'ಪೊಗರು' ಚಿತ್ರೀಕರಣ ಜಾಗಕ್ಕೆ ಬೆಂಕಿ ಬಿದ್ದಿಲ್ಲ : ಚಿತ್ರತಂಡದ ಸ್ಪಷ್ಟನೆ
Recommended Video
'ಪೊಗರು' ಚಿತ್ರೀಕರಣ ಜಾಗಕ್ಕೆ ಬೆಂಕಿ ? ಚಿತ್ರತಂಡದ ಸ್ಪಷ್ಟನೆ | FILMIBEAT KANNADA
''ಪೊಗರು' ಚಿತ್ರೀಕರಣದ ಸೆಟ್ ಗೆ ಬೆಂಕಿ ಬಿದ್ದಿಲ್ಲ. ಬದಲಾಗಿ ಶೂಟಿಂಗ್ ಗಾಗಿಯೇ ಬೆಂಕಿ ಹಾಕಲಾಗಿತ್ತು.'' ಎಂದು ಚಿತ್ರತಂಡ ತಿಳಿಸಿದೆ. ಹೀಗಾಗಿ ಧ್ರುವ ಸರ್ಜಾ ಅಭಿಮಾನಿಗಳು ಭಯ ಪಡಬೇಕಾಗಿಲ್ಲ ಎಂದಿದೆ.
ಹೈದರಾಬಾದ್ ನಲ್ಲಿ 'ಪೊಗರು' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದು ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಆಗಿದೆ. ಇದೊಂದು ಸಾಹಸಮಯ ದೃಶ್ಯವಾಗಿದ್ದು, ಮಾರ್ಕೆಟ್ ನಲ್ಲಿ, ಬೆಂಕಿನ ನಡುವೆ ಈ ದೃಶ್ಯ ನಡೆಯುತ್ತದೆ. ಹೀಗಾಗಿಯೇ ಬೆಂಕಿಯ ನಡುವೆ ಚಿತ್ರೀಕರಣ ಮಾಡಲಾಗುತ್ತಿದೆ.

ಅಂದಹಾಗೆ, 'ಪೊಗರು' ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾವಾಗಿದೆ. ನಂದ ಕಿಶೋರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಧ್ರುವ ಸರ್ಜಾ ನಟನೆಯ ನಾಲ್ಕನೇ ಸಿನಿಮಾವಾಗಿದೆ.
ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎನ್ನುವುದು ಚಿತ್ರತಂಡದ ಆಸೆಯಾಗಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.
English summary
Fire accident didn't happen in Dhruva Sarja starring 'Pogaru' movie set.


Click it and Unblock the Notifications