For Quick Alerts
  ALLOW NOTIFICATIONS  
  For Daily Alerts

  ಅನುಪಮ್ ಖೇರ್ ಸೇರಿ 13 ಜನರ ವಿರುದ್ಧ ಎಫ್.ಐ.ಆರ್

  |

  ಅನುಪಮ್ ಖೇರ್ ಅಭಿನಯದ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರ ಇದೇ ವಾರ 11 ರಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಬಿಹಾರದ ನ್ಯಾಯಾಲಯ ಅನುಪಮ್ ಖೇರ್ ಸೇರಿದಂತೆ 13 ಜನರ ವಿರುದ್ಧ ಎಫ್.ಐ.ಆರ್ ದಾಖಲು ಮಾಡಲು ಸೂಚಿಸಿದೆ.

  'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಕುರಿತಾಗಿದ್ದು, ಈ ಚಿತ್ರದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ರಾಜಕಾರಣಿಗಳ ಪಾತ್ರ ಇದೆ.

  ಮನಮೋಹನ್ ಸಿಂಗ್ ಚಿತ್ರದಲ್ಲಿ ಯಾರು ಯಾವ ಪಾತ್ರ ಮಾಡ್ತಿದ್ದಾರೆ.? ಮನಮೋಹನ್ ಸಿಂಗ್ ಚಿತ್ರದಲ್ಲಿ ಯಾರು ಯಾವ ಪಾತ್ರ ಮಾಡ್ತಿದ್ದಾರೆ.?

  ಸುಧೀರ್ ಓಜಾ ಎಂಬ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದು, ಈ ಚಿತ್ರದಲ್ಲಿ ರಾಜಕಾರಣಿಗಳನ್ನ ಕೀಳಾಗಿ ತೋರಿಸಲಾಗಿದೆ, ಅವರ ಗೌರಕ್ಕೆ ಧಕ್ಕೆ ತರಲಾಗಿದೆ, ಈ ಚಿತ್ರವನ್ನ ಬಿಡುಗಡೆ ಮಾಡಲು ಬಿಡಬಾರದು ಎಂದು ಮನವಿ ಸಲ್ಲಿಸಿದ್ದರು.

  ಪ್ರಿಯಾಂಕಾ ಗಾಂಧಿ ಪಾತ್ರ ಮಾಡಲಿರುವ ಈ ನಟಿ ಯಾರು.? ಪ್ರಿಯಾಂಕಾ ಗಾಂಧಿ ಪಾತ್ರ ಮಾಡಲಿರುವ ಈ ನಟಿ ಯಾರು.?

  ಈ ಅರ್ಜಿ ವಿಚಾರಣೆ ನಡೆಸಿದ ಬಿಹಾರ್ ನ್ಯಾಯಾಲಯ ಎಫ್.ಐ.ಆರ್ ದಾಖಲಿಸಿ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದೆ. ಆದ್ರೆ, ಚಿತ್ರದ ಬಿಡುಗಡೆಗೆ ಇದು ತೊಂದರೆಯಾಗುವುದಿಲ್ಲ ಎನ್ನಲಾಗಿದೆ.

  ಅಂದ್ಹಾಗೆ, ಮನಮೋಹನ್ ಸಿಂಗ್ ಅವರ ಆಡಳಿತಾವಧಿ 2004-2008ರ ವರೆಗೂ ಮಾಧ್ಯಮ ಸಲಹಗಾರರಾಗಿದ್ದ ಸಂಜಯ್ ಬರು ಅವರು ಬರೆದಿರುವ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಪುಸ್ತಕದ ಪ್ರತಿರೂಪವಾಗಿ ಈ ಸಿನಿಮಾ ಸಿದ್ಧವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಹನ್ಸಲ್ ಮೆಹ್ತಾ ಚಿತ್ರಕಥೆ ಬರೆದಿದ್ದು, ವಿಜಯ ರತ್ನಾಕರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

  English summary
  Bihar Court Orders FIR Against Anupam Kher and 13 Others For The Accidental Prime Minister Legal trouble doesn't seem to stop for Anupam Kher's upcoming film The Accidental Prime Minister.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X