ಆರ್ಯನ್ ಖಾನ್ ಮಿಡಲ್ ಫಿಂಗರ್ ವಿವಾದ, ನೀವು ಅಂದ್ಕೊಂಡಿದ್ದು ನಿಜಾ ಅಲ್ಲ- ಝೈದ್ ಖಾನ್
ಸಾಮಾಜಿಕ ಜಾಲತಾಣ ತುಂಬಾನೇ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನು ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇಲ್ಲಿ ಒಳ್ಳೆಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಇಂಥಾ ಸಾಮಾಜಿಕ ಜಾಲತಾಣದ ಮೂಲಕ ಯಾರ ಅದೃಷ್ಟ ಬೇಕಾದರು ಕೂಡ ಕ್ಷಣಾರ್ಧದಲ್ಲಿ ಖುಲಾಯಿಸಬಹುದು. ಇನ್ನೂ ಗ್ರಹಚಾರ ಕೆಟ್ಟಾಗ ಕಷ್ಟ ಹೇಳೋಣ ಅಂದರೆ ಮನೆ ದೇವರು ಕೂಡ ಕಿವುಡನಂತೆ ನಾಟಕ ಮಾಡ್ತಾನೆ ಎನ್ನುವ ಮಾತು ಇದೆ.
ಈ ಮಾತು ಇದೇ ಸೋಶಿಯಲ್ ಮೀಡಿಯಾ ಮೂಲಕ ಕೆಲ ಒಮ್ಮೆ ಕೆಲವರ ವಿಚಾರದಲ್ಲಿ ನಿಜಾ ಆಗಬಹುದು. ಬದುಕು ಬರ್ಬಾದ್ ಕೂಡ ಆಗಬಹುದು. ಅದರಲ್ಲಿಯೂ ಚಿತ್ರರಂಗದವರ ಪಾಲಿಗೆ ಈ ಸೋಶಿಯಲ್ ಮೀಡಿಯಾ ಮಗ್ಗಲ ಮುಳ್ಳು.

ಸೆಲೆಬ್ರೇಟಿಗಳ ಪ್ರತಿಯೊಂದು ಚಲನ ವಲನ ಈ ಸೋಶಿಯಲ್ ಮೀಡಿಯಾ ಮೂಲಕ ಜಗಜ್ಜಾಹೀರು ಆಗುತ್ತಿರುತ್ತೆ. ಬಹುದೊಡ್ಡ ವರ್ಗ ಇವರನ್ನು ಕೇವಲ ಹೋದಲ್ಲಿ.. ಬಂದಲ್ಲಿ ಹಿಂಬಾಲಿಸುವುದಲ್ಲದೇ ಸೋಶಿಯಲ್ ಮೀಡಿಯಾ ಮೂಲಕ ಕೂಡ ಹಿಂಬಾಲಿಸುತ್ತೆ. ಚೂರು ಯಾಮಾರಿದರೆ ಸಾಕು. ವಿವಾದ ಶುರುವಾಗುತ್ತೆ. ನೋಡ ನೋಡುತ್ತಾ ಭುಗಿಲೇಳುತ್ತೆ. ಆಗ ಇದೇ ಸಾಮಾಜಿಕ ಜಾಲತಾಣ ನ್ಯಾಯಾಲಯದಂತೆ ಕಾರ್ಯ ನಿರ್ವಹಿಸುತ್ತೆ. ಇದಕ್ಕೆ ಜ್ವಲಂತ ಉದಾಹರಣೆ ಆರ್ಯನ್ ಖಾನ್ ಪ್ರಕರಣ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಶಾರುಖ್ ಖಾನ್ ಮುದ್ದಿನ ಮಗ ಆರ್ಯನ್ ಖಾನ್ ಬೆಂಗಳೂರಿಗೆ ಬಂದು ಹೋದ ಮೇಲೆ ವಿವಾದ ಭುಗಿಲೆದ್ದಿದೆ. ತನ್ನನ್ನೂ ನೋಡಲು ಪ್ರೀತಿಯಿಂದ ಬಂದ ಜನರಿಗೆ ಆರ್ಯನ್ ಖಾನ್ ಮಧ್ಯದ ಬೆರಳು ತೋರಿಸಿದ್ದಾರೆ ಎನ್ನುವ ಆರೋಪವನ್ನು ಇವರ ಮೇಲೆ ಮಾಡಲಾಗಿದೆ. ದುರಂಹಕಾರಿ ಆರ್ಯನ್ ಖಾನ್ ದುರ್ವತನೆ ತೋರಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ವಿಡಿಯೋ ವೈರಲ್ ಆಗಿದೆ. ಇದಲ್ಲದೇ ಆರ್ಯನ್ ಖಾನ್ ವಿರುದ್ಧ ದೂರು ಕೂಡ ದಾಖಲಾಗಿದೆ.
ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಅವರ ಆಪ್ತ ಸ್ನೇಹಿತ ರಾಜಕಾರಣಿ ಜಮೀರ್ ಅಹ್ಮದ್ ಮಗ ಮತ್ತು ನಟ ಝೈದ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ನೀವೆಲ್ಲ ತಪ್ಪು ತಿಳಿದುಕೊಂಡಿದ್ದೀರಾ ಎಂದು ಹೇಳಿದ್ದಾರೆ.
ಈ ಕುರಿತು ಹೊಸಪೇಟೆಯಲ್ಲಿ ಸಮಜಾಯಿಷಿ ನೀಡಿರುವ ಝೈದ್ ಖಾನ್ ಆರ್ಯನ್ ಖಾನ್ ನನಗೆ ಹಲವು ವರ್ಷಗಳಿಂದ ಗೊತ್ತು. ನಾವು ಇಬ್ಬರು ಒಂದೇ ಕಡೆ ಅಭಿನಯದ ತರಬೇತಿಯನ್ನು ಪಡೆದವರು ಎಂದು ಹೇಳಿದ್ದಾರೆ. ಮೊನ್ನೆ ಅವನು ಬೆಂಗಳೂರಿಗೆ ಬರುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದ. ಈ ಹಿನ್ನೆಲೆ ನಾವು ಒಂದು ಓಪನಿಂಗ್ ಸೆರಮನಿಗೆ ಹೋಗಿದ್ದೆವು ಎಂದು ಹೇಳಿರುವ ಝೈದ್ ಖಾನ್ ಅಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಹೆಚ್ಚಿನ ಜನ ಬಂದು ಸೇರಿದ್ದರು ಎಂದು ಹೇಳಿದ್ದಾರೆ. ಅಷ್ಟೊಂದು ಜನರನ್ನು ನೋಡಿದ ಆರ್ಯನ್ ನನ್ನಿಂದ ಸಾಧ್ಯ ಇಲ್ಲ ಎಂದು ಹೇಳಿದ ಎಂದಿದ್ದಾರೆ.

ಇನ್ನು ಆರ್ಯನ್ ಖಾನ್ ಮ್ಯಾನೇಜರ್ ಬೇರೆ ಯಾರು ಅಲ್ಲ ಬದಲಿಗೆ ಅವನ ಗೆಳೆಯನೇ. ಆ ಸಮಯದಲ್ಲಿ ಅವನ ಗೆಳೆಯ ನಾನು ಜನರನ್ನು ಇಲ್ಲಿಂದ ಚದುರಿಸುತ್ತೇನೆ ಎಂದು ಹೋದ ಎಂದು ಹೇಳಿರುವ ಝೈದ್ ಖಾನ್ ಹೀಗೆ ಹೋದವನು ತುಂಬಾ ಸಮಯವಾದರು ಬರಲಿಲ್ಲ. ಹೀಗಾಗಿ ಎಲ್ಲಿ ಹೋದ ...? ಏನಾಗಿದೆ..? ಎಂದು ನೋಡಲು ನಾವು ಬಾಲ್ಕನಿಗೆ ಹೋದೆವು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಅವನ ಫ್ರೆಂಡ್ ಕಂ ಮ್ಯಾನೇಜರ್ ಅಲ್ಲಿ ಕಾಣಿಸಿದ ಹೀಗಾಗಿ ಆರ್ಯನ್ ಬೆರಳನ್ನು ಅವನಿಗೆ ತೋರಿಸಿದ ಹೊರತು ಅದು ಜನರಿಗೆ ತೋರಿಸಿದ್ದಲ್ಲ ಎಂದು ಕೂಡ ಹೇಳಿದ್ದಾರೆ. ಜನರಿಗೆ ಹಾಗೇ ಯಾರಾದರೂ ಕೈ ತೋರಿಸಿದರೆ ಖಂಡಿತ ಆರ್ಯನ್ ಕೂಡ ಸುಮ್ಮನೆ ಇರುವುದಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications











