For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಯ್ ಪತ್ನಿ ಸೇರಿ 11 ಮಂದಿ ವಿರುದ್ಧ ಎಫ್.ಐ.ಆರ್ ದಾಖಲು

  By Harshitha
  |

  ನಟ ದುನಿಯಾ ವಿಜಯ್ ಪತ್ನಿ ನಾಗರತ್ನ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. [ದುನಿಯಾ ವಿಜಯ್ ವಿರುದ್ಧ 'ಗೂಂಡಾಗಿರಿ' ಆರೋಪ.!?]

  ನಾಗರತ್ನ ಹಾಗೂ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿರುವುದರಿಂದ ಆನೇಕಲ್ ಪೊಲೀಸರು ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ.

  ಘಟನೆ ಹಿನ್ನಲೆ

  ಘಟನೆ ಹಿನ್ನಲೆ

  ದುನಿಯಾ ವಿಜಯ್ ಪತ್ನಿ ನಾಗರತ್ನ ಸಹೋದರ ಕೃಷ್ಣಮೂರ್ತಿಗೆ ಮೀನಾಕ್ಷಿ ಎಂಬುವರ ಜೊತೆ ವಿವಾಹವಾಗಿತ್ತು. ನಾಗರತ್ನ ಹಾಗೂ ಕುಟುಂಬಸ್ಥರು ಮೀನಾಕ್ಷಿ ರವರಿಗೆ ವರದಕ್ಷಿಣೆ ಕಿರುಕಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. [ಮೌನ ಮುರಿದ ದುನಿಯಾ ವಿಜಯ್ ಪತ್ನಿ ನಾಗರತ್ನ]

  ಆಸ್ಪತ್ರೆಯಲ್ಲಿ ದಾಖಲಾಗಿರುವ ಮೀನಾಕ್ಷಿ

  ಆಸ್ಪತ್ರೆಯಲ್ಲಿ ದಾಖಲಾಗಿರುವ ಮೀನಾಕ್ಷಿ

  ನಾಗರತ್ನ ಅವರ ತಂದೆ, ತಾಯಿ ಹಾಗೂ ಸಹೋದರಿ ಸೇರಿ ಮೀನಾಕ್ಷಿ ರವರಿಗೆ ವಿಷ ಕೊಟ್ಟು, ಕತ್ತು ಹಿಸುಕಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಗಳು ವರದಿ ಮಾಡಿದೆ. ವಿಷ ಆಹಾರ ಸೇವನೆಯಿಂದ ತೀವ್ರ ಅಸ್ವಸ್ಥರಾಗಿರುವ ಮೀನಾಕ್ಷಿ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ದುನಿಯಾ ವಿಜಿ-ನಾಗರತ್ನ ಸಂಧಾನಕ್ಕೆ 6 ಸೂತ್ರಗಳು]

  ಪ್ರಕರಣ ದಾಖಲಾಗಿದೆ

  ಪ್ರಕರಣ ದಾಖಲಾಗಿದೆ

  ಮೀನಾಕ್ಷಿ ಪೋಷಕರಿಂದ ಆನೇಕಲ್ ಪೊಲೀಸ್ ಠಾಣೆಯಲ್ಲಿ ನಾಗರತ್ನ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. [ವೈಮನಸು ಮರೆತು ಒಂದಾದ ವಿಜಯ್ - ನಾಗರತ್ನ]

  ಎಫ್.ಐ.ಆರ್ ದಾಖಲು

  ಎಫ್.ಐ.ಆರ್ ದಾಖಲು

  ಪ್ರಕರಣಕ್ಕೆ ಸಂಬಂಧಪಟ್ಟಂತೆ ದುನಿಯಾ ವಿಜಯ್ ಪತ್ನಿ ನಾಗರತ್ನ ಸೇರಿದಂತೆ ಒಟ್ಟು 11 ಮಂದಿ ಕುಟುಂಬಸ್ಥರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಇತ್ತ ಮೀನಾಕ್ಷಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

  English summary
  Anekal Police have filed FIR against Kannada Actor Duniya Vijay wife Nagaratna and 11 family members on harassing Meenakshi (wife of Krishna Murthy, Nagaratna's Brother) for Dowry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X