For Quick Alerts
  ALLOW NOTIFICATIONS  
  For Daily Alerts

  ಚೆಕ್ ಬೌನ್ಸ್ ಕೇಸ್; ಮಯೂರ್ ಪಟೇಲ್ ವಿರುದ್ಧ ಎಫ್.ಐ.ಆರ್

  By Harshitha
  |

  ನಟ ಮಯೂರ್ ಪಟೇಲ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಬರೋಬ್ಬರಿ 5 ಲಕ್ಷ ರೂಪಾಯಿ ಪಡೆದು ಅದನ್ನ ವಾಪಸ್ ನೀಡದೆ ವಂಚನೆ ಮಾಡಿರುವ ಆರೋಪ ನಟ ಮಯೂರ್ ಪಟೇಲ್ ವಿರುದ್ಧ ಕೇಳಿಬಂದಿದೆ.

  ದೊಡ್ಡಬಳ್ಳಾಪುರ ನಿವಾಸಿ ಸೆಲ್ವಕುಮಾರ್ ರಿಂದ ಮಯೂರ್ ಪಟೇಲ್ 5 ಲಕ್ಷ ರೂಪಾಯಿ ಸಾಲ ಪಡೆದು ಚೆಕ್ ನೀಡಿದ್ದರು. ಫೆಬ್ರವರಿ 15 ರಂದು ಚೆಕ್ ಬೌನ್ಸ್ ಆಗಿದೆ. ಈ ಬಗ್ಗೆ ಮಯೂರ್ ಪಟೇಲ್ ಗೆ ಸೂಚನೆ ನೀಡಿದ್ದರೂ, ಕ್ಯಾರೆ ಅನ್ನದ ಕಾರಣ ಸೆಲ್ವಕುಮಾರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

  ಮೇ 13 ರಂದೇ ಸೆಲ್ವಕುಮಾರ್ ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೈಪ್ರೋಫೈಲ್ ಎಫ್.ಐ.ಆರ್ ಮತ್ತು ಚೀಟಿಂಗ್ ಕೇಸ್ ಆದ್ದರಿಂದ ಪ್ರಕರಣ ಕೊಂಚ ತಡವಾಗಿ ಬೆಳಕಿಗೆ ಬಂದಿದೆ. [ಹಿಂಗ್ಯಾಕಾತು ಯಾಕಿಂಗಾತು ಮಯೂರ್ ಪಟೇಲ್ರೇ?]

  ರಾಜಕಾರಣಿ, ನಟ ಕಮ್ ನಿರ್ಮಾಪಕ ಮದನ್ ಪಟೇಲ್ ಪುತ್ರ ಮಯೂರ್ ಪಟೇಲ್. 'ಮಣಿ', 'ಗುನ್ನ', 'ಉಡೀಸ್', 'ಮುನಿಯಾ' ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ಮಯೂರ್ ಪಟೇಲ್ ಅಭಿನಯಿಸಿದ್ದಾರೆ.

  English summary
  FIR and Cheating case is charged against Kannada Actor Mayur Patel of 'Mani' fame based on the complaint lodged by Selva kumar in Doddaballapura Police Station.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X