2017ರ ಅತ್ಯುತ್ತಮ ಕಮರ್ಷಿಯಲ್ ಸಿನಿಮಾ 'ತಾರಕ್'

By Bharath Kumar

Recommended Video

2017ರ ಅತ್ಯುತ್ತಮ ಕಮರ್ಷಿಯಲ್ ಸಿನಿಮಾ ಯಾವುದು ? | Filmibeat Kannada

ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' ಪೋಲ್ ನ ಫಲಿತಾಂಶ ಹೊರಬಿದ್ದಿದ್ದು, 2017ನೇ ಸಾಲಿನ ಅತ್ಯುತ್ತಮ ಕಮರ್ಷಿಯಲ್ ಸಿನಿಮಾ ಯಾವುದೆಂದು ಬಹಿರಂಗವಾಗಿದೆ.

2017ನೇ ಸಾಲಿನಲ್ಲಿ ಸುಮಾರು 185ಕ್ಕೂ ಅಧಿಕ ಕನ್ನಡ ಸಿನಿಮಾಗಳು ಬಿಡುಗಡೆಯಾಗಿದ್ದವು. ಸ್ಟಾರ್ ನಟರ ದೊಡ್ಡ ದೊಡ್ಡ ಸಿನಿಮಾಗಳು, ಹೊಸಬರ ಚಿತ್ರಗಳು, ಪ್ರಯೋಗಾತ್ಮಕ ಚಿತ್ರಗಳು.....ಹೀಗೆ ಎಲ್ಲ ರೀತಿಯ ಚಿತ್ರಗಳು ತೆರೆಗ ಬಂದಿದ್ದವು.

ಫಿಲ್ಮಿಬೀಟ್ ಮತ್ತು ಒನ್ ಇಂಡಿಯಾ ಓದುಗರ ಇಚ್ಛೆಯ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಶಾನ್ವಿ ಶ್ರೀವಾಸ್ತವ್, ಶ್ರುತಿ ಹರಿಹರನ್ ಅಭಿನಯದ 'ತಾರಕ್' ಚಿತ್ರ 2017ರ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಎಷ್ಟು ಮತಗಳು, ನಂತರದ ಸ್ಥಾನಗಳು ಯಾವ ಚಿತ್ರಕ್ಕೆ ಎಂದು ತಿಳಿಯಲು ಮುಂದೆ ಓದಿ....

ಅತ್ಯುತ್ತಮ ಕಮರ್ಷಿಯಲ್ ಸಿನಿಮಾ 'ತಾರಕ್'

ಅತ್ಯುತ್ತಮ ಕಮರ್ಷಿಯಲ್ ಸಿನಿಮಾ 'ತಾರಕ್'

'ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2017ರ ಅತ್ಯುತ್ತಮ ಕಮರ್ಶಿಯಲ್ ಸಿನಿಮಾ 'ತಾರಕ್'. ಪ್ರಕಾಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಶಾನ್ವಿ ಶ್ರೀವಾಸ್ತವ್, ಶ್ರುತಿ ಹರಿಹರನ್ ಇಬ್ಬರು ದರ್ಶನ್ ಗೆ ನಾಯಕಿಯಾಗಿದ್ದರು.

ಎರಡನೇ ಸ್ಥಾನಕ್ಕೆ 'ರಾಜಕುಮಾರ'

ಎರಡನೇ ಸ್ಥಾನಕ್ಕೆ 'ರಾಜಕುಮಾರ'

ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ 'ರಾಜಕುಮಾರ' ಕೊನೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ಈ ಸಿನಿಮಾ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾಗಿದೆ.

ಮೂರನೇ ಸ್ಥಾನದಲ್ಲಿ 'ಹೆಬ್ಬುಲಿ'

ಮೂರನೇ ಸ್ಥಾನದಲ್ಲಿ 'ಹೆಬ್ಬುಲಿ'

ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ 'ಹೆಬ್ಬುಲಿ' ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಸುದೀಪ್ ಅಭಿನಯಿಸಿದ್ದ ಈ ಚಿತ್ರವನ್ನ ಕೃಷ್ಣ ನಿರ್ದೇಶನ ಮಾಡಿದ್ದರು.

ನಾಲ್ಕನೇ ಸ್ಥಾನದಲ್ಲಿ 'ಮಫ್ತಿ'

ನಾಲ್ಕನೇ ಸ್ಥಾನದಲ್ಲಿ 'ಮಫ್ತಿ'

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯಿಸಿದ್ದ 'ಮಫ್ತಿ' ಚಿತ್ರ ಫಿಲ್ಮಿಬೀಟ್ ಪೋಲ್ ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಐದನೇ ಸ್ಥಾನದಲ್ಲಿ 'ಭರ್ಜರಿ'

ಐದನೇ ಸ್ಥಾನದಲ್ಲಿ 'ಭರ್ಜರಿ'

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಚಿತಾ ರಾಮ್, ಹರಿಪ್ರಿಯಾ ಅಭಿನಯಿಸಿದ್ದ 'ಭರ್ಜರಿ' 2017ರ ಯಶಸ್ವಿ ಚಿತ್ರ. ಚೇತನ್ ಕುಮಾರ್ ನಿರ್ದೇಶನ ಮಾಡಿದ್ದ ಈ ಚಿತ್ರ ಐದನೇ ಸ್ಥಾನ ಪಡೆದುಕೊಂಡಿದೆ.

ಆರನೇ ಸ್ಥಾನದಲ್ಲಿ 'ಚೌಕ'

ಆರನೇ ಸ್ಥಾನದಲ್ಲಿ 'ಚೌಕ'

ದ್ವಾರಕೀಶ್ ನಿರ್ಮಾಣದ 50 ಸಿನಿಮಾ 'ಚೌಕ' ಆರನೇ ಸ್ಥಾನದಲ್ಲಿದೆ. ಪ್ರೇಮ್, ವಿಜಯ ರಾಘವೇಂದ್ರ, ಪ್ರಜ್ವಲ್ ದೇವರಾಜ್, ದಿಂಗತ್ ಹಾಗೂ ದರ್ಶನ್ ಕಾಣಿಸಿಕೊಂಡಿದ್ದ ಈ ಸಿನಿಮಾ ಶತದಿನ ಬಾರಿಸಿತ್ತು.

ನಂತರದ ಸ್ಥಾನದಲ್ಲಿ.....

ನಂತರದ ಸ್ಥಾನದಲ್ಲಿ.....

ಇನ್ನುಳಿದಂತೆ 'ಬ್ಯೂಟಿಫುಲ್ ಮನಸುಗಳು', 'ಮುಗುಳುನಗೆ', 'ಆಪರೇಷನ್ ಅಲಮೇಲಮ್ಮ', 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ', 'ಪುಷ್ಪಕ ವಿಮಾನ', 'ಕಾಲೇಜ್ ಕುಮಾರ' ಚಿತ್ರಗಳು ಕ್ರಮವಾಗಿ ಸ್ಥಾನ ಪಡೆದುಕೊಂಡಿದೆ.

More from Filmibeat

English summary
'Best of Sandalwood-2017' Poll Results are out. Challenging Star Darshan starrer 'Tarak' movie is selected as 'Best Commercial Movie-2017'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X