ಕ್ರೇಜಿಸ್ಟಾರ್ ಪುತ್ರ ಮನೋರಂಜನ್ 2017ರ ಅತ್ಯುತ್ತಮ ಉದಯೋನ್ಮಖ ನಟ

By Bharath Kumar

ಪ್ರತಿವರ್ಷವೂ ಹೊಸ ಹೊಸ ಪ್ರತಿಭೆಗಳು ಕನ್ನಡ ಇಂಡಸ್ಟ್ರಿಗೆ ಬರ್ತಿದ್ದಾರೆ. ಇಂತಹ ನವ ಕಲಾವಿದರನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ಫಿಲ್ಮಿಬೀಟ್ ಆಯೋಜಿಸಿದ್ದ 'ಬೆಸ್ಟ್ ಅಫ್ ಸ್ಯಾಂಡಲ್ ವುಡ್-2017' ಪೋಲ್ ನಲ್ಲಿ ಅತ್ಯುತ್ತಮ ಉದಯೋನ್ಮುಖ ನಟ ವಿಭಾಗದಲ್ಲಿ ಸ್ಪರ್ಧೆ ನಡೆಸಲಾಗಿತ್ತು.

ಈ ಸ್ಪರ್ಧೆಯ ಫಲಿತಾಂಶ ಈಗಾಗಲೇ ಪ್ರಕಟವಾಗುತ್ತಿದ್ದು, ಈಗ ಅತ್ಯುತ್ತಮ ನವನಟ ಯಾರೆಂದು ಬಹಿರಂಗವಾಗಿದೆ. 'ಸಾಹೇಬ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಮನೋರಂಜನ್ 2017ರ ಉದಯೋನ್ಮುಖ ನಟನಾಗಿ ಹೊರಹೊಮ್ಮಿದ್ದಾರೆ.

ಹಾಗಿದ್ರೆ, ಮನೋರಂಜನ್ ಗಳಿಸಿದ ಮತಗಳೆಷ್ಟು? ಯಾರೆಲ್ಲ ಯುವ ನಟರು ಈ ರೇಸ್ ನಲ್ಲಿದ್ದರು ಎಂಬುದನ್ನ ತಿಳಿಯಲು ಮುಂದೆ ಓದಿ.....

ಅತ್ಯುತ್ತಮ ಉದಯೋನ್ಮುಖ ನಟ ಮನೋರಂಜನ್

ಅತ್ಯುತ್ತಮ ಉದಯೋನ್ಮುಖ ನಟ ಮನೋರಂಜನ್

'ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2017ರ 'ಅತ್ಯುತ್ತಮ ಉದಯೋನ್ಮುಖ ನಟ'ನಾಗಿ ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಆಯ್ಕೆಯಾಗಿದ್ದಾರೆ.

ಕ್ರೇಜಿಪುತ್ರನ 'ಸಾಹೇಬ'

ಕ್ರೇಜಿಪುತ್ರನ 'ಸಾಹೇಬ'

ಪ್ರತಿಭಾನ್ವಿತ ಯುವ ನಟರ ಜೊತೆ ಸ್ಪರ್ಧೆಯಲ್ಲಿದ್ದ ಮನೋರಂಜನ್ 57% ರಷ್ಟು ಮತಗಳನ್ನು ಪಡೆಯುವುದರ ಮೂಲಕ ವಿಜಯಶಾಲಿ ಆಗಿದ್ದಾರೆ. ಕಳೆದ ವರ್ಷ 'ಸಾಹೇಬ' ಚಿತ್ರದ ಮೂಲಕ ಮನೋರಂಜನ್ ಗೆ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದರು.

ಸಾಹೇಬನಿಗೆ ಫೈಟ್ ನೀಡಿದ ರಿಷಿ

ಸಾಹೇಬನಿಗೆ ಫೈಟ್ ನೀಡಿದ ರಿಷಿ

ಮನೋರಂಜನ್ ಅವರ 'ಸಾಹೇಬ' ಚಿತ್ರಕ್ಕೆ 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ ತೀವ್ರ ಪೈಪೋಟಿ ನೀಡಿದ್ದರು. ಅಂತಿಮವಾಗಿ, 24% ರಷ್ಟು ಮತಗಳನ್ನ ಪಡೆದು ರಿಷಿ ಎರಡನೇ ಸ್ಥಾನ ಪಡೆದುಕೊಂಡರು.

ನಂತರದ ಸ್ಥಾನದಲ್ಲಿ.....

ನಂತರದ ಸ್ಥಾನದಲ್ಲಿ.....

ಮನೋರಂಜನ್, ರಿಷಿ ನಂತರ 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ರಾಜ್ ಬಿ ಶೆಟ್ಟಿ, 'ಹುಲಿರಾಯ' ಖ್ಯಾತಿಯ ಬಾಲು ನಾಗೇಂದ್ರ, 'ರೋಗ್' ಚಿತ್ರದ ನಾಯಕ ಇಶಾನ್ ಮತ್ತು 'ಮನಸು ಮಲ್ಲಿಗೆ' ಚಿತ್ರದ ನಾಯಕ ನಿಶಾಂತ್ ಕ್ರಮವಾಗಿ ಸ್ಥಾನ ಪಡೆದುಕೊಂಡಿದ್ದಾರೆ.

More from Filmibeat

English summary
'Best of Sandalwood-2017' Poll Results are out. crazy star ravichandran son manoranjan is selected as 'Best debutant actor-2017'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X