For Quick Alerts
  ALLOW NOTIFICATIONS  
  For Daily Alerts

  'ಬೆಸ್ಟ್ ಆಫ್-2016' ಫಿಲ್ಮಿಬೀಟ್ ಮತದಾನಕ್ಕೆ ಕನ್ನಡ ತಾರೆಯರು ಸಾಥ್!

  By Bharath Kumar
  |

  'ಫಿಲ್ಮಿ ಬೀಟ್ ಕನ್ನಡ' ಅಯೋಜಿಸಿರುವ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಗೆ ಸ್ಯಾಂಡಲ್ ವುಡ್ ತಾರೆಯರು ಹಾಗೂ ಅಭಿಮಾನಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರಕ್ಕಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ತಾರೆಯರು ಹಾಗೂ ತಾರೆಯರ ಫ್ಯಾನ್ ಕ್ಲಬ್ ಸ್ವಯಂ ಪ್ರೇರಿತವಾಗಿ ಪೋಲ್ ಪೇಜ್ ನ ಶೇರ್ ಮಾಡಿಕೊಂಡು, ಮತದಾನದಲ್ಲಿ ಭಾಗವಹಿಸುವಂತೆ ಎಲ್ಲರನ್ನೂ ಕೋರಿದ್ದಾರೆ.

  ಈ ವರ್ಷದಲ್ಲಿ ತೆರೆಕಂಡ ಕನ್ನಡ ಚಿತ್ರಗಳ ಅನ್ವಯ, 2016ರ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಾಸ್ಯ ನಟ ಸೇರಿದಂತೆ ಹಲವು ವಿಭಾಗಗಳಲ್ಲಿ 'ಫಿಲ್ಮಿ ಬೀಟ್ ಕನ್ನಡ' ಚುನಾವಣೆ ನಡೆಸುತ್ತಿದೆ.[2016ರ ಅತ್ಯುತ್ತಮ ನಟ-ನಟಿ ಯಾರು? ನೀವೇ ಆಯ್ಕೆ ಮಾಡಿ]

  ಈಗಾಗಲೇ 'ಫಿಲ್ಮಿಬೀಟ್ ಕನ್ನಡ' ವೆಬ್ ಸೈಟ್, ಫೇಸ್ ಬುಕ್ ಪೇಜ್ ಹಾಗೂ ಟ್ವಿಟ್ಟರ್ ನಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನ ಪ್ರಕಟ ಮಾಡಿದ್ದು, ವೋಟಿಂಗ್ ಕೂಡ ನಡೆಯುತ್ತಿದೆ. ನಮ್ಮ ಪೋಲ್ ಪ್ರಕ್ರಿಯೆಯನ್ನ ಮೆಚ್ಚಿಕೊಂಡ ಕನ್ನಡ ತಾರೆಯರು 'ಫಿಲ್ಮಿಬೀಟ್ ಕನ್ನಡ'ನಲ್ಲಿ 'ವೋಟ್' ಮಾಡುವಂತೆ ಕರೆಕೊಟ್ಟಿದ್ದಾರೆ.

  ಪಾರುಲ್ ಯಾದವ್ ಖುಷಿ

  ಪಾರುಲ್ ಯಾದವ್ ಖುಷಿ

  'ಫಿಲ್ಮಿಬೀಟ್ ಕನ್ನಡ' ಅಯೋಜಿಸಿರುವ ಪೋಲ್ ನ ಅತ್ಯುತ್ತಮ ನಟಿ ವಿಭಾಗದಲ್ಲಿ ನಾನು ನಾಮನಿರ್ದೇಶನವಾಗಿರುವುದು ಸಂತೋಷ ತಂದಿದೆ. ನಿಮ್ಮ ಹೃದಯ ಹಾಗೂ ಮತಗಳನ್ನ ಗೆಲ್ಲುವ ಆಶಯ ನನಗಿದೆ'' ಎಂದು ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ನಲ್ಲಿ ಪಾರುಲ್ ಯಾದವ್ 'ಜೆಸ್ಸಿ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮನಿರ್ದೇಶನವಾಗಿದ್ದಾರೆ.[ಈ ಲಿಂಕ್ ಕ್ಲಿಂಕ್ ಮಾಡಿ ಅತ್ಯುತ್ತಮ ನಟಿಯ ಆಯ್ಕೆ ಮಾಡಿ]

  ''ಪ್ಲೀಸ್ ವೋಟ್ ಮಾಡಿ'' ಎಂದ ಪ್ರಿಯಾಮಣಿ

  ''ಪ್ಲೀಸ್ ವೋಟ್ ಮಾಡಿ'' ಎಂದ ಪ್ರಿಯಾಮಣಿ

  ನಟಿ ಪ್ರಿಯಾಮಣಿ ಕೂಡ ''ಫಿಲ್ಮಿಬೀಟ್ ಕನ್ನಡ' ಅಯೋಜಿಸಿರುವ ಪೋಲ್ ಪೇಜ್ ನ ಶೇರ್ ಮಾಡಿಕೊಂಡು, ತಮ್ಮ ಟ್ವಿಟ್ಟರ್ ನಲ್ಲಿ ''ದಯವಿಟ್ಟು ವೋಟ್ ಮಾಡಿ'' ಎಂದು ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ. 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ನಲ್ಲಿ ಪ್ರಿಯಾಮಣಿ 'ದನಕಾಯೋನು' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮನಿರ್ದೇಶನವಾಗಿದ್ದಾರೆ.[2016: ಈ ವರ್ಷದ ಅತ್ಯುತ್ತಮ ನಾಯಕಿ ಯಾರು?]

