For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್‌ಐಆರ್ ದಾಖಲು

  |

  ಖ್ಯಾತ ಸಿನಿಮಾ ನಿರ್ಮಾಪಕ ಕೆ.ಮಂಜು ವಿರುದ್ಧ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.

  KManju ವಿರುದ್ಧ ದಾಖಲಾಯ್ತು ವಂಚನೆ ಪ್ರಕರಣ | Filmibeat Kannada

  'ಹೆಬ್ಬೆಟ್ ರಾಮಕ್ಕ' ಸಿನಿಮಾದ ನಿರ್ಮಾಪಕ ಪುಟ್ಟರಾಜು ಅವರು ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಕೆ.ಮಂಜು ವಿರುದ್ಧ ದೂರು ದಾಖಲಿಸಿದ್ದಾರೆ.

  ಕೆ.ಮಂಜು ಮಾತ್ರವಲ್ಲದೆ ಹೊಸಕೋಟೆಯ ರಾಜಗೋಪಾಲ್, ರಮೇಶ್ ಬಾಬು, ವಿಜಯಲಕ್ಷ್ಮಿ ಎಂಬುವರ ವಿರುದ್ಧವೂ ಪುಟ್ಟರಾಜು ಪ್ರಕರಣ ದಾಖಲಿಸಿದ್ದಾರೆ. ಇಬ್ಬರ ವಿರುದ್ಧವೂ ಐಪಿಸಿ ಸೆಕ್ಷನ್ 420, 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಕೆ.ಮಂಜು ಎರಡನೇ ಆರೋಪಿ ಆಗಿದ್ದಾರೆ.

  2018 ರಲ್ಲಿ ಆರೋಪಿತ ರಾಜಗೋಪಾಲ್ ತಮ್ಮ ಮಾರಾಟ ಮಾಡಿದ್ದರು. ಆಗ ಪುಟ್ಟರಾಜು ಅವರು ರಾಜಗೋಪಾಲ್‌ ಗೆ ಮುಂಗಡ ಹಣ ಪಾವತಿಸಿದ್ದರು. ನಂತರ ಅದೇ ಜಮೀನನ್ನು ಕೆ.ಮಂಜು ರಿಜಿಸ್ಟರ್ ಮಾಡಿಕೊಂಡಿದ್ದಾರೆ, ತಾವು ರಾಜಗೋಪಾಲ್‌ಗೆ 68 ಲಕ್ಷ, ಕೆ.ಮಂಜು ಅವರಿಗೆ 1.10 ಕೋಟಿ ರೂಪಾಯಿ ಪಾವತಿಸಿರುವುದಾಗಿ ಆರೋಪ ಮಾಡಿದ್ದಾರೆ ಪುಟ್ಟರಾಜು.

  'ಕೆ.ಮಂಜು ಸಿನಿಮಾಸ್' ಮತ್ತು ಲಕ್ಷ್ಮಿಶ್ರೀ ಹೆಸರಿನ ಸಿನಿಮಾ ಪ್ರೊಡಕ್ಷನ್ ಹೌಸ್‌ಗಳನ್ನು ಕೆ.ಮಂಜು ಹೊಂದಿದ್ದು. 1996 ರಿಂದಲೂ ಸಿನಿಮಾ ನಿರ್ಮಾಣ ಉದ್ಯಮದಲ್ಲಿ ತೊಡಗಿದ್ದಾರೆ. 2017 ರಲ್ಲಿ ಬಿಡುಗಡೆಯಾದ 'ಸತ್ಯ ಹರಿಶ್ಚಂದ್ರ' ಸಿನಿಮಾ ಬಳಿಕ ಹೊಸ ಸಿನಿಮಾವನ್ನು ಕೆ.ಮಂಜು ನಿರ್ಮಿಸಿಲ್ಲ.

  English summary
  Puttakkana Highway movie producer Puttaraju gave complaint against producer K Manju and others regarding money fraud case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X