ್ಯುತ್ತಮ ನಟಿ ಶಾನ್ವಿ
'ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2017ರ ಅತ್ಯುತ್ತಮ ನಟಿಯಾಗಿ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿದ್ದಾರೆ. 'ತಾರಕ್' ಚಿತ್ರದ ಅಭಿನಯಕ್ಕಾಗಿ ನಾಮಿನೇಟ್ ಆಗಿದ್ದ ಶಾನ್ವಿ ಅಭಿಮಾನಿಗಳ ಮನಗೆದ್ದಿದ್ದಾರೆ. 21% ವೋಟಿಂಗ್ ಶಾನ್ವಿಗೆ ಸಿಕ್ಕಿದೆ.

ಎರಡನೇ ಸ್ಥಾನಕ್ಕೆ ಹರಿಪ್ರಿಯಾ
ಸದ್ಯ, ಯಶಸ್ಸಿನ ನಟಿ ಎನಿಸಿಕೊಂಡಿರುವ ಹರಿಪ್ರಿಯಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ. 16% ಮತಗಳನ್ನ ಪಡೆದ ಹರಿಪ್ರಿಯಾ, ಶಾನ್ವಿಗೆ ಟಫ್ ಕಾಂಪಿಟೇಟರ್ ಆಗಿದ್ದರು.

ಮೂರನೇ ಸ್ಥಾನದಲ್ಲಿ ರಚಿತಾ
ಕಳೆದ ವರ್ಷ ಬೆಸ್ಟ್ ಆಕ್ಟ್ರೆಸ್ ಆಗಿದ್ದ ರಚಿತಾ ರಾಮ್ ಈ ವರ್ಷ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. 'ಭರ್ಜರಿ' ಚಿತ್ರಕ್ಕಾಗಿ ನಾಮಿನೇಟ್ ಆಗಿದ್ದ ರಚಿತಾ ಪರವಾಗಿ 12% ಮತದಾನವಾಗಿತ್ತು.

ನಾಲ್ಕನೇ ಸ್ಥಾನದಲ್ಲಿ ಶ್ರುತಿ
ಕನ್ನಡದ ಬ್ಯುಸಿಯೆಸ್ಟ್ ನಟಿ ಶ್ರುತಿ ಹರಿಹರನ್ ಫಿಲ್ಮಿಬೀಟ್ ಕನ್ನಡದ ಪೋಲ್ ಫಲಿತಾಂಶದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

ನಂತರದ ಸ್ಥಾನದಲ್ಲಿ...
ಇನ್ನುಳಿದಂತೆ 'ಚಮಕ್' ನಾಯಕಿ ರಶ್ಮಿಕಾ ಮಂದಣ್ಣ, ಸಂಗೀತಾ ಭಟ್, ಶ್ರದ್ಧಾ ಶ್ರೀನಾಥ್, ದೀಪಾ ಸನ್ನಿಧಿ, ಅಮೂಲ್ಯ, ಆಶಿಕಾ ರಂಗನಾಥ್, ಭಾಮಾ, ರಾಗಿಣಿ, ಪೂಜಾ ಗಾಂಧಿ, ಮೇಘನಾ ರಾಜ್, ಸಂಯುಕ್ತ ಹೆಗ್ಡೆ ಕ್ರಮವಾಗಿ ಸ್ಥಾನಗಳನ್ನ ಪಡೆದುಕೊಂಡಿದ್ದಾರೆ.


Click it and Unblock the Notifications