  ಲೋಹಿತ್ ಮೆಚ್ಚುಗೆ

  ಲೋಹಿತ್ ಮೆಚ್ಚುಗೆ

  'ಫಿಲ್ಮಿಬೀಟ್' ಅಯೋಜಿಸಿರುವ ಪೋಲ್ ನಲ್ಲಿ 'ಅತ್ಯುತ್ತುಮ ನಿರ್ದೇಶಕ 2016' ಪಟ್ಟಿಯಲ್ಲಿ ನಾನು ಕೂಡ ಸ್ಥಾನ ಪಡೆದಿದ್ದೇನೆ. ದಯವಿಟ್ಟು ನನಗೆ ಸಪೋರ್ಟ್ ಮಾಡಿ ಎಂದು 'ಮಮ್ಮಿ ಸೇವ್ ಮಿ' ಚಿತ್ರದ ನಿರ್ದೇಶಕ ಲೋಹಿತ್ ಎಚ್ ಟ್ವೀಟ್ ಮಾಡಿದ್ದಾರೆ. 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ನಲ್ಲಿ ನಿರ್ದೇಶಕ ಲೋಹಿತ್ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ನಾಮನಿರ್ದೇಶನವಾಗಿದ್ದಾರೆ.[ಈ ಲಿಂಕ್ ಕ್ಲಿಂಕ್ ಮಾಡಿ ಅತ್ಯುತ್ತಮ ನಿರ್ದೇಶಕರನ್ನ ಆಯ್ಕೆ ಮಾಡಿ]

  ಸುದೀಪ್ ಫ್ಯಾನ್ಸ್

  ಸುದೀಪ್ ಫ್ಯಾನ್ಸ್

  'ಫಿಲ್ಮಿಬೀಟ್ ಕನ್ನಡ'ದ ಪೋಲ್ ಗೆ ವೋಟ್ ಮಾಡಿ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ನಲ್ಲಿ ನಟ ಸುದೀಪ್ 'ಕೋಟಿಗೊಬ್ಬ-2' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನವಾಗಿದ್ದಾರೆ.[2016ರ ಅತ್ಯುತ್ತಮ ಕನ್ನಡ ನಟ ಯಾರು? ನಿಮ್ಮ ಆಯ್ಕೆ?]

  ದರ್ಶನ್ ಫ್ಯಾನ್ಸ್

  ದರ್ಶನ್ ಫ್ಯಾನ್ಸ್

  'ಫಿಲ್ಮಿಬೀಟ್ ಕನ್ನಡ'ದ ಪೋಲ್ ಗೆ ವೋಟ್ ಮಾಡಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಬಳಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದೆ. 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ನಲ್ಲಿ ನಟ ದರ್ಶನ್ 'ಜಗ್ಗುದಾದ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನವಾಗಿದ್ದಾರೆ.[ಈ ಲಿಂಕ್ ಕ್ಲಿಂಕ್ ಮಾಡಿ ಅತ್ಯುತ್ತಮ ನಟನ ಆಯ್ಕೆ ಮಾಡಿ]

  ಯಶ್ ಫ್ಯಾನ್ಸ್

  ಯಶ್ ಫ್ಯಾನ್ಸ್

  ವರ್ಲ್ಡ್ ವೈಡ್ ಯಶ್ ಫ್ಯಾನ್ಸ್ ಕೂಡ 'ಫಿಲ್ಮಿಬೀಟ್ ಕನ್ನಡ'ದ ಪೋಲ್ ಗೆ ವೋಟ್ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ನಲ್ಲಿ ನಟ ಯಶ್ 'ಸಂತು ಸ್ಟ್ರೈಟ್ ಫಾರ್ವಾರ್ಡ್' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನವಾಗಿದ್ದಾರೆ.

  ರಮ್ಯಾ ಫ್ಯಾನ್ಸ್

  ರಮ್ಯಾ ಫ್ಯಾನ್ಸ್

  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿಮಾನಿಗಳು ಕೂಡ, 'ಫಿಲ್ಮಿಬೀಟ್ ಕನ್ನಡ'ದ ಪೋಲ್ ಗೆ ವೋಟ್ ಮಾಡಿ ಎಂದು ಕರೆ ನೀಡಿದ್ದಾರೆ. 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ನಲ್ಲಿ ನಟಿ ರಮ್ಯಾ 'ನಾಗರಹಾವು' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮನಿರ್ದೇಶನವಾಗಿದ್ದಾರೆ.[ಈ ಲಿಂಕ್ ಕ್ಲಿಂಕ್ ಮಾಡಿ ಅತ್ಯುತ್ತಮ ನಟಿಯ ಆಯ್ಕೆ ಮಾಡಿ]

  ರಚಿತಾ ರಾಮ್ ಫ್ಯಾನ್ಸ್

  ರಚಿತಾ ರಾಮ್ ಫ್ಯಾನ್ಸ್

  ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿಮಾನಿಗಳು ಕೂಡ, 'ಫಿಲ್ಮಿಬೀಟ್ ಕನ್ನಡ'ದ ಪೋಲ್ ಗೆ ವೋಟ್ ಮಾಡಿ ಎಂದು ಶೇರ್ ಮಾಡಿದ್ದಾರೆ. 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ನಲ್ಲಿ ರಚಿತಾ ರಾಮ್ 'ಚಕ್ರವ್ಯೂಹ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮನಿರ್ದೇಶನವಾಗಿದ್ದಾರೆ.

  English summary
  Best of 2016: Kannada Filmibeat Poll has obtained good response. Thanks to Sandalwood Stars and Fan Clubs for volunteeringly sharing the Poll and making public participate in Voting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X