ರಾಜ್ ಬಯೋಪಿಕ್ ಬರಬೇಕೆ? : ಏನೆಂದರು ಕನ್ನಡಿಗರು?
ಇದು ಬಯೋಪಿಕ್ ಗಳ ಕಾಲ. ಹಾಗೆ ಸುಮ್ಮನೆ ಗಮನಿಸಿ, ಅಕ್ಕ ಪಕ್ಕದ ಇಂಡಸ್ಟ್ರಿಯಲ್ಲಿ ಬರುತ್ತಿರುವ ಸಿನಿಮಾಗಳ ಪೈಕಿ ಬಹುತೇಕ ಸಿನಿಮಾಗಳು ಜೀವನಾಧಾರಿತ ಕಥೆ ಹೊಂದಿದೆ.
ಬಾಲಿವುಡ್ ನಲ್ಲಿ ಪ್ರಧಾನ ಮಂತ್ರಿ ಮೋದಿ ಕಥೆಯ ಚಿತ್ರ ಹಾಗೂ 'ದಿ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಎರಡೂ ಚಿತ್ರಗಳು ದೊಡ್ಡ ಸುದ್ದಿ ಮಾಡುತ್ತಿವೆ. ಇತ್ತ ಟಾಲಿವುಡ್ ನಲ್ಲಿ 'ಎನ್ ಟಿ ಆರ್' ಬಯೋಪಿಕ್ ಸಿನಿಮಾ ಕೂಡ ಬಿಡುಗಡೆಯಾಗಿದೆ.
'ಎನ್ ಟಿ ಆರ್' ರೀತಿ ಕನ್ನಡದಲ್ಲಿ ಕೂಡ ಡಾ.ರಾಜ್ ಕುಮಾರ್ ಅವರ ಬಗ್ಗೆ ಸಿನಿಮಾ ಬರಬೇಕು ಎಂದು ನಟ ಬಾಲಕೃಷ್ಣ ತಮ್ಮ ಬಯಕೆಯನ್ನು ಇತ್ತೀಚಿಗಷ್ಟೆ ವ್ಯಕ್ತಪಡಿಸಿದ್ದರು.
ಇದೇ ಪ್ರಶ್ನೆಯನ್ನು 'ಫಿಲ್ಮಿಬೀಟ್ ಕನ್ನಡ' ಪೋಲ್ ನಲ್ಲಿ ಕೇಳಲಾಗಿತ್ತು. ರಾಜ್ ಕುಮಾರ್ ಅವರ ಬಯೋಪಿಕ್ ಸಿನಿಮಾ ಬರಬೇಕೆ ಅಥವಾ ಬೇಡವೆ ಎಂದು ಎರಡು ಆಯ್ಕೆಗಳನ್ನು ನೀಡಲಾಗಿದ್ದು, ಸಾಕಷ್ಟು ಜನ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಫೇಸ್ ಬುಕ್ ನಲ್ಲಿ ಬಂದ ಪ್ರತಿಕ್ರಿಯೆ
ರಾಜ್ ಕುಮಾರ್ ಅವರ ಜೀವನಾಧಾರಿತ ಸಿನಿಮಾ ಬರಬೇಕೆ ಎನ್ನುವ ಪ್ರಶ್ನೆಗೆ ಫೇಸ್ ಬುಕ್ ನಲ್ಲಿ 500ಕ್ಕೂ ಹೆಚ್ಚು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಇವರಲ್ಲಿ 70 ರಷ್ಟು ಜನರು ರಾಜ್ ಬಗ್ಗೆ ಸಿನಿಮಾ ಬರಲಿ ಎಂದರೆ, ಉಳಿದ 30 ರಷ್ಟು ಜನರು ಸಿನಿಮಾ ಬರುವುದು ಬೇಡ ಎಂದಿದ್ದಾರೆ.

ಸಿನಿಮಾ ಬರಬೇಕು ಎಂದ ಅಭಿಮಾನಿಗಳು
ಫೇಸ್ ಬುಕ್ ಮಾತ್ರವಲ್ಲದೆ ಫಿಲ್ಮಿಬೀಟ್ ವೆಬ್ ಸೈಟ್ ನಲ್ಲಿ ಕೂಡ ನೇರವಾಗಿ ಬಂದು ಅನೇಕರು ವೋಟ್ ಮಾಡಿದ್ದಾರೆ. ಈ ಪೈಕಿ ಇಲ್ಲಿಯೂ ಸಿನಿಮಾ ಬರಬೇಕು ಎನ್ನುವವರ ಸಂಖ್ಯೆ ಜಾಸ್ತಿ ಇದೆ. 69 ರಷ್ಟು ಜನರು ಸಿನಿಮಾ ಬರಲಿ ಹಾಗೂ 31 ರಷ್ಟು ಜನರು ಸಿನಿಮಾ ಬರುವುದು ಬೇಡ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಬಾಲಯ್ಯ ಆಸೆ ಮಾತ್ರವಲ್ಲ ಅಭಿಮಾನಿಗಳ ಆಸೆ
ರಾಜ್ ಕುಮಾರ್ ಬಯೋಪಿಕ್ ನೋಡಬೇಕು ಎನ್ನುವ ಆಸೆ ಬರೀ ಬಾಲಯ್ಯ ಅವರ ಆಸೆಯಲ್ಲ. ಬಹುತೇಕ ಕನ್ನಡಿಗರು ರಾಜ್ ಬಗ್ಗೆಯ ಸಿನಿಮಾ ನೋಡುವ ಬಯಕೆ ಹೊಂದಿದ್ದಾರೆ. ಈ ಪೋಲ್ ಮೂಲಕವೂ ಆ ಮಾತು ನಿಜವಾಗಿದೆ. ಆದರೆ, ಕರುನಾಡ ಕಣ್ಮಣಿಯ ಕಥೆ ತೆರೆ ಮೇಲೆ ಯಾವಾಗ ಬರುತ್ತದೆ ಎಂಬುದೇ ತಿಳಿದಿಲ್ಲ.

ರಾಜ್ ಪಾತ್ರ ಪುನೀತ್ ಮಾಡಲಿ ಎಂದ ಬಾಲಯ್ಯ
ನಟ ಬಾಲಕೃಷ್ಣ ಸೋಮವಾರ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಪ್ರೆಸ್ ಮೀಟ್ ನಲ್ಲಿ ರಾಜ್ ಬಯೋಪಿಕ್ ಬಗ್ಗೆ ಮಾತನಾಡಿದ್ದರು. ಈ ವೇಳೆ ರಾಜ್ ಕುಮಾರ್ ಅವರ ಪಾತ್ರವನ್ನ ಪುನೀತ್ ರಾಜ್ ಕುಮಾರ್ ಮಾಡಬೇಕು ಎಂದಿದ್ದರು. ತಮ್ಮ ತಂದೆಯ ಪಾತ್ರವನ್ನ 'ಎನ್ ಟಿ ಆರ್' ಚಿತ್ರದಲ್ಲಿ ಬಾಲಯ್ಯ ನಿರ್ವಹಿಸಿದ್ದಾರೆ.


Click it and Unblock the Notifications











