ಅವಹೇಳನಕಾರಿ ಪೋಸ್ಟ್: ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‌ಐಆರ್

ಮಾಜಿ ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿದ್ದಕ್ಕೆ ದೂರು ದಾಖಲಿಸಲಾಗಿದೆ.

ಸ್ವಯಂ ಘೋಷಿತ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಡಿಕೆ ಶಿವಕುಮಾರ್ ವಿರುದ್ಧ ಹಲವು ಅವಹೇಳನಕಾರಿ ಪೋಸ್ಟ್ ಹಾಕಿರುವ ಜೊತೆಗೆ ಕೋಮುದ್ವೇಷ ಹರಡುವ ಪೋಸ್ಟ್‌ಗಳನ್ನು ಸಹ ಇತ್ತೀಚಿನ ಕೆಲವು ದಿನಗಳಲ್ಲಿ ಹಂಚಿಕೊಂಡಿದ್ದಾರೆ. ಇದರ ವಿರುದ್ಧವೂ ನಾರಾಯಣ್ ಎಂಬುವರು ಬೆಂಗಳೂರು ದಕ್ಷಿಣ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತಾಂತರ ನಿಷೇಧ ಕಾಯ್ದೆಯ ಕರಡನ್ನು ವಿಧಾನಸಭೆಯಲ್ಲಿ ಹರಿದು ಹಾಕಿ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸಿದ್ದರು. ಇದರ ವಿರುದ್ಧ ಸತತವಾಗಿ ಪ್ರಶಾಂತ್ ಸಂಬರ್ಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕುತ್ತಲೇ ಇದ್ದರು.

FIR Agianst Prashanth Sambargi For Derogatory Social Media Post Against DK Shivakumar
ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ ಬಹಳ ಹಳೆಯ ಚಿತ್ರವನ್ನು ಹಂಚಿಕೊಂಡಿರುವ ಪ್ರಶಾಂತ್ ಸಂಬರ್ಗಿ, ''ಇವರು ಒರಿಜಿನಲ್ ಡಕಾಯಿತರಲ್ಲ, ಇವರು ಡಿಕೆ ಸಹೋದರರು'' ಎಂದು ವ್ಯಂಗ್ಯದ ಪೋಸ್ಟ್ ಹಾಕಿದ್ದರು. ಅದು ಮಾತ್ರವೇ ಅಲ್ಲದೆ, ಡಿ.ಕೆ.ಶಿವಕುಮಾರ್ ಚಿತ್ರವನ್ನು ಏಸು ಕ್ರಿಸ್ತನ ಮಾದರಿಯಲ್ಲಿ ಚಿತ್ರಿಸಲಾಗಿರುವ ಪೋಸ್ಟ್ ಒಂದನ್ನು ಹಂಚಿಕೊಂಡು 'ಕಪಾಲಿ ಗುಡ್ಡದ ಜೀಸಸ್' ಎಂದು ಬರೆದುಕೊಂಡಿದ್ದರು.

ಕಾವೇರಿ ಉಗಮ ಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಪೂಜೆ ಸಲ್ಲಿಸಿದ ವಿಡಿಯೋ ಹಂಚಿಕೊಂಡಿದ್ದ ಪ್ರಶಾಂತ್ ಸಂಬರ್ಗಿ, ''ಇದು ಎಂತಹ ನಾಟಕ ಕುಂಡಿಕೆಯ ಹತ್ತಿರಕ್ಕೂ ಸುಳಿಯಲಿಲ್ಲ, ಕಲ್ಯಾಣಿಗೆ ಇಳಿದು ಸ್ನಾನವು ಮಾಡಲಿಲ್ಲ ಎಲ್ವನ್ನೂ ಬಿಟ್ಟು ಕ್ಯಾಮರದ ಕಣ್ಣಿಗೆ ಪೋಸ್ ಕೊಡವ ಸಲುವಾಗಿ ದೇವರಿಗೆ ಬೆನ್ನು ಹಾಕಿ ನಮಸ್ಕರಿಸುತ್ತಿರುವ ಡಿ ಕೆ ಶಿವಕುಮಾರ್. ದೇವರಿಗೆ ಅವಮಾನ ಮಾಡಿರುವುದನ್ನು ಕೊಡಗಿನ ಜನತೆ ಸಹಿಸಲಾರರು'' ಎಂದಿದ್ದರು.

ಕ್ರಿಸ್‌ಮಸ್ ಹಬ್ಬದ ಬಗ್ಗೆಯೂ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪ್ರಶಾಂತ್ ಸಂಬರ್ಗಿ, ''ಎಚ್ಚರಿಕೆ.. ಹುಚ್ಚು ಜನರ ಹಬ್ಬ ಬರುತ್ತಿದೆ'' ಎಂದು ಬರೆದು ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಇದರ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಮೊದಲು ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಪ್ರಶಾಂತ್ ಸಂಬರ್ಗಿಯ ಸಹಸ್ಪರ್ಧಿ ಆಗಿದ್ದ ಚಕ್ರವರ್ತಿ ಚಂದ್ರಚೂಡ್ ಅವರೇ ಪ್ರಶಾಂತ್ ಸಂಬರ್ಗಿ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಹಾಗೂ ಸೈಬರ್ ಪೊಲೀಸರಿಗೆ ಪ್ರಶಾಂತ್ ಸಂಬರ್ಗಿಯ ಅವಹೇಳನಕಾರಿ ಸಾಮಾಜಿಕ ಜಾಲತಾಣ ಪೋಸ್ಟ್‌ಗಳ ವಿರುದ್ಧ ದೂರು ನೀಡಿದ್ದರು.

More from Filmibeat

English summary
FIR against former Bigg Boss contestant Prashanth Sambargi for derogatory social media post against DK Shivakumar and his brother.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X