ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಮೇಲೆ ಎಫ್.ಐ.ಆರ್ ದಾಖಲು.!

By Harshitha

Recommended Video

ಸಂಕಷ್ಟಕ್ಕೆ ಸಿಲುಕಿದ ದುನಿಯಾ ವಿಜಯ್ ಅಲಿಯಾಸ್ ಬ್ಲಾಕ್ ಕೋಬ್ರಾ | FIlmibeat Kannada

ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಗೆ ಹೊಸ ಸಂಕಷ್ಟ ಎದುರಾಗಿದೆ. 'ಕರಿ ಚಿರತೆ' ದುನಿಯಾ ವಿಜಯ್ ಮೇಲೆ ಎಫ್.ಐ.ಆರ್ ದಾಖಲಾಗಿದೆ.

'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ 'ದು'ಸ್ಸಾಹಸ ಮಾಡಲು ಹೋಗಿ ಖಳ ನಟರಾದ ಅನಿಲ್ ಮತ್ತು ಉದಯ್ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಿರ್ಮಾಪಕ ಸುಂದರ್.ಪಿ.ಗೌಡ ಮೇಲೆ ರಾಮನಗರ ಜೆ.ಎಂ.ಎಫ್.ಸಿ ಕೋರ್ಟ್ ನಿಂದ ವಾರೆಂಟ್ ಜಾರಿ ಆಗಿತ್ತು.

ರಾಮನಗರದ ಜೆ.ಎಂ.ಎಫ್.ಸಿ ಕೋರ್ಟ್ ನಿಂದ ತೀರ್ಪು ಹೊರಬೀಳುತ್ತಿದ್ದಂತೆಯೇ, ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ನಿರ್ಮಾಪಕ ಸುಂದರ್.ಪಿ.ಗೌಡ ರವರನ್ನು ಬಂಧಿಸಲು ನಿನ್ನೆ (ಬುಧವಾರ) ರಾತ್ರಿ ಮುಂದಾದರು.

 FIR filed against Kannada Actor Duniya Vijay

ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಸುಂದರ್.ಪಿ.ಗೌಡ ಮನೆಗೆ ನಿನ್ನೆ ರಾತ್ರಿ ತಾವರೆಕೆರೆ ಪೊಲೀಸರು ಹಾಜರ್ ಆದರು. ಇದೇ ವೇಳೆ ಎಂಟ್ರಿ ಕೊಟ್ಟ ದುನಿಯಾ ವಿಜಯ್, ಸುಂದರ್.ಪಿ.ಗೌಡ ರವರನ್ನು ಬಂಧಿಸದಂತೆ ಪೊಲೀಸರನ್ನು ತಡೆದರು. ಈ ಗ್ಯಾಪ್ ನಲ್ಲಿ ನಿರ್ಮಾಪಕ ಸುಂದರ್.ಪಿ.ಗೌಡ ಎಸ್ಕೇಪ್ ಆದರು.

ತಾವರೆಕೆರೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಗೋವಿಂದ ರಾಜು, ದುನಿಯಾ ವಿಜಯ್ ವಿರುದ್ಧ ದೂರು ನೀಡಿದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಐ.ಪಿ.ಸಿ ಸೆಕ್ಷನ್ 363 ಅನ್ವಯ ನಟ ದುನಿಯಾ ವಿಜಯ್ ಮೇಲೆ ಸದ್ಯ ಎಫ್.ಐ.ಆರ್ ದಾಖಲಾಗಿದೆ.

ಪೊಲೀಸರನ್ನ ದುನಿಯಾ ವಿಜಯ್ ತಡೆದಿದ್ದು ಯಾಕೆ.?

ಸುಂದರ್.ಪಿ.ಗೌಡ ರವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ, ಸುಂದರ್.ಪಿ.ಗೌಡ ರನ್ನ ನಾಳೆ ತಾವೇ ಪೊಲೀಸ್ ಸ್ಟೇಷನ್ ಗೆ ಕರೆದು ತರುವುದಾಗಿ ಪೊಲೀಸರ ಬಳಿ ದುನಿಯಾ ವಿಜಯ್ ಕೇಳಿಕೊಂಡರಂತೆ. ಆದ್ರೆ, ಅಷ್ಟರಲ್ಲಿ ಸುಂದರ್.ಪಿ.ಗೌಡ ಪರಾರಿ ಆಗಿರುವುದು ದುನಿಯಾ ವಿಜಯ್ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

More from Filmibeat

English summary
FIR filed against Kannada Actor Duniya Vijay as per the complaint lodged by Tavarekere Head Constable Govinda Raju.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X