For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್, ಟಗರು ಹಿಂದಿಕ್ಕಿ 2018ರ ಅತ್ಯುತ್ತಮ ಚಿತ್ರವಾದ 'ಅಂಬಿ'

  |

  ಫಿಲ್ಮಿಬೀಟ್ ಕನ್ನಡ ಆಯೋಜನೆ ಮಾಡಿದ್ದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' ಪೋಲ್ ಅಂತ್ಯವಾಗಿದ್ದು ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಿದೆ. ಅತ್ಯುತ್ತಮ ನಟ ವಿಭಾಗದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ವಿನ್ನರ್ ಆಗಿದ್ದಾರೆ.

  ಇದೀಗ, 2018ನೇ ಸಾಲಿನ ಅತ್ಯುತ್ತಮ ಚಿತ್ರ ಯಾವುದು ಎಂದು ಹೇಳುವ ಸಮಯ ಬಂದಿದೆ. ಕಳೆದ ವರ್ಷ ಬಹುದೊಡ್ಡ ಸಕ್ಸಸ್ ಕಂಡಿದ್ದ ಕೆಜಿಎಫ್, ಟಗರು ಅಂತಹ ಚಿತ್ರಗಳನ್ನ ಹಿಂದಿಕ್ಕಿ ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾ ಅತಿ ಹೆಚ್ಚು ಮತ ಪಡೆದು ವಿನ್ನರ್ ಆಗಿ ಹೊರಹೊಮ್ಮಿದೆ.

  ಫಿಲ್ಮಿಬೀಟ್ ಓದುಗರ ತೀರ್ಪು: 2018ರ ಅತ್ಯುತ್ತಮ ನಟ ಅಂಬರೀಶ್

  ಹಾಗಿದ್ರೆ, ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರಕ್ಕೆ ಒಟ್ಟು ಸಿಕ್ಕಿರುವ ಮತಗಳೆಷ್ಟು, ಕೆಜಿಎಫ್ ಮತ್ತು ಟಗರು ಸಿನಿಮಾಗಳಿಗೆ ಸಿಕ್ಕ ಮತವೆಷ್ಟು? ಉಳಿದಂತೆ ಯಾವೆಲ್ಲಾ ಸಿನಿಮಾಗಳು ನಾಮನಿರ್ದೇಶನವಾಗಿದ್ದವು ಎಂದು ತಿಳಿಯಲು ಮುಂದೆ ಓದಿ.....

  ಅತಿ ಹೆಚ್ಚು ಮತ ಪಡೆದ ಅಂಬಿ

  ಅತಿ ಹೆಚ್ಚು ಮತ ಪಡೆದ ಅಂಬಿ

  'ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2018ರ ಅತ್ಯುತ್ತಮ ಕಮರ್ಶಿಯಲ್ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತೋ'. ಗುರುದತ್ ಗಾಣಿಗ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸುದೀಪ್ ಕೂಡ ಅಭಿನಯಿಸಿದ್ದರು. ಶೇಕಡಾ 32 ರಷ್ಟು ಮತಗಳನ್ನ ಪಡೆದಿರುವ ಅಂಬಿ ಸಿನಿಮಾ 16451 ವೋಟ್ ಪಡೆದು ಮೊದಲ ಸ್ಥಾನದಲ್ಲಿದೆ.

  ಫಿಲ್ಮಿಬೀಟ್ ಪೋಲ್: ಅಂಬಿ vs ಕೆಜಿಎಫ್ ನಡುವೆ ಅಂತಿಮ ಹಂತದ ಹಣಾಹಣಿ

  ಕೆಜಿಎಫ್ ಮತ್ತು ಟಗರು

  ಕೆಜಿಎಫ್ ಮತ್ತು ಟಗರು

  ಇನ್ನು ಎರಡನೇ ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ (16000 ಮತ) ಸಿನಿಮಾ, ಮೂರನೇ ಸ್ಥಾನದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯದ ಟಗರು 13434 ಮತಗಳನ್ನ ಪಡೆದು ಮೂರನೇ ಸ್ಥಾನದಲ್ಲಿದೆ.

  ವಿಲನ್, ಅಯೋಗ್ಯ ಎಷ್ಟನೇ ಸ್ಥಾನ

  ವಿಲನ್, ಅಯೋಗ್ಯ ಎಷ್ಟನೇ ಸ್ಥಾನ

  ಇನ್ನು ಕಳೆದ ವರ್ಷದ ಬಹುನಿರೀಕ್ಷೆಯ ಚಿತ್ರಗಳಾದ ದಿ ವಿಲನ್ ನಾಲ್ಕನೇ ಸ್ಥಾನ, ಅಮ್ಮ ಐ ಲವ್ ಯೂ ಐದನೇ ಸ್ಥಾನ, ಅಯೋಗ್ಯ ಆರನೇ ಸ್ಥಾನದಲ್ಲಿವೆ.

  ಫಿಲ್ಮಿಬೀಟ್ Poll: ಹೀರೋಯಿನ್ ವಿಭಾಗದಲ್ಲಿ ಆಶಿಕಾ-ಪ್ರಿಯಾಂಕಾ ನಡುವೆ ರೇಸ್

  ಉಳಿದಂತೆ ಯಾವ ಚಿತ್ರವಿದೆ

  ಉಳಿದಂತೆ ಯಾವ ಚಿತ್ರವಿದೆ

  ಇನ್ನುಳಿದಂತೆ ಬಕಾಸುರ, ರ್ಯಾಂಬೋ, ಪ್ರೇಮ ಬರಹ, ಕಥೆಯೊಂದು ಶುರುವಾಗಿದೆ. ವಿಕ್ಟರಿ 2 ಹಾಗೂ ಕನಕ ಚಿತ್ರಗಳು ಕ್ರಮವಾಗಿ ಸ್ಥಾನಪಡೆದುಕೊಂಡಿದೆ.

  English summary
  'Best of Sandalwood-2018' Poll Results are out. rebel star ambarish and sudeep starrer 'ambi ning vayassaytho' movie is selected as 'Best Commercial Movie-2018'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X