Just In
Don't Miss!
- News
ಹಕ್ಕಿ ಜ್ವರ; ಜ.26ರವರೆಗೂ ಕೆಂಪು ಕೋಟೆಗೆ ಪ್ರವೇಶ ನಿರ್ಬಂಧ
- Sports
ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಹೋಮ್ ಫಸ್ಟ್ ಫೈನಾನ್ಸ್ ಕಂಪೆನಿ ಐಪಿಒ ಜ. 21ರಿಂದ 25
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Lifestyle
ಕೋವಿಡ್ ವ್ಯಾಕ್ಸಿನೇಷನ್ ಗೆ ಅನುಸರಿಸಬೇಕಾದ ನಿಯಮಗಳು ಇಲ್ಲಿವೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್‌ಐಆರ್ ದಾಖಲು
ಖ್ಯಾತ ಸಿನಿಮಾ ನಿರ್ಮಾಪಕ ಕೆ.ಮಂಜು ವಿರುದ್ಧ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.
'ಹೆಬ್ಬೆಟ್ ರಾಮಕ್ಕ' ಸಿನಿಮಾದ ನಿರ್ಮಾಪಕ ಪುಟ್ಟರಾಜು ಅವರು ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಕೆ.ಮಂಜು ವಿರುದ್ಧ ದೂರು ದಾಖಲಿಸಿದ್ದಾರೆ.
ಕೆ.ಮಂಜು ಮಾತ್ರವಲ್ಲದೆ ಹೊಸಕೋಟೆಯ ರಾಜಗೋಪಾಲ್, ರಮೇಶ್ ಬಾಬು, ವಿಜಯಲಕ್ಷ್ಮಿ ಎಂಬುವರ ವಿರುದ್ಧವೂ ಪುಟ್ಟರಾಜು ಪ್ರಕರಣ ದಾಖಲಿಸಿದ್ದಾರೆ. ಇಬ್ಬರ ವಿರುದ್ಧವೂ ಐಪಿಸಿ ಸೆಕ್ಷನ್ 420, 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಕೆ.ಮಂಜು ಎರಡನೇ ಆರೋಪಿ ಆಗಿದ್ದಾರೆ.
2018 ರಲ್ಲಿ ಆರೋಪಿತ ರಾಜಗೋಪಾಲ್ ತಮ್ಮ ಮಾರಾಟ ಮಾಡಿದ್ದರು. ಆಗ ಪುಟ್ಟರಾಜು ಅವರು ರಾಜಗೋಪಾಲ್ ಗೆ ಮುಂಗಡ ಹಣ ಪಾವತಿಸಿದ್ದರು. ನಂತರ ಅದೇ ಜಮೀನನ್ನು ಕೆ.ಮಂಜು ರಿಜಿಸ್ಟರ್ ಮಾಡಿಕೊಂಡಿದ್ದಾರೆ, ತಾವು ರಾಜಗೋಪಾಲ್‌ಗೆ 68 ಲಕ್ಷ, ಕೆ.ಮಂಜು ಅವರಿಗೆ 1.10 ಕೋಟಿ ರೂಪಾಯಿ ಪಾವತಿಸಿರುವುದಾಗಿ ಆರೋಪ ಮಾಡಿದ್ದಾರೆ ಪುಟ್ಟರಾಜು.
'ಕೆ.ಮಂಜು ಸಿನಿಮಾಸ್' ಮತ್ತು ಲಕ್ಷ್ಮಿಶ್ರೀ ಹೆಸರಿನ ಸಿನಿಮಾ ಪ್ರೊಡಕ್ಷನ್ ಹೌಸ್‌ಗಳನ್ನು ಕೆ.ಮಂಜು ಹೊಂದಿದ್ದು. 1996 ರಿಂದಲೂ ಸಿನಿಮಾ ನಿರ್ಮಾಣ ಉದ್ಯಮದಲ್ಲಿ ತೊಡಗಿದ್ದಾರೆ. 2017 ರಲ್ಲಿ ಬಿಡುಗಡೆಯಾದ 'ಸತ್ಯ ಹರಿಶ್ಚಂದ್ರ' ಸಿನಿಮಾ ಬಳಿಕ ಹೊಸ ಸಿನಿಮಾವನ್ನು ಕೆ.ಮಂಜು ನಿರ್ಮಿಸಿಲ್ಲ.