For Quick Alerts
  ALLOW NOTIFICATIONS  
  For Daily Alerts

  ಮಂತ್ರಿ ಮಾಲ್ ನಲ್ಲಿ 'ಕಾಲಾ' ಪ್ರದರ್ಶನ ಶುರು.! ಟಿಕೆಟ್ ಗಾಗಿ ರಶ್ಶೋ ರಶ್ಶು.!

  By Harshitha
  |

  ಬೆಳಗ್ಗೆಯಷ್ಟೇ ಬೆಂಗಳೂರಿನ ಮಂತ್ರಿ ಸ್ಕ್ವೇರ್ ಮಾಲ್ ಮುಂದೆ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಕರ್ನಾಟಕದಲ್ಲಿ 'ಕಾಲಾ' ಚಿತ್ರದ ವಿತರಣೆ ಪಡೆದಿದ್ದ ಕನಕಪುರ ಶ್ರೀನಿವಾಸ್ ವಿರುದ್ಧ ಧಿಕ್ಕಾರ ಕೂಗಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

  ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಮಂತ್ರಿ ಮಾಲ್ ನ ಐನಾಕ್ಸ್ ಚಿತ್ರಮಂದಿರದ ಸಿಬ್ಬಂದಿ ಬೆಳಗ್ಗಿನ 'ಕಾಲಾ' ಚಿತ್ರ ಪ್ರದರ್ಶನವನ್ನು ರದ್ದು ಮಾಡಿದ್ದರು. ಆದ್ರೀಗ, 'ಕಾಲಾ' ಪ್ರದರ್ಶನ ಶುರುವಾಗಿದೆ.

  ಮಂತ್ರಿ, ಒರಾಯನ್ ಮಾಲ್ ನಲ್ಲಿ 'ಕಾಲಾ' ಪ್ರದರ್ಶನ ರದ್ದು: ಹೊರಬಂದ ಅಭಿಮಾನಿಗಳು.!ಮಂತ್ರಿ, ಒರಾಯನ್ ಮಾಲ್ ನಲ್ಲಿ 'ಕಾಲಾ' ಪ್ರದರ್ಶನ ರದ್ದು: ಹೊರಬಂದ ಅಭಿಮಾನಿಗಳು.!

  ಮಂತ್ರಿ ಸ್ಕ್ವೇರ್ ಐನಾಕ್ಸ್ ನಲ್ಲಿ 2:10 ರಂದು 'ಕಾಲಾ' ಪ್ರದರ್ಶನ ಶುರು ಆಗಿದೆ. ಅಲ್ಲದೇ, ಇಂದು 3:30, 3:40, 5:35, 9:00, 9:30, 9:45, 9:50ಕ್ಕೆ 'ಕಾಲಾ' ಪ್ರದರ್ಶನ ಇರಲಿದೆ.

  ಬುಕ್ ಮೈ ಶೋನಲ್ಲಿ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ, ಐನಾಕ್ಸ್ ಬಾಕ್ಸ್ ಆಫೀಸ್ ನಲ್ಲಿ ನೇರವಾಗಿ ಟಿಕೆಟ್ ಕೊಡಲಾಗುತ್ತಿದೆ. ಟಿಕೆಟ್ ಪಡೆಯಲು ರಜನಿಕಾಂತ್ ಅಭಿಮಾನಿಗಳು ಮುಗಿಬೀಳ್ತಿದ್ದಾರೆ. ಹೀಗಾಗಿ, ಐನಾಕ್ಸ್ ಮುಂದೆ ರಶ್ಶೋ ರಶ್ಶು.!

  ಕರ್ನಾಟಕದ ಈ ಥಿಯೇಟರ್ ನಲ್ಲಿ 'ಕಾಲಾ' ರಿಲೀಸ್ ಆಗೋಯ್ತು.!ಕರ್ನಾಟಕದ ಈ ಥಿಯೇಟರ್ ನಲ್ಲಿ 'ಕಾಲಾ' ರಿಲೀಸ್ ಆಗೋಯ್ತು.!

  ಬೆಳಗ್ಗೆ ಪ್ರತಿಭಟನೆಯ ಕಾವು ಎದುರಿಸಿದ್ದ 'ಕಾಲಾ' ಚಿತ್ರ ಪ್ರದರ್ಶನ ಇದೀಗ ಎಲ್ಲೆಡೆ ನಿಧಾನವಾಗಿ ಶುರುವಾಗುತ್ತಿದೆ.

  English summary
  Finally Rajinikanth starrer 'Kaala' releases in Bengaluru: 'Kaala' show begins in Mantri Mall.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X