ಸಂತೋಷದಲ್ಲಿದ್ದ ನಾಗ್ ಕುಟುಂಬಕ್ಕೆ ದುಃಖ; ಹೊತ್ತಿ ಉರಿದ ಸ್ಟುಡಿಯೋ.!
ನಟ ನಾಗಚೈತನ್ಯ ಮತ್ತು ಸಮಂತಾ ಮದುವೆಯ ನಂತರ ಹೈದರಾಬಾದ್ ನಲ್ಲಿ ಸಿನಿಮಾ ಕಲಾವಿದರಿಗಾಗಿ ಆರತಕ್ಷತೆ ಅಯೋಜಿಸಲಾಗಿತ್ತು. ಈ ಸಂತೋಷದಲ್ಲಿದ್ದ ಅಕ್ಕಿನೇನಿ ಕುಟುಂಬಕ್ಕೆ ಮರುದಿನವೇ ದೊಡ್ಡ ಶಾಕ್ ಎದುರಾಗಿದೆ.
ನಾಗಾರ್ಜುನ ಮಾಲಿಕತ್ವದ ಅನ್ನಪೂರ್ಣ ಸ್ಟುಡಿಯೋದಲ್ಲಿ ಬೆಂಕಿ ಅಪಘಾತ ಸಂಭವಿಸಿದ್ದು, ಇಡೀ ಸ್ಟುಡಿಯೋ ಸುಟ್ಟು ಭಸ್ಮವಾಗಿದೆ. ಇದರಿಂದ ಅಕ್ಕಿನೇನಿ ಕುಟುಂಬಕ್ಕೆ ದೊಡ್ಡ ನಷ್ಟವಾಗಿದೆ.
ಯಾವಾಗ ಈ ಅನಾಹುತ ನಡೆಯಿತು? ಎಷ್ಟು ಕೋಟಿ ನಷ್ಟವಾಯಿತು ಎಂಬ ಮಾಹಿತಿ ತಿಳಿಯಲು ಮುಂದೆ ಓದಿ.....

ಸಂಜೆ 6 ಗಂಟಗೆ ಘಟನೆ
ಸೋಮವಾರ ಸಂಜೆ 6.15 ಗಂಟೆಗೆ ಈ ಅವಘಡ ಸಂಭವಿಸಿದೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂಧಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟರು. ಆದ್ರೆ, ದಟ್ಟವಾಗಿ ಹಬ್ಬಿದ ಬೆಂಕಿಯಿಂದ ಇಡೀ ಸ್ಟುಡಿಯೋ ಸುಟ್ಟು ಕರಕಲಾಗಿದೆ.

ಅನಾಹುತಕ್ಕೆ ಕಾರಣವೇನು?
ಮೂಲಗಳ ಪ್ರಕಾರ ಶಾರ್ಟ್ ಸರ್ಕ್ಯೂಟ್ ನಿಂದ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಆದ್ರೆ, ನಿಖರವಾದ ಮಾಹಿತಿ ಹೊರಬಿದ್ದಿಲ್ಲ. ಇನ್ನು ಈ ಅವಘಡದಿಂದ ಎಷ್ಟು ನಷ್ಟವಾಗಿದೆ ಎಂಬುದರ ಬಗ್ಗೆ ಕೂಡ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಬೇಸರ ವ್ಯಕ್ತಪಡಿಸಿದ ನಾಗಾರ್ಜುನ ಕುಟುಂಬ
ಇತ್ತೀಚೆಗಷ್ಟೇ ನಾಗಚೈತನ್ಯ ಮತ್ತು ಸಮಂತಾ ಮದುವೆ ಮಾಡಿ ಮುಗಿಸಿದ್ದ ನಾಗಾರ್ಜುನ ಕುಟುಂಬಕ್ಕೆ ಈ ಅವಘಡ ಬೇಸರ ತರಿಸಿದೆ. ಆರತಕ್ಷತೆ ಸಂಭ್ರಮದಲ್ಲಿದ್ದ ನಾಗ್ ಫ್ಯಾಮಿಲಿಗೆ ಶಾಕ್ ನೀಡಿದೆ.

1975ರಲ್ಲಿ ಸ್ಥಾಪಿಸಿದ್ದ ಸ್ಟುಡಿಯೋ
ಅನ್ನಪೂರ್ಣ ಸ್ಟುಡಿಯೋ ದಕ್ಷಿಣ ಭಾರತದ ಹಳೆಯ ಸ್ಟುಡಿಯೋಗಳಲ್ಲಿ ಒಂದು. ಅಕ್ಕಿನೇನಿ ನಾಗೇಶ್ವರ್ ರಾವ್ ಅವರು 1975ರಲ್ಲಿ ಸ್ಥಾಪಸಿದ್ದರು. ಚಿತ್ರರಂಗಕ್ಕೆ ಸಂಬಂಧಿಸಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇಲ್ಲಿ ನಡೆಯುತ್ತಿತ್ತು.


Click it and Unblock the Notifications











