»   » ಯಾರಾಗ್ತಾರೆ ಕನ್ನಡದ 'ದಬಾಂಗ್' ಹೀರೋ?

ಯಾರಾಗ್ತಾರೆ ಕನ್ನಡದ 'ದಬಾಂಗ್' ಹೀರೋ?

Posted By:
Subscribe to Filmibeat Kannada

ಬಾಲಿವುಡ್ ನ ಸೂಪರ್ ಡ್ಯೂಪರ್ ಹಿಟ್ ಸಿನಿಮಾ 'ದಬಾಂಗ್' ರೀಮೇಕ್ 'ಕನ್ವರ್ ಲಾಲ್'ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸುತ್ತಾರೆ ಅಂತ ಸುದ್ದಿಯಾಗಿತ್ತು. ಚಿತ್ರಕ್ಕೆ ಗಣಿ ಫೇವರಿಟ್ ನಿರ್ದೇಶಕ ಎಂ.ಡಿ.ಶ್ರೀಧರ್ ಆಕ್ಷನ್ ಕಟ್ ಹೇಳಬೇಕಿತ್ತು.

ಆಷ್ಟರಲ್ಲಿ, ಅನಿವಾರ್ಯ ಕಾರಣಗಳಿಂದ ನಿರ್ದೇಶಕ ಎಂ.ಡಿ.ಶ್ರೀಧರ್, ಪ್ರಾಜೆಕ್ಟ್ ನಿಂದ ಹಿಂದೆ ಸರಿದರು. ಇದರ ಬೆನ್ನಲ್ಲೇ ಗೋಲ್ಡನ್ ಸ್ಟಾರ್ ಕೂಡ 'ಕನ್ವರ್ ಲಾಲ್' ಆಗುವುದಕ್ಕೆ ಸಾಧ್ಯ ಇಲ್ಲ ಅಂದರು. ಅರ್ಧಕರ್ಧ ದುಡ್ಡು ಸುರಿದು ನಿರ್ಮಾಪಕ ದಿನೇಶ್ ಗಾಂಧಿ ಕೈ ಸುಟ್ಟುಕೊಂಡಿದ್ದರು. ಅಲ್ಲಿಗೆ, 'ಕನ್ವರ್ ಲಾಲ್' ಕಥೆ ಫಿನಿಶ್ ಅಂದುಕೊಂಡವರಿಗೆ ಈಗ ಗಾಂಧಿನಗರದಿಂದ ಹೊಸ ಸುದ್ದಿ ಬ್ರೇಕ್ ಆಗಿದೆ. [ಗಣಿ ವಿರುದ್ದ ದಿನೇಶ್ ಗಾಂಧಿ ನೀಡಿರುವ ದೂರಿನಲ್ಲೇನಿದೆ?]

Financier Krishna Devegowda to produce 'Dabbang' remake in Kannada

'ಕನ್ವರ್ ಲಾಲ್' ಚಿತ್ರಕ್ಕೆ ಫೈನಾನ್ಶಿಯರ್ ಆಗಿದ್ದ ಕೃಷ್ಣ ದೇವೇಗೌಡ, ಈಗ 'ದಬಾಂಗ್' ರೀಮೇಕ್ ಪ್ರಾಜೆಕ್ಟ್ ಗೆ ಮರುಜೀವ ನೀಡಿದ್ದಾರೆ. 'ಕನ್ವರ್ ಲಾಲ್' ಟೈಟಲ್ ಬಳಸಿಕೊಳ್ಳದೇ, 'ಪ್ರೊಡಕ್ಷನ್ ನಂಬರ್-2' ಅನ್ನುವ ಪೋಸ್ಟರ್ಸ್ ಹೊರಬಿಟ್ಟಿದ್ದಾರೆ ಕೃಷ್ಣ ದೇವೇಗೌಡ. [ಗೋಲ್ಡನ್ ಸ್ಟಾರ್ ಗಣೇಶ್ 'ಕನ್ವರ್ ಲಾಲ್' ಕನಸು ಭಗ್ನ]

ಹೊಚ್ಚ ಹೊಸ ತಂಡ ಕಟ್ಟಿ ಕನ್ನಡದಲ್ಲಿ 'ದಬಾಂಗ್' ಮಾಡಬೇಕೆನ್ನುವ ಆಸೆ ಕೃಷ್ಣ ದೇವೇಗೌಡರದ್ದು. ಹೊಸ ಹೀರೋ ಹುಡುಕಾಟದಲ್ಲಿರುವ ಕೃಷ್ಣ ದೇವೇಗೌಡ ಸದ್ಯದಲ್ಲೇ ಚಿತ್ರದ ತಾರಾಬಳಗವನ್ನ ಫೈನಲೈಸ್ ಮಾಡಲಿದ್ದಾರೆ. (ಏಜೆನ್ಸೀಸ್)

English summary
Producer Dinesh Gandhi had shelved 'Kanvarlal' which is the remake of Bollywood movie 'Dabbang'. Now, the financier of 'Kanvarlal', Krishna Devegowda has come forward to produce 'Dabbang' remake in Kannada, which is tentatively titled 'Production-2'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada