'ಅಯೋಗ್ಯ' ನಟಿ ವಿರುದ್ಧ FIR ದಾಖಲು: ಸುಪಾರಿ ಕೊಟ್ಟು ಎಸ್ಕೇಪ್ ಆದ ನಟಿ?
ನಿರ್ದೇಶಕ ಮಹೇಶ್ ಸಾರಥ್ಯದಲ್ಲಿ ಮೂಡಿಬಂದ 'ಅಯೋಗ್ಯ' ಸಿನಿಮಾದ ಸಹ ನಟಿ ವಿರುದ್ಧ ಕೊಲೆಯತ್ನ ಆರೋಪ ಕೇಳಿಬಂದಿದೆ. ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕೆ ಹುಡುಗರನ್ನು ಬಿಟ್ಟು ಕೊಲೆಮಾಡಿಸುವ ಸ್ಕೆಚ್ ಹಾಕಿದ್ದರು ಎನ್ನುವ ಆರೋಪ ಕೇಳಿಬರುತ್ತಿದೆ.
ಅಯೋಗ್ಯ ಚಿತ್ರದಲ್ಲಿ ಎರಡನೆ ನಟಿಯಾಗಿ ಕಾಣಿಸಿಕೊಂಡಿದ್ದ ನಟಿ ದೃಶ್ಯ, ಉದ್ಯಮಿ ರಾಜೇಶ್ ಎಂಬುವವರನ್ನು ಕೊಲ್ಲಲು ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ರಾಜೇಶ್ ದೃಶ್ಯಾಗೆ ಹಣ ನೀಡಿದ್ದರಂತೆ. ಕೊಟ್ಟ ಹಣವನ್ನು ವಾಪಸ್ ಕೇಳಲು ದೃಶ್ಯ ಮನೆ ಬಳಿ ಹೋದ ರಾಜೇಶ್ ಗೆ ಹುಡುಗರನ್ನು ಬಿಟ್ಟು ಅಟ್ಯಾಕ್ ಮಾಡಿಸಿ, ಕೊಲೆ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.
ರಾಜೇಶ್ ಮೇಲೆ ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ದಾಖಲಾಗಿದೆ. 'ದೃಶ್ಯ ಬಳಿ ಹಣ ಕೇಳುತ್ತೀಯಾ' ಎಂದು ಹಲ್ಲೆ ಮಾಡುವವರು ಕೂಗಾಡುತ್ತಿದ್ದರಂತೆ. ಸದ್ಯ ರಾಜೇಶ್ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ದೃಶ್ಯ ಮತ್ತು ಆಕೆಯ ತಂದೆಯ ವಿರುದ್ಧ ಕೆ.ಆರ್ ಎಸ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ದೃಶ್ಯ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಕೂಡ ದೃಶ್ಯ ವಿರುದ್ಧ ಬ್ಲಾಕ್ ಮೇಲ್ ಆರೋಪ ಕೇಳಿ ಬಂದಿತ್ತು. ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ ಆರೋಪ ಇತ್ತು. ಈಗ ಮತ್ತೆ ದೃಶ್ಯ ಕೊಲೆ ಯತ್ನ ಆರೋಪಿಯಾಗಿ ಸದ್ದು ಮಾಡುತ್ತಿದ್ದಾರೆ.


Click it and Unblock the Notifications











