»   » ಸಿನಿಮಾ ಚಟುವಟಿಕೆಗೆ ಕೇಂದ್ರ ಸರ್ಕಾರದಿಂದ 1 ಬಿಲಿಯನ್‌ ರು.ನೆರವು

ಸಿನಿಮಾ ಚಟುವಟಿಕೆಗೆ ಕೇಂದ್ರ ಸರ್ಕಾರದಿಂದ 1 ಬಿಲಿಯನ್‌ ರು.ನೆರವು

Subscribe to Filmibeat Kannada

ನವದೆಹಲಿ : ಭಾರತೀಯ ಚಿತ್ರರಂಗವನ್ನು ಭೂಗತ ಜಗತ್ತಿನ ಕಳಂಕಿತ ಕೈಗಳಿಂದ ಮುಕ್ತಗೊಳಿಸಲು ಹಾಗೂ ಕಪ್ಪು ಹಣವನ್ನು ಚಿತ್ರ ನಿರ್ಮಾಣಕ್ಕೆ ಬಳಸುವುದನ್ನು ತಡೆಗಟ್ಟಲು, ಬ್ಯಾಂಕ್‌ಗಳು ಹಾಗೂ ವಿವಿಧ ಹಣಕಾಸು ಸಂಸ್ಥೆಗಳ ಮೂಲಕ 1 ಬಿಲಿಯನ್‌ ರುಪಾಯಿಗಳ ನೆರವನ್ನು ಚಿತ್ರ ನಿರ್ಮಾಣಕ್ಕೆ ಒದಗಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಈ ವಿಷಯವನ್ನು ವಿತ್ತ ಸಚಿವ ಯಶವಂತ ಸಿನ್ಹಾ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು. ಫಿಲಂ ಇಂಡಸ್ಟ್ರಿಯ ಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸಿನ ಮೊತ್ತದ ಕುರಿತು ಯಾವುದೇ ಸಮೀಕ್ಷೆಗಳು ನಡೆದಿಲ್ಲ . ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌ (ಐಡಿಬಿಐ) ನೂರು ಕೋಟಿ ರುಪಾಯಿಗಳನ್ನು ಸಿನಿಮಾ ಉದ್ದೇಶಗಳಿಗೆ ಒದಗಿಸಲು ಸಿದ್ಧವಿದೆ ಎಂದು ಸಿನ್ಹಾ ಹೇಳಿದರು.

ತಾವು ಹಾಗೂ ಸಚಿವೆ ಸುಷ್ಮಾ ಸ್ವರಾಜ್‌ ಅವರು ಅನೇಕ ಬಾರಿ ಸಿನಿಮೋದ್ಯಮದ ಪ್ರಮುಖರನ್ನು ಭೇಟಿ ಮಾಡಲು ಮುಂಬಯಿಗೆ ಭೇಟಿ ಕೊಟ್ಟಿದ್ದೇವೆ. ಬ್ಯಾಂಕ್‌ ಹಣಕಾಸಿನ ನೆರವು ಬಗೆಗೆ ಯಾವುದೇ ಸಲಹೆಗಳು ಬಂದಲ್ಲಿ ಪರಿಗಣಿಸಲು ಸರ್ಕಾರ ಸಿದ್ಧವಿದೆ. ಮೇ 14 ರಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸಿನಿಮಾಗಳಿಗೆ ಆರ್ಥಿಕ ನೆರವು ನೀಡುವ ಬಗೆಗೆ ನೀತಿ ಸಂಹಿತೆ ಪ್ರಕಟಿಸಿದೆ ಎಂದು ಸಿನ್ಹಾ ಹೇಳಿದರು.

(ಯುಎನ್‌ಐ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada